ರಕ್ತದಾನ ಮಾಡಿ ಉಚಿತ ಬಿರಿಯಾನಿ ತಿನ್ನಿ !
Team Udayavani, Feb 18, 2020, 10:44 AM IST
ಮಹಾನಗರ, ಫೆ. 17: ರಕ್ತದಾನ ಮಾಡಿದರೆ ಉಚಿತ ಬಿರಿಯಾನಿ ತಿನ್ನುವಸುವರ್ಣಾವಕಾಶ. ಹೀಗೊಂದು ಆಫರ್‌ನ್ನು ನಗರದ ಹೊಟೇಲೊಂದು ಗ್ರಾಹಕರ ಮುಂದಿಟ್ಟಿದೆ. ರಕ್ತದಾನಕ್ಕೆ ಪ್ರೇರೇಪಿಸುವುದೇ ಇದರ ಉದ್ದೇಶ.
ಲೈಟ್‌ಹೌಸ್ ಹಿಲ್ ರಸ್ತೆಯ ನಲಪ್ಪಾಡ್ ರೆಸಿಡೆನ್ಸಿಯಲ್ಲಿರುವ ಊಟದ ಮನೆಯಲ್ಲಿ ಗ್ರಾಹಕರಿಗೆ ಉಚಿತ ಬಿರಿಯಾನಿ ತಿನ್ನುವ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆ ಹೊಟೇಲ್ ಮುಂಭಾಗ ದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿ, ದಾಖಲೆಗಳನ್ನು ತರಬೇಕು. ಆಸ್ಪತ್ರೆಯಲ್ಲಿ ಬೆಳಗ್ಗೆ 8.30ರಿಂದ ಸಂಜೆ 5.30ರ ವರೆಗೆ ರಕ್ತದಾನಕ್ಕೆ ಅವಕಾಶವಿದ್ದು, ರಕ್ತದಾನಿಗಳಿಗೆ ಕೂಪನ್ ನೀಡಲಾಗುತ್ತದೆ. ಆ ಕೂಪನ್‌ನ್ನು ಹೊಟೇಲ್‌ನಲ್ಲಿ ತೋರಿಸಿದರೆ ಉಚಿತ ಬಿರಿಯಾನಿ ದೊರೆಯುತ್ತದೆ.
ಫೆ. 20ರ ವರೆಗೆ ಯೋಜನೆ ಈ ಯೋಜನೆಯನ್ನು 6 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಸುಮಾರು 30-40 ಮಂದಿ ರಕ್ತದಾನ ಮಾಡಿ ಬಿರಿಯಾನಿ ಸವಿಯುತ್ತಾರೆ. ಈ ಬಾರಿ ಫೆ. 12ರಿಂದಲೇ ಗ್ರಾಹಕರಿಗೆ ಈ ಯೋಜನೆಯನ್ನು ಪ್ರಕಟಿಸಲಾಗಿದ್ದು, ಫೆ. 20ರ ವರೆಗೆ ಮುಂದುವರಿಯಲಿದೆ. ಈ ಬಾರಿಯೂ ಸುಮಾರು 40 ಮಂದಿಯ ನಿರೀಕ್ಷೆ ಇದ್ದು, ಇಲ್ಲಿವರೆಗೆ 5ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿ ಬಿರಿಯಾನಿ ಸವಿದಿದ್ದಾರೆ ಎಂದು ಹೊಟೇಲ್‌ನ ಪ್ರಮುಖರಾದ ಅಬ್ದುಲ್ಲ ಮುಸ್ಬಾ ತಿಳಿಸಿದ್ದಾರೆ.
ರಕ್ತದಾನಕ್ಕೆ ಪ್ರೇರಣೆ ರಕ್ತದಾನದಿಂದ ಮಾನವ ಜೀವ ಉಳಿಸಬೇಕು ಎಂದು ಪ್ರೇರಣೆ ನೀಡುವ ಸಲುವಾಗಿ ಈ ಯೋಜನೆ ಪ್ರಕಟಿಸಲಾಗಿದೆ ಎನ್ನುತ್ತಾರೆ ಹೊಟೇಲ್‌ನ ಪ್ರಮುಖರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.