ಶಿವಾಜಿ ಇಲ್ಲದಿದ್ದರೆ ಭಾರತ ಮತ್ತೊಂದು ಪಾಕ್ ಆಗಿರುತ್ತಿತ್ತು: ಸಚಿವ ಸಿ.ಟಿ.ರವಿ
Team Udayavani, Feb 19, 2020, 9:00 PM IST
ಬೆಂಗಳೂರು: ಹಿಂದೂ ಸಾಮ್ರಾಜ್ಯದ ಸ್ಥಾಪನೆಗಾಗಿ ಛತ್ರಪತಿ ಶಿವಾಜಿ ಹೋರಾಟ ಪ್ರಾರಂಭಿಸದೇ ಹೋಗಿದ್ದರೆ, ಭಾರತ ಇಂದು ಮತ್ತೊಂದು ಪಾಕಿಸ್ತಾನವಾಗಿರುತ್ತಿತ್ತು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಸ್ತವಾಂಶ ಮಾತನಾಡಿದರೆ ಪ್ರಚೋದನೆ ನೀಡಿದಂತಾಗುವುದಿಲ್ಲ. ಛತ್ರಪತಿ ಶಿವಾಜಿ ಜನ್ಮವೇ ತಾಳದಿದ್ದರೆ, ಇಂದು ನಮ್ಮ ತಾಯಂದಿರ ಹಣೆಯ ಮೇಲೆ ಕುಂಕುಮ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಕೆಲವರು ಉದ್ದೇಶಪೂರ್ವಕವಾಗಿ, ಇನ್ನು ಕೆಲವರು ತಿಳಿವಳಿಕೆ ಇಲ್ಲದೆ ಇತಿಹಾಸದಲ್ಲಿ ಶಿವಾಜಿಯ ಸಾಧನೆಗಳ ಬಗ್ಗೆ ಉಲ್ಲೇಖೀಸಿಲ್ಲ. ಹಿಂದೂ ಎನ್ನುವ ಭಾವನೆ ಎಲ್ಲರಲ್ಲೂ ಇದ್ದರೆ ದೇಶ ಉಳಿಯುವುದಕ್ಕೆ ನೆರವಾಗಲಿದೆ. ಆದರೆ, ನಾವೆಲ್ಲ ಒಂದು ನಾವೆಲ್ಲ ಹಿಂದೂ ಎನ್ನುವ ಭಾವನೆ ಬಲಗೊಳ್ಳಬೇಕು.ಯಾವುದೇ ಪಕ್ಷಕ್ಕೆ ಬೇಕಾದರೂ ಮತ ಹಾಕಿಕೊಳ್ಳಿ. ಹಿಂದೂ ಎನ್ನುವ ಭಾವನೆ ಬೆಳಸಿಕೊಳ್ಳಿ. ಕೆಲವರಿಗೆ ಭಗವಧ್ವಜ ಪ್ರೇರಣೆ ಇನ್ನೂ ಕೆಲವರಿಗೆ ಪ್ರಚೋದನೆ ಮಾಡಿದಂತಾಗುತ್ತದೆ. ಅವರವರ ಭಾವಕ್ಕೆ ಸಂಬಂಧಿಸಿದ್ದು ಎಂದರು.
ಶಿವಾಜಿಯನ್ನು ಒಂದು ಪ್ರದೇಶಕ್ಕೆ, ಜಾತಿಗೆ ಹಾಗೂ ಭಾಷೆಗೆ ಸೀಮಿತ ಮಾಡುವುದು ಅವರಿಗೆ ಮಾಡುವ ಅವಮಾನ. ಅದೇ ರೀತಿ ಶಿವಾಜಿಯನ್ನು ಗಡಿ ವಿವಾದದೊಂಗೆ ತಳಕು ಹಾಕುವ ಹುನ್ನಾರವೂ ನಡೆಯುತ್ತಿದೆ. ಇದು ಶೋಭೆ ತರುವ ವಿಚಾರವಲ್ಲ. ದೇಶಕ್ಕೆ ಯಾವುದೇ ಕೊಡುಗೆ ನೀಡದವರ ಜಯಂತಿಯನ್ನು ವಿಧಾನಸೌಧದ ಸಭಾಂಗಣದಲ್ಲಿ ಆಚರಣೆ ಮಾಡಲಾಗಿದೆ. ದೇಶಕ್ಕೆ ಸೇವೆ ನೀಡಿರುವ ಶಿವಾಜಿ ಅವರ ಜಯಂತಿ ವಿಧಾನಸೌಧದಲ್ಲಿ ಆಚರಣೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಈ ಬಾರಿ ಅಧಿವೇಶನ ಇರುವುದರಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಜವಳಿ ಮತ್ತು ಕೈಮಗ್ಗ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಬಲಾಡ್ಯರ ವಿರುದ್ಧ ಯಾರೂ ಮಾತನಾಡದ ಸಂದರ್ಭದಲ್ಲಿ ಶಿವಾಜಿ ಅವರು ಹಿಂದೂ ಸಾಮ್ರಾಜ್ಯ ಉಳಿವಿಗೆ ಶ್ರಮಿಸಿದರು. ಅಪ್ಪಟ ದೇಶ ಪ್ರೇಮಿಯಾಗಿದ್ದ ಶಿವಾಜಿ ಯಾವುದೇ ಒಂದು ಜಾತಿಗೆ ಸೀಮಿತ ಆಗಿರಲಿಲ್ಲ ಎಂದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಆಡಳಿತ ಅಧ್ಯಕ್ಷ ವಿ.ಎ.ಎ.ರಾಣೋಜಿರಾವ್ ಸಾಠೆ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ಮೂಲಕ, ಜನಾಂಗದ ಏಳಿಗೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ಮರಾಠ ಸಮುದಾಯ ಅಭಿವೃದ್ಧಿಗೆ ಮೀಸಲಾತಿ, 100 ಕೋಟಿ ರೂ.ಅನುದಾನ, ಪ್ರತ್ಯೇಕ ನಿಗಮ ಮಂಡಳಿ ಹಾಗೂ ಸಮುದಾಯವನ್ನು 3ಬಿ ಪ್ರವರ್ಗದಿಂದ 2ಗೆ ಸೇರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಟಿ.ರವಿ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋಸಾಯಿ ಮಹಾ ಸಂಸ್ಥಾನಮಠ ಭವಾನಿಪೀಠದ ಮಂಜುನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಎಸ್.ಸುರೇಶ್‌ರಾವ್ ಸಾಠೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಹಾಗೂ ಕಾರ್ಯದರ್ಶಿ ಆರ್.ಆರ್.ಜನ್ನು ಮತ್ತಿತರರು ಹಾಜರಿದ್ದರು.
ಕನ್ನಡ ಸಚಿವನಿಂದ ಮರಾಠೀ ಭಾಷಣ!
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಜವಳಿ ಮತ್ತು ಕೈಮಗ್ಗ ಸಚಿವ ಶ್ರೀಮಂತ ಪಾಟೀಲ, ಮರಾಠಿಯಲ್ಲೇ ಭಾಷಣ ಮಾಡಿದರು. ಭಾಷಣ ಪ್ರಾರಂಭಿಸುವುದಕ್ಕೂ ಮುನ್ನ ಇಲ್ಲಿ ಎಲ್ಲರಿಗೂ ಮರಾಠಿ ಬರುತ್ತದೆ ತಾನೇ ಎಂದು ಮರಾಠಿಯಲ್ಲಿ ಪ್ರಶ್ನೆ ಮಾಡಿದ ಸಚಿವರು, ಬೆರಳೆಣಿಕೆಯ ಜನ ಕೈ ಎತ್ತಿದರೂ ಮರಾಠಿಯಲ್ಲೇ ಭಾಷಣ ಮುಂದುವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.