ಕನಿಷ್ಠ ನೂರು ದಾಟದ ಬೆಲೆ ; ಸಂಕಷ್ಟದಲ್ಲಿ ಬೆಳೆಗಾರರು
ಹೆಮ್ಮಾಡಿ ಸೇವಂತಿಗೆಗೆ ಮೋಡ, ನುಸಿ ಬಾಧೆ
Team Udayavani, Feb 20, 2020, 5:26 AM IST
ಹೆಮ್ಮಾಡಿ: ನಿರೀಕ್ಷಿತ ಸಮಯ ದಲ್ಲಿ ಬೆಳೆಗಾರರ ಕೈಗೆ ಸಿಗದೆ, ಮೋಡ, ಕೀಟ ಬಾಧೆಯಿಂದಾಗಿ ಹೆಮ್ಮಾಡಿ ಸೇವಂತಿಗೆ ಬೆಳೆಗಾರರು ಈ ಬಾರಿ ಭಾರೀ ಸಂಕಷ್ಟ ಆನುಭವಿಸುವಂತಾಗಿದೆ. ಈಗ ಹೂವು ಬೆಳೆ ಹೆಚ್ಚಿದ್ದರೂ, ಬೇಡಿಕೆಯಿಲ್ಲದೆ ದರವೂ ಇಲ್ಲವಾಗಿದೆ.
ಮಾರಣಕಟ್ಟೆ ಜಾತ್ರೆ ವೇಳೆಗೆ ಸಿದ್ಧವಾಗ ಬೇಕಿದ್ದ ಹೆಮ್ಮಾಡಿ ಸೇವಂತಿಗೆ ಈಗ ಕೊಯ್ಲುಗೆ ಸಿಗುತ್ತಿದೆ. ಆದರೆ ಈಗಾಗಲೇ ಹೆಚ್ಚಿನ ದೇವಸ್ಥಾನಗಳ ಜಾತ್ರೋತ್ಸವ, ಕೆಂಡ ಸೇವೆ ಮುಗಿದಿದ್ದು, ಇದರಿಂದ ಅವಧಿಯಲ್ಲದ ಅವಧಿಯಲ್ಲಿ ಹೂವು ಅರಳಿದ್ದರಿಂದ ನಿರೀಕ್ಷೆಯಷ್ಟು ಬೆಲೆ ಸಿಗದಂತಾಗಿದೆ.
ಹೆಮ್ಮಾಡಿ ಗ್ರಾಮದ ಬಹುಭಾಗ, ಕಟ್‌ಬೆಲೂ¤ರು, ಕನ್ಯಾನ ಗ್ರಾಮಗಳ ಅಂದಾಜು 22 ಎಕರೆ ಪ್ರದೇಶಗಳಲ್ಲಿ ಸೇವಂತಿಗೆ ಹೂವು ಬೆಳೆಯುತ್ತಾರೆ. ಹೆಮ್ಮಾಡಿಯಲ್ಲಿ 42 ಮಂದಿ,
ಕಟ್‌ಬೆಲೂ¤ರು ಗ್ರಾಮದ 6 ಮಂದಿ ಹಾಗೂ ಕನ್ಯಾನ ಗ್ರಾಮದ 6 ಮಂದಿ ಈ ಹೆಮ್ಮಾಡಿ ಸೇವಂತಿಗೆ ಹೂವನ್ನು ಬೆಳೆಯುತ್ತಾರೆ.
80-90 ರೂ. ಅಷ್ಟೇ
ಹೂವುಗಳನ್ನು ಕೊಯ್ದು ಸಾವಿರಕ್ಕೆ ಇಂತಿಷ್ಟು ಎನ್ನುವ ದರದಲ್ಲಿ ಬೆಳೆಗಾರರು ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ಈಗ ಹೂವಿನ ಪ್ರಮಾಣ ಹೆಚ್ಚಿದ್ದರೂ, 1 ಸಾವಿರ ಹೂವಿಗೆ 80-90 ರೂ. ಅಷ್ಟೇ ಸಿಗುತ್ತಿದೆ. ಹೂವು ಚೆನ್ನಾಗಿಲ್ಲದ ಕಾರಣ ಅದಕ್ಕೂ ಹೆಚ್ಚಿನ ಬೇಡಿಕೆಯಿಲ್ಲ. ಕಳೆದ ಬಾರಿ ಇದೇ ಸಮಯದಲ್ಲಿ 1 ಸಾವಿರ ಹೂವಿಗೆ ಕನಿಷ್ಠ 200 ರೂ. ಇತ್ತು. ಒಳ್ಳೆಯ ಹೂವಿಗೆ ಅದಕ್ಕಿಂತಲೂ ಹೆಚ್ಚಿನ ಬೆಲೆ ಸಿಗುತ್ತಿತ್ತು. ಇನ್ನು ಮಾರಣಕಟ್ಟೆ ಜಾತ್ರೆ ವೇಳೆ ಹೂವು ಕಡಿಮೆ ಇದ್ದುದರಿಂದ 400 ರೂ.ವರೆಗೂ ಮಾರಾಟವಾಗಿತ್ತು.
ನುಸಿ – ಮೋಡ ಸಮಸ್ಯೆ
ಈ ಬಾರಿ ಚಳಿ ಕಡಿಮೆ ಇದ್ದುದರಿಂದ ನಿಗದಿತ ವೇಳೆಗೆ ಹೂವು ಅರಳಲಿಲ್ಲ. ಈಗ ಅರಳದ ಹೂವುಗಳು ವಿಪರೀತ ಸೆಕೆ ಹಾಗೂ ಮೋಡದಿಂದಾಗಿ ಕರಟಿ ಹೋಗುತ್ತಿದೆ. ಇದರಿಂದ ಕೆಲವು ಗದ್ದೆಗಳಲ್ಲಿ ಅರ್ಧಕರ್ಧ ಹೂವು ಕರಟಿ ಹೋಗಿದೆ. ಇನ್ನು ನುಸಿಬಾಧೆಯಿಂದಾಗಿಯೂ ಉತ್ತಮ ರೀತಿಯ ಹೂವು ಸಿಗದಂತಾಗಿದೆ.
ನಷ್ಟ ಪರಿಹಾರ ನೀಡಲಿ
ಮೋಡ, ಸೆಕೆ, ನುಸಿಬಾಧೆಯಿಂದಾಗಿ ಈ ಬಾರಿ ಅರ್ಧಕ್ಕರ್ಧ ಬೆಳೆ ಕಡಿಮೆಯಾಗಿದೆ. ಈಗ ಬೆಳೆ ಇದ್ದರೂ, ಹೂವಿಗೆ ಮಾತ್ರ ಬೇಡಿಕೆಯಿಲ್ಲ. ಇದರಿಂದ ಬೆಳೆಗಾರರಿಗೆ ಕಳೆದ ಬಾರಿ ಎಕರೆಗೆ 6 ಸಾವಿರ ರೂ. ಅಂತೆ ಪರಿಹಾರವನ್ನು ತೋಟಗಾರಿಕಾ ಇಲಾಖೆಯವರು ಕೊಟ್ಟಿದ್ದರು. ಈ ಬಾರಿಯೂ ನಷ್ಟ ಪರಿಹಾರವನ್ನು ನೀಡಲಿ. -ಮಹಾಬಲ ದೇವಾಡಿಗ, ಅಧ್ಯಕ್ಷರು, ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘ
ನಷ್ಟ ಪರಿಹಾರ ನೀಡಲಿ
ಜಾತ್ರೆ ಎಲ್ಲ ಮುಗಿಯುತ್ತ ಬಂದಿದೆ. ಈಗ ಹೂವು ಕೊಯ್ಯುತ್ತಿದ್ದೇವೆ. ಇನ್ನು ಹೆಚ್ಚಿನ ಭಾಗ ಮೋಡ, ಬಿಸಿಲು ಜಾಸ್ತಿಯಾಗಿ ಕರಟಿ ಹೋಗಿದೆ. ಈ ಬಾರಿ ಏನಿಲ್ಲ. ಲಾಭಕ್ಕಿಂತ ಬೆಳೆದ ಅಸಲು ಕೂಡ ಸಿಗುವುದು ಕಷ್ಟ ಅನ್ನುವಂತಾಗಿದೆ.
-ಗಿರಿಜಾ ಕಟ್ಟು, ಸೇವಂತಿಗೆ ಬೆಳೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.