ವಿಕಾಸವಾದ ಸಿದ್ಧಾಂತದ ಪ್ರತಿಪಾದಕ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್
ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!
Team Udayavani, Feb 20, 2020, 4:12 AM IST
ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…
1. ಮಂಗನಿಂದ ಮಾನವ “ವಿಕಾಸವಾದ ಸಿದ್ಧಾಂತ’ವನ್ನು ಪ್ರತಿಪಾದಿಸಿದ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಹುಟ್ಟಿದ್ದು 1809ರ ಫೆಬ್ರವರಿ 12ರಂದು.
2. ಅವರು ಹುಟ್ಟಿದ ದಿನವನ್ನೇ “ಡಾರ್ವಿನ್ ದಿನ’ವನ್ನಾಗಿ ಆಚರಿಸಲಾಗುತ್ತದೆ.
3. ಭೂಮಿ ಮೇಲಿನ ಪ್ರತಿಯೊಂದು ಜೀವಿಯೂ ಅನೇಕ ರೂಪಾಂತರಗಳಿಗೆ ಒಳಗಾಗಿದೆ ಎಂಬುದರ ಬಗ್ಗೆ “ಆನ್ ದಿ ಒರಿಜಿನ್ ಆಫ್ ಸ್ಪೀಶಿಸ್’ ಪುಸ್ತಕದಲ್ಲಿ ಡಾರ್ವಿನ್ ಸವಿಸ್ತಾರವಾಗಿ ದಾಖಲಿಸಿದ್ದಾರೆ.
4. ಆ ಪುಸ್ತಕ ರಚನೆಗೂ ಮುನ್ನ ಡಾರ್ವಿನ್, ಹಡಗಿನಲ್ಲಿ ಐದು ವರ್ಷಗಳ ಕಾಲ ವಿಶ್ವ ಪರ್ಯಟನೆ ಮಾಡಿ, ವಿಷಯ ಸಂಗ್ರಹಿಸಿದ್ದರು.
5. ತನ್ನ ಸಿದ್ಧಾಂತದ ಬಗ್ಗೆ ನಂಬಿಕೆ ಇದ್ದರೂ, ಜಗತ್ತು ಅದನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಭಯವಿದ್ದ ಕಾರಣ, ಎರಡು ದಶಕಗಳ ಕಾಲ ಆ ಪುಸ್ತಕ ಪ್ರಕಟಣೆಗೆ ಮುಂದಾಗಿರಲಿಲ್ಲ.
6. ಮತ್ತೂಬ್ಬ ವಿಜ್ಞಾನಿ ಇದೇ ರೀತಿಯ ಸಿದ್ಧಾಂತವನ್ನು ಅಭಿವೃದ್ಧಿಪಡಿಸುತ್ತಿ¨ªಾರೆ ಎಂದು ತಿಳಿದಾಗ, ಡಾರ್ವಿನ್ ತಮ್ಮ ಪುಸ್ತಕ ಬಿಡುಗಡೆಗೆ ನಿರ್ಧರಿಸಿದರು.
7. ಧರ್ಮದ ಕುರಿತು ನಂಬಿಕೆ ಕಳೆದುಕೊಂಡಿದ್ದರೂ ಚಾರ್ಲ್ಸ್ ಡಾರ್ವಿನ್ ಎಂದಿಗೂ ತಾನೊಬ್ಬ ನಾಸ್ತಿಕ ಎಂದು ಹೇಳಿಕೊಳ್ಳಲಿಲ್ಲ.
8. ಯಶಸ್ವಿ ವೈದ್ಯರಾಗಿದ್ದ ಡಾರ್ವಿನ್‌ರ ತಂದೆ, ಮಗನೂ ತನ್ನಂತೆಯೇ ವೈದ್ಯನಾಗಲಿ ಎಂದು ಬಯಸಿದ್ದರು. ಆದರೆ, ಡಾರ್ವಿನ್‌ಗೆ ರಕ್ತವನ್ನು ನೋಡಲಾಗದೆ ಅರ್ಧಕ್ಕೇ ವೈದ್ಯಶಿಕ್ಷಣವನ್ನು ಮೊಟಕುಗೊಳಿಸಿದರು.
9. ಡಾರ್ವಿನ್ ಜೊತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಇಂಗ್ಲೆಂಡ್‌ನ ಚರ್ಚ್‌ವೊಂದು, 125 ವರ್ಷಗಳ ನಂತರ ಡಾರ್ವಿನ್ ಕ್ಷಮೆ ಕೋರಿ ಪತ್ರ ಬಿಡುಗಡೆ ಮಾಡಿತ್ತು.
10. ಮದುವೆಗೂ ಮುನ್ನ, ವೈವಾಹಿಕ ಜೀವನದ ಸಾಧಕ- ಬಾಧಕಗಳ ಪಟ್ಟಿ ತಯಾರಿಸಿ, ನಂತರ ಹತ್ತಿರದ ಸಂಬಂಧಿ ಎಮ್ಮಾ ಎಂಬಾಕೆಯನ್ನು ವಿವಾಹವಾದರು.
ಸಂಗ್ರಹ ಪ್ರಿಯಾಂಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.