ಶಾಲೆ ಭವಿಷ್ಯ ರೂಪಿಸುವ ದೇಗುಲ
ದಾನಿಗಳ ಸಹಾಯದಿಂದ ಸರ್ಕಾರಿ ಶಾಲೆಗೆ ಸೌಲಭ್ಯ ಕಲ್ಪಿಸಿ
Team Udayavani, Feb 19, 2020, 5:41 PM IST
ಹೊನ್ನಾಳಿ: ಶಾಲೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದೇಗುಲಗಳಿದ್ದಂತೆ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿ ಕೊಡುವುದು ಸಮುದಾಯದ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಬಿಆರ್‌ಸಿ ಎಚ್.ಎಸ್. ಉಮಾಶಂಕರ್ ಹೇಳಿದರು
ತಾಲೂಕಿನ ಜೀನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಮುಖಂಡರ ಸಹಕಾರದಿಂದ ಡಿಜಿಟಲ್ ಗಣಿತ ಪ್ರಯೋಗಾಲಯ (ಗಣಿತ ವಿಷಯ ಸ್ಮಾರ್ಟ ಕ್ಲಾಸ್) ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯದಲ್ಲಿನ ದಾನಿಗಳನ್ನು ಬಳಸಿಕೊಂಡು ಶಾಲೆಗೆ ಅಗತ್ಯ
ಸೌಲಭ್ಯಗಳನ್ನು ಪಡೆದು ಗ್ರಾಮೀಣ ಮಕ್ಕಳಿಗೂ ನಗರ, ಪಟ್ಟಣಗಳಿಗೆ ಸಿಮೀತವಾಗಿರುವ ಆಧುನಿಕ ಪಾಠ ಬೋಧನಾ ತಂತ್ರಜ್ಞಾನಗಳನ್ನು ಒದಗಿಸಿಕೊಡುವ ಮೂಲಕ ಅವರೂ ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವಂತೆ ಮಾಡುವಲ್ಲಿ ಈ ಶಾಲೆಯ ಶಿಕ್ಷಕ ವರ್ಗ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕೆಲವಾರು ಸಂದರ್ಭದಲ್ಲಿ ವಿದ್ಯಾದಾನ, ರಕ್ತದಾನ, ಅನ್ನದಾನ ಶ್ರೇಷ್ಠ ಎಂದು ಹೇಳಲಾಗುತ್ತದೆ. ಆದರೆ ವಾಸ್ತವಿಕವಾಗಿ ಎಲ್ಲಾ ದಾನಗಳೂ ಕೂಡ ಶ್ರೇಷ್ಠವಾಗಿರುತ್ತವೆ ಎಂದು ಹೇಳಿದರು.
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಮಹಾಂತೇಶ್ ಪ್ರಸ್ತಾವಿಕವಾಗಿ ಮಾತನಾಡಿ, ಇಚ್ಛಾಶಕ್ತಿಯಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಶಾಲೆಯೇ ಸಾಕ್ಷಿಯಾಗಿದ್ದು, ಈಗಾಗಲೇ ಈ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಸುಮಾರು 1.70 ಲಕ್ಷ ರೂ. ವೆಚ್ಚದಲ್ಲಿ ಕರ್ನಾಟಕ ರಾಜ್ಯದಲ್ಲೇ 2 ನೇ ಸ್ಥಾನದಲ್ಲಿರುವ ಅತ್ಯಾಧುನಿಕ ಸಮಾಜ ವಿಜ್ಞಾನ ಡಿಜಿಟಲ್ ಪ್ರಯೋಗಾಲಯ ಕೆಲಸ ನಿರ್ವಹಿಸುತ್ತಿದ್ದು, ಜೊತೆಗೆ ಇದೀಗ ಗಣಿತ ಡಿಜಿಟಲ್ ಪ್ರಯೋಗಾಲಯ ಆರಂಭಗೊಳ್ಳುತ್ತಿದೆ. ಒಂದು ಕಾಲದಲ್ಲಿ ಕೇವಲ ಶೇ.45ರಷ್ಟು ಫಲಿತಾಂಶ ಪಡೆಯುತ್ತಿದ್ದ ಈ ಶಾಲೆ ಇಂದು ಶೇ.97ರಷ್ಟು ಫಲಿತಾಂಶ ಪಡೆದಿದ್ದು ಈ ವರ್ಷ ಇದಕ್ಕೂ ಹೆಚ್ಚಿನ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಇದೀಗ ವೈದ್ಯಕೀಯ ಹಾಗೂ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನೇತ್ರ ತಜ್ಞ ಡಾ| ಸಿದ್ದನಗೌಡ, ಚರ್ಮರೋಗ ತಜ್ಞ ಡಾ. ಭರತ್‌ರಾಜ್ ಹಾಗೂ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಿ.ಎನ್.ಬಸವರಾಜ್ ತಮ್ಮ ಅನುಭವ ಹಂಚಿಕೊಂಡರು.
ಬಿಇಒ ಜಿ.ಇ.ರಾಜೀವ್ ಹಾಗೂ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಗಣಿತ ವಿಷಯ ಶಿಕ್ಷಕ ಚಂದ್ರಶೇಖರ್ ಮಾತನಾಡಿದರು.
ನಿವೃತ್ತ ಶಿಕ್ಷಕ ಎಸ್.ಕೆ. ಶಿವಪ್ಪ, ಪ್ರೊ| ಎ.ಕೆ. ಶಾಂತನಗೌಡ, ಎಸ್‌ಡಿಎಂಸಿಅಧ್ಯಕ್ಷ ಚನ್ನೇಶ್, ಮಾಜಿ ಅಧ್ಯಕ್ಷ ದಾನಪ್ಪ, ಸದಸ್ಯರಾದ ಚಂದ್ರೇಗೌಡ, ದೇವರಾಜ್, ಗ್ರಾಮದ ಮುಖಂಡ ಪಂಚಣ್ಣ, ಎನ್‌ಜಿಒ ಸಿದ್ದೇಶ್ ಜಿಗಣಿ, ಬಸವರಾಜಪ್ಪ, ಗಣಿತ ವಿಷಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ್, ಸಮಾಜ ವಿಜ್ಞಾನ ಶಿಕ್ಷಕ ಡಿ.ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.