ತುರ್ತುಪರಿಸ್ಥಿತಿ ಜೈಲುವಾಸಿಗಳಿಗೆ ಸಿಗಲಿದೆ ಪಿಂಚಣಿ


Team Udayavani, Feb 19, 2020, 6:49 AM IST

skin-34

ಸಾಂದರ್ಭಿಕ ಚಿತ್ರ

ಉಡುಪಿ: ತುರ್ತುಪರಿಸ್ಥಿತಿಯಲ್ಲಿ (1975-77) ಜೈಲುವಾಸ ಅನುಭವಿಸಿದವರಿಗೆ ರಾಜ್ಯದಲ್ಲೂ ಪಿಂಚಣಿ ಸಿಗುವ ಸಾಧ್ಯತೆ ಇದೆ. ಇಂದಿರಾ ಗಾಂಧಿಯವರು 1975ರ ಜೂ. 26ರಂದು ಘೋಷಿಸಿದ ತುರ್ತುಪರಿಸ್ಥಿತಿ 1977ರ ಜ. 18ರಂದು ಚುನಾವಣೆ ಘೋಷಣೆ ಮಾಡಿದಾಗ ತಹಬಂದಿಗೆ ಬಂದಿತಾದರೂ ಅಧಿಕೃತವಾಗಿ ಮುಕ್ತಾಯಗೊಂಡದ್ದು 1977ರ ಮಾ.23 ರಂದು. ಕಳೆದ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ತುರ್ತುಪರಿಸ್ಥಿತಿ ಜೈಲುವಾಸಿಗಳಿಗೆ ಪಿಂಚಣಿ ಕೊಡುವುದಾಗಿ ಹೇಳಿತ್ತು. ಹಾಗಾಗಿ ಪ್ರಸ್ತಾವನೆಗೆ ಜೀವ ಬಂದಿದೆ.

ಇದಕ್ಕಾಗಿ ದೇಶ ಮಟ್ಟದಲ್ಲಿ ಲೋಕ ತಂತ್ರ ಸೇನಾನಿ ಸಂಘ/ ಲೋಕತಂತ್ರ ಸೇನಾನಿ ಕ್ರಿಯಾ ಸಮಿತಿ ಕಾರ್ಯಾಚರಿಸುತ್ತಿದೆ. ಕರ್ನಾಟಕದಲ್ಲೂ ಇರುವ ಇದರ ರಾಜ್ಯ ಸಮಿತಿಯವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಕೊಟ್ಟಾಗ “ಸದ್ಯ ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ಕೊಡುವುದು ಮೊದಲ ಕರ್ತವ್ಯ. ಬಳಿಕ ಪರಿಶೀಲಿಸೋಣ’ ಎಂದಿದ್ದರು. ಇದೇ ಬಜೆಟ್‌ನಲ್ಲಿ ಇದಕ್ಕೆ ಹಣಕಾಸು ಒದಗಿಸುವ ಸಾಧ್ಯತೆ ಇದೆ. ಉಡುಪಿಯಲ್ಲಿ 20, ದ.ಕ.ದಲ್ಲಿ 154 ಮಂದಿ ತುರ್ತುಪರಿಸ್ಥಿತಿ ಮುಗಿದು 43 ವರ್ಷಗಳು ಸಂದ ಕಾರಣ ಜೈಲಿಗೆ ಹೋದವರ ಪಟ್ಟಿ ತಯಾರಿಸುವುದೇ ಕಷ್ಟದ ಕೆಲಸವಾಗಿತ್ತು. ಅಂತಿಮ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯಿಂದ 20 ಮತ್ತು ದ.ಕ. ಜಿಲ್ಲೆಯಿಂದ 154 ಹೆಸರು ಸೇರಿವೆ. ರಾಜ್ಯದಲ್ಲಿ ಸುಮಾರು 4,500 ಮಂದಿಯ ಹೆಸರುಗಳಣ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇನ್ನಷ್ಟು ಹೆಸರುಗಳು ಸೇರಬಹುದು. ಒಂದು ಬಾರಿ ಜನರಿಗೆ ಗೊತ್ತಾದರೆ ಮತ್ತೆ ಹೆಸರು ಕೊಡಬಹುದು. ವಿಜಯಪುರ ಜಿಲ್ಲೆಯಿಂದ 300, ಬಾಗಲಕೋಟೆ ಜಿಲ್ಲೆಯಿಂದ 400, ದೊಡ್ಡಬಳ್ಳಾಪುರ ಒಂದು ತಾಲೂಕಿನಿಂದಲೇ 120 ಜನರ ಹೆಸರು ಸಿಕ್ಕಿದೆ ಎನ್ನುತ್ತಾರೆ ರಾಜ್ಯ ಸಂಘದ ಅಧ್ಯಕ್ಷ ಮಂಜುನಾಥ ಸ್ವಾಮಿಯವರು.

ಹಲವರು ಈಗಿಲ್ಲ
ರಾಜ್ಯದಲ್ಲಿ ಸುಮಾರು 9,000 ಜನರು ಜೈಲುವಾಸ ಅನುಭವಿಸಿದ್ದರು. ಅವರಲ್ಲಿ ಅರ್ಧಾಂಶ ಜನರು ನಿಧನ ಹೊಂದಿದ್ದರೆ, ಉಳಿದವರು ಒಂದೂರಿನಿಂದ ಇನ್ನೊಂದೂರಿಗೆ ಹೋಗಿದ್ದಾರೆ. ಉಡುಪಿಯ
ಡಾ| ವಿ.ಎಸ್‌. ಆಚಾರ್ಯ, ಅಮ್ಮುಂಜೆ ಲಕ್ಷ್ಮೀಕಾಂತ ನಾಯಕ್‌ ಈಗಾಗಲೇ, ದ.ಕ. ಜಿಲ್ಲೆಯ ಅಚ್ಯುತ ನಲ್ಲೂರಾಯ, ಗೋವಿಂದ ಭಟ್‌, ಎ.ಎಲ್‌.ಎನ್‌. ಶೆಣೈ ಮೊದಲಾದವರು ಇತ್ತೀಚೆಗೆ ನಿಧನ ಹೊಂದಿದ್ದು ಈಗ ಇರುವವರು ಕೆಲವೇ ಮಂದಿ. ಪಟ್ಟಿ ತಯಾರಿಸುವಾಗ ಕೆಲವರು “ನಮಗೆ ಪಿಂಚಣಿ ಬೇಡ. ನಾವು ಅನ್ಯಾಯ, ಅಸತ್ಯದ ವಿರುದ್ಧ ಹೋರಾಡಿದ್ದು’ ಎಂದು ಹೇಳಿದ್ದಾರೆ. “ನಿಮಗೆ ಬೇಡವಾದರೆ ಅಗತ್ಯವುಳ್ಳವರಿಗೆ ಈ ಹಣ ಕೊಡಿ’ ಎಂದು ಸಮಿತಿಯವರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಪಿಂಚಣಿ ಯೋಜನೆ ಪ್ರಸ್ತಾವ ದಲ್ಲಿರುವಾಗಲೇ ಕಮ್ಯುನಿಸ್ಟ್‌ ಆಡಳಿತವಿರುವ ಕೇರಳದಲ್ಲೂ ಇಂಥದ್ದೇ ಪ್ರಸ್ತಾವವಿದೆ. ಆದರೆ ಅದು ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದಿದ್ದು, ಕೇರಳದಲ್ಲಿ ಜೈಲುವಾಸ ಅನುಭವಿಸಿದವರು ಮೃತಪಟ್ಟಿದ್ದರೆ ಪತಿ/ಪತ್ನಿಗೆ ಪಿಂಚಣಿ ಸಿಗುವ ಪ್ರಸ್ತಾವನೆ ಇದೆ.

ಮುಲಾಯಂರಿಂದ ಆರಂಭ, ಪಿಣರಾಯಿ ಪ್ರಸ್ತಾವ
ತುರ್ತುಪರಿಸ್ಥಿತಿಯ ಜೈಲುವಾಸಿಗಳಿಗೆ ಪಿಂಚಣಿ ಪ್ರಸ್ತಾವ ಕೇಳಿಬರುತ್ತಲೇ ಇದು ಆರೆಸ್ಸೆಸ್‌, ಬಿಜೆಪಿಯವರ ಪ್ರಯತ್ನ ಎಂಬ ಚಿತ್ರಣ ಕಣ್ಣೆದುರು ಬರುವುದು ಸಹಜ. ಆದರೆ ಇದನ್ನು ಆರಂಭಿಸಿದ್ದೇ ಆರೆಸ್ಸೆಸ್‌, ಬಿಜೆಪಿಯ ಕಟ್ಟಾ ವಿರೋಧಿಯಾಗಿದ್ದ ಮುಲಾಯಂ ಸಿಂಗ್‌ ಯಾದವ್‌; 2005ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದರು. ಆಗ ಆರಂಭಿಕ ಪಿಂಚಣಿ ಮೊತ್ತ ಮಾಸಿಕ 10,000 ರೂ. ಅನಂತರ ಅವರ ಮಗ ಇದನ್ನು ಏರಿಸಿದರು. ಈಗ 12,000 ರೂ. ಸಿಗುತ್ತಿದೆ. ಬಳಿಕ ಮಧ್ಯಪ್ರದೇಶ, ಝಾರ್ಖಂಡ್‌, ರಾಜಸ್ಥಾನ, ಹಿಮಾಚಲಪ್ರದೇಶ, ಬಿಹಾರ, ಪಂಜಾಬ್‌, ಛತ್ತೀಸ್‌ಗಢ, ಉತ್ತರಾಂಚಲ, ಮಹಾರಾಷ್ಟ್ರ ಮೊದಲಾದ 13 ರಾಜ್ಯಗಳಲ್ಲಿ ಆರಂಭಗೊಂಡಿತು. ಇತ್ತೀಚಿಗೆ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಸರಕಾರ ಬದಲಾದಾಗ ಪಿಂಚಣಿ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಛತ್ತೀಸ್‌ಗಢದಲ್ಲಿ 25,000 ರೂ., ಗುಜರಾತಿನಲ್ಲಿ 12,000 ರೂ., ಬಿಹಾರ, ಝಾರ್ಖಂಡ್‌ನ‌ಲ್ಲಿ 5,000 ರೂ., ಮಹಾರಾಷ್ಟ್ರದಲ್ಲಿ 10,000 ರೂ. ದೊರೆಯುತ್ತಿದೆ. ಕರ್ನಾಟಕದಲ್ಲಿ ಕನಿಷ್ಠ 10,000 ರೂ. ಪಿಂಚಣಿ ನೀಡಲು ಬೇಡಿಕೆ ಸಲ್ಲಿಸಲಾಗಿದೆ.

ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಎಲ್ಲರಿಗೂ ಪಿಂಚಣಿ ಸಿಗಬೇಕು. ಅವರಿಗೆಲ್ಲ ಈಗ 60 ವರ್ಷ ದಾಟಿದೆ. ಎಷ್ಟೋ ಜನರಿಗೆ ವೃದ್ಧಾಪ್ಯದಲ್ಲಿ ಔಷಧಕ್ಕೂ ಹಣವಿಲ್ಲ. ಅಂತಹ ಅರ್ಹರಿಗೆ ಸಿಗಲೇಬೇಕು. ನಾವು ಪಟ್ಟಿ ಸಲ್ಲಿಸಿದ್ದೇವೆ. ಆಗ ಜೈಲುವಾಸ ಅನುಭವಿಸಿದವರ ತಂಡವನ್ನು ಸರಕಾರ ರಚಿಸಿ ಆ ಸಮಿತಿ ಪಿಂಚಣಿಗೆ ಅರ್ಹರಾದವರ ಹೆಸರುಗಳನ್ನು ಶಿಫಾರಸು ಮಾಡಬಹುದು ಎಂದು ಸಲಹೆ ಕೊಟ್ಟಿದ್ದೇವೆ.
– ಮಂಜುನಾಥಸ್ವಾಮಿ, ಅಧ್ಯಕ್ಷರು, ಕರ್ನಾಟಕ ಲೋಕತಂತ್ರ ಸೇನಾನಿ ಸಂಘ, ಬೆಂಗಳೂರು

ನಾವು ಜಿಲ್ಲಾವಾರು ಮಾಹಿತಿ ಕೊಟ್ಟಿದ್ದೇವೆ. ಕೆಲವರು ಪಿಂಚಣಿಗಾಗಿ ಹೋರಾಟ ಮಾಡಿದ್ದಲ್ಲ, ಪಿಂಚಣಿ ಬೇಡವೆನ್ನುತ್ತಿದ್ದಾರೆ. ಬೇಡವಾದವರು ಯಾರಿಗೂ ದಾನ ಕೊಡಬಹುದು. ಕಷ್ಟದಲ್ಲಿರುವವರಿಗೆ ಪಿಂಚಣಿ ಸಿಗಬೇಕೆಂಬುದು ನಮ್ಮ ಆಶಯ.
– ನಾರಾಯಣ ಗಟ್ಟಿ, ರಾಜ್ಯ ಉಪಾಧ್ಯಕ್ಷರು, ಮಂಗಳೂರು,
– ಚಂದ್ರಶೇಖರ್‌, ಜಿಲ್ಲಾ ಕಾರ್ಯದರ್ಶಿ, ಉಡುಪಿ, ಲೋಕತಂತ್ರ ಸೇನಾನಿ ಸಂಘ

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.