ಯರಮರಸ್‌ನಿಂದ 4 ಸಾವಿರ ಕೋಟಿ ಹೊರೆ
ನಿಗದಿತ ಕಾಲಮಿತಿಯಲ್ಲಿ ಮುಗಿಯದ ಯೋಜನೆ
Team Udayavani, Feb 19, 2020, 7:15 AM IST
ಬೆಂಗಳೂರು: ರಾಯಚೂರಿನ ವಿದ್ಯುತ್ ನಿಗಮ ನಿಯಮಿತ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಕಾಮಗಾರಿಯ ಯೋಜನಾ ಅವಧಿ ಹೆಚ್ಚಳದಿಂದ ನಾಲ್ಕು ಸಾವಿರ ಕೋಟಿ ರೂ. ಹೊರೆಯಾಗಿರುವುದು ಭಾರತದ ಮಹಾಲೇಖಪಾಲ(ಸಿಎಜಿ)ರ ವರದಿಯಲ್ಲಿ ಬೆಳಕಿಗೆ ಬಂದಿದೆ.
ಜತೆಗೆ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮ ವತಿಯಿಂದ ಕೈಗೊಂಡಿದ್ದ ತ್ವರಿತಗೊಳಿಸಲ್ಪಟ್ಟ ನೀರಾವರಿ ಪ್ರಯೋಜನ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ತಲುಪದ ಕಾರಣ ರಾಜ್ಯವು ಕೇಂದ್ರದ 821.86 ಕೋಟಿ ರೂ. ಸಹಾಯಧನದಿಂದ ವಂಚಿತಗೊಂಡಿರುವುದನ್ನೂ ಸಿಎ ಜಿ ವರದಿ ಉಲ್ಲೇಖೀಸಿದೆ. ಮಂಗಳವಾರ ವಿಧಾನಸಭೆಯಲ್ಲಿ ಸಿಎಜಿ ವರದಿ ಮಂಡಿಸಿದ್ದು, ಇದೇ ಸಂಬಂಧ ಆರ್ಥಿಕ ಮತ್ತು ರಾಜಸ್ವ ವಲಯದ ಲೆಕ್ಕ ಪರಿಶೋಧನೆ ಮಹಾಲೇಖಪಾಲರಾದ ಅನೂಪ್ ಫ್ರಾನ್ಸಿಸ್ ಡುಂಗ್ ಡುಂಗ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಯರಮರಸ್ ಕಾಮಗಾರಿ
ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಕಾಮಗಾರಿಗೆ 2008ರಲ್ಲಿ ಚಾಲನೆ ನೀಡಲಾಗಿತ್ತು. 800 ಮೆಗಾವ್ಯಾಟ್‌ನ ಎರಡು ಘಟಕಗಳ ನಿರ್ಮಾಣದ ಹೊಣೆ ಯನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ಗೆ ನೀಡ ಲಾಗಿತ್ತು. ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣ ಗೊಳಿಸದ ಹಿನ್ನೆಲೆಯಲ್ಲಿ ಯೋಜನಾ ಮೊತ್ತ 8,806 ಕೋಟಿ ರೂ.ಗಳಿಂದ 12,915 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ.
ಇದರಿಂದ 2014-15ರಿಂದ 2017-18ರ ಅವಧಿಯಲ್ಲಿ ಖಾಸಗಿ ವಿದ್ಯುತ್ ಉತ್ಪಾದಕರಿಂದ ಖರೀದಿಸಲಾದ 22,283 ದಶಲಕ್ಷ ಯೂನಿಟ್‌ಗಳಿಗೆ 2,517 ಕೋಟಿ ರೂ. ಹೆಚ್ಚಳವಾಗಿ ಭರಿಸಬೇಕಾಯಿತು.
ವಿದ್ಯುತ್ ಉದ್ದಿಮೆಗಳಿಗೆ ನಷ್ಟ
ರಾಜ್ಯದ ವಿದ್ಯುತ್ ವಲಯಕ್ಕೆ ಸಂಬಂಧಿಸಿದಂತೆ 11 ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆರು ಉದ್ದಿಮೆಗಳು ಮಾತ್ರ ಲಾಭದಲ್ಲಿದ್ದು, ಉಳಿದ ಐದು ಉದ್ದಿಮೆಗಳು ನಷ್ಟದಲ್ಲಿವೆ. ಅದೇ ರೀತಿ ವಿದ್ಯುತ್ ವಲಯ ಹೊರತುಪಡಿಸಿದ 84 ಸಾರ್ವಜನಿಕ ವಲಯದ ಉದ್ದಿಮೆಗಳ ಪೈಕಿ ಕೇವಲ 45 ಉದ್ದಿಮೆಗಳು ಲಾಭದಲ್ಲಿದ್ದು, 25 ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.