ಪ್ಲೇಕಾರ್ಡ್ ನೇತು ಹಾಕಿಕೊಂಡು ಪ್ರತಿಭಟನೆ
Team Udayavani, Feb 19, 2020, 5:26 PM IST
ನೆಲಮಂಗಲ : ಕಂದಾಯ ಇಲಾಖೆಯಲ್ಲಿ ತಮ್ಮ ಜಮೀನು ದಾಖಲೆ ಸರಿಪಡಿಸಿ ಕೊಡುವಂತೆ ಒಂದೂವರೆ ವರ್ಷಗಳಿಂದ ಕಚೇರಿಗೆ ಅಲೆದಾಡಿದರೂ, ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿ, ಶಶಿಧರ್ ಕೊರವಿ ಎನ್ನುವವರು ಪ್ಲೇ ಕಾರ್ಡ್ ಹಾಕಿಕೊಂಡು ತಾಲೂಕು ಕಚೇರಿ ಎದುರು ವಿನೂತನವಾಗಿ ಪ್ರತಿಭಟಿಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಬೆಳ್ಳಗ್ಗೆ 9.30ಕ್ಕೆ ಆಗಮಿಸಿದ ಹುಬ್ಬಳ್ಳಿ ಮೂಲದ ಶಶಿಧರ್ ಕೊರವಿ ನ್ಯಾಯಕೊಡಿ, ಅಧಿಕಾರಿಗಳನ್ನು ವಜಾಗೊಳಿಸಿ ಎಂದು ಪ್ಲೇಕಾರ್ಡ್‌ಗಳನ್ನು ನೇತುಹಾಕಿಕೊಂಡು, ಬಾಯಿಗೆ ಬಟ್ಟೆಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡಿದರು.
ಪ್ರತಿಭಟನೆಗೆ ಕಾರಣ : ತಾಲೂಕಿನ ಟಿ.ಬೇಗೂರು ಸಮೀಪದ ಅರಳಸಂದ್ರ ಗ್ರಾಮದ ಶಶಿಧರ್ ಕೊರವಿ ಒಡೆತನದ ಸರ್ವೆ ನಂ 12/2 ಹಾಗೂ 13/1ರ ಜಮೀನನ್ನು ಮಾರಾಟ ಮಾಡಲಾಗಿದ್ದು , ಪಹಣಿಯಲ್ಲಿ ಪ್ರತ್ಯೇಕ ಹೆಸರು ನಮೂದಿಸಿರುವುದಿಲ್ಲ. ಇದರಿಂದಮಾರಾಟ ಮಾಡಿರುವ ಜಮೀನಿನ ವಿಸ್ತೀರ್ಣಕ್ಕೆ ತಕ್ಕಂತೆ ಅವರುಗಳ ಹೆಸರು ಪ್ರತ್ಯೇಕ ಪಹಣಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ 100ಕ್ಕೂ ಹೆಚ್ಚು ಭಾರಿ ಕಚೇರಿಗೆ ಅಲೆದರೂ, ಈವರೆಗೂ ಪಹಣಿ ಮಾಡಿಕೊಟ್ಟಿಲ್ಲ .
ಮೇಲಾಧಿಕಾರಿಗಳ ಆದೇಶಕ್ಕೆ ಕಿಮ್ಮಕಿಲ್ಲ ಶಶಿಧರ್ ಕೊರವಿಯವರ ಜಮೀನು ದಾಖಲಾತಿ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂದಾಖಲೆಗಳ ಉಪನಿರ್ದೇಶಕ ವಿಜಯ ಭವಾನಿಯವರು ತಹಶೀಲ್ದಾರರಿಗೆ 2019ರ ಜನವರಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೂ, ದಾಖಲಾತಿ ನೀಡುವಲ್ಲಿ ಅಧಿಕಾರಿಗಳುಮುಂದಾಗಿಲ್ಲ. ಈಗಾಗಲೇ ಕಂದಾಯ ಸಚಿವರಿಗೂ ಹಾಗೂ ಡಿಸಿಯವರಿಗೆ ಶಶಿಧರ್ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು
Bengaluru: ದೆಹಲಿಯ ನೇಲ್ ಆರ್ಟಿಸ್ಟ್ ನೇಣಿಗೆ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.