ಕೊರೊನಾ ಭೀತಿ: ಸಂಕಷ್ಟದಲ್ಲಿ ಕುಕ್ಕುಟ ಉದ್ಯಮ!
Team Udayavani, Feb 20, 2020, 6:52 AM IST
ಮಂಗಳೂರು: ಕೋಳಿ ಮಾಂಸಕ್ಕೂ ಕೊರೊನಾ ವೈರಸ್‌ಗೂ ಸಂಬಂಧವಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಪಷ್ಟಪಡಿಸಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ರಾಜ್ಯದ ಕುಕ್ಕುಟೋದ್ಯಮವನ್ನು ಸಂಕಷ್ಟಕ್ಕೆ ತಳ್ಳಿವೆ. ಕೋಳಿ ಮಾಂಸ ಮತ್ತು ಕೊರೊನಾ ವೈರಸ್‌ಗೆ ಸಂಬಂಧ ಕಲ್ಪಿಸಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ವದಂತಿಯಿಂದಾಗಿ ಕೋಳಿ ಮಾಂಸ ಭಕ್ಷಣೆಯ ಪ್ರಮಾಣ ಶೇ. 10ರಷ್ಟು ಕಡಿಮೆಯಾಗಿದೆ ಎನ್ನುವುದು ಕೋಳಿ ಮಾಂಸ ವ್ಯಾಪಾರಿಗಳ ಹಾಗೂ ಸಾಕಾಣಿಕೆದಾರರ ಅಂದಾಜು.
ವದಂತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕರ್ನಾಟಕ ರಾಜ್ಯ ಕುಕ್ಕುಟ ರೈತರ ಹಾಗೂ ತಳಿ ಸಾಕಣೆದಾರರ ಸಂಘ (ಕೆಪಿಎಫ್‌ಬಿಐ) ಸತ್ಯ ಶೋಧನೆ ನಡೆಸಿದ್ದು, ಅದರಲ್ಲಿ ಹುರುಳಿಲ್ಲ ಎಂಬುದನ್ನು ಕಂಡುಕೊಂಡಿದೆ. ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ವಿಶ್ವಾದ್ಯಂತದ ವೈಜ್ಞಾನಿಕ ವರದಿಗಳನ್ನು ಆಧರಿಸಿ ಕೋಳಿಯಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ನಷ್ಟದ ವ್ಯಾಪಾರ
ಒಂದು ಅಂದಾಜಿನ ಪ್ರಕಾರ ಒಂದು ಕೆ.ಜಿ. ಕೋಳಿ ಮಾಂಸದ ಉತ್ಪಾದನಾ ವೆಚ್ಚ ಬೆಂಗಳೂರಿನಲ್ಲಿ 80 ರೂ. ಹಾಗೂ ಮಂಗಳೂರಿನಲ್ಲಿ 90 ರೂ. ತಗಲುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಉತ್ಪಾದಕರಿಗೆ ಸಿಗುವ ಮಾರಾಟ ಬೆಲೆ ಬೆಂಗಳೂರಿನಲ್ಲಿ 54 ರೂ. ಹಾಗೂ ಮಂಗಳೂರಿನಲ್ಲಿ 58 ರೂ. ಅಂದರೆ 25ರಿಂದ 30 ರೂ. ನಷ್ಟ. ಒಂದು ವಾರದ ಹಿಂದೆ ಬೆಲೆ ಇದಕ್ಕಿಂತ 5 ರೂ. ಕಡಿಮೆ ಇತ್ತು ಎನ್ನುತ್ತಾರೆ ದ.ಕ. ಜಿಲ್ಲಾ ಕೋಳಿ ಸಾಕಾಣಿಕೆದಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಅಡ್ಯಾರ್.
ಈ ಉದ್ಯಮದಲ್ಲಿ ಕೋಳಿ ಮಾಂಸದ ವ್ಯಾಪಾರ ಮಾಡುವವರಿಗೆ ನಷ್ಟ ಆಗುವುದಿಲ್ಲ. ಉತ್ಪಾದಕರಿಂದ ಖರೀದಿಸುವ ಕೋಳಿಗಳನ್ನು ಮಾಂಸ ಮಾಡಿ ಮಾರಾಟ ಮಾಡುವಾಗ ಲಾಭದ ಮಾರ್ಜಿನ್ ಇರಿಸಿಯೇ ಮಾರಾಟ ಮಾಡುತ್ತಾರೆ ಎಂದು ಕೋಳಿ ಸಾಕಾಣಿಕೆದಾರ ವೈ.ಬಿ. ಸುಂದರ್ ಹೇಳುತ್ತಾರೆ. ಬುಧವಾರ ಮಂಗಳೂರಿ ನಲ್ಲಿ ಕೋಳಿ ಮಾಂಸದ ಸಗಟು ಮಾರಾಟ ದರ 78- 80 ರೂ. ಇದ್ದು,
ಚಿಲ್ಲರೆ ಮಾರಾಟ 95 ರೂ. ಇತ್ತು. ಶೀತಲೀಕರಣ ವ್ಯವಸ್ಥೆಯಲ್ಲಿ ಶುಚಿಗೊ ಳಿಸಿದ ಮಾಂಸಕ್ಕೆ 145 ರೂ. ಇತ್ತು.
ಭಯ ಬೇಡ
ಕೊರೊನಾ ವೈರಸ್ ಹಾವುಗಳಿಂದ ಬಂದಿರುವ ಸಾಧ್ಯತೆ ಇದೆ ಎಂದು ಚೀನದ ಸಂಶೋಧಕರು ಉಲ್ಲೇಖೀಸಿ ದ್ದಾರೆ ಎಂದು ಕೆಪಿಎಫ್‌ಬಿಐ ಅಧ್ಯಕ್ಷ ಡಾ| ಸುಶಾಂತ್ ರೈ ಬಿ. ಉದಯ ವಾಣಿಗೆ ತಿಳಿಸಿದ್ದು, ಮಾಂಸಪ್ರಿಯರು ಭಯ ಪಡುವುದು ಬೇಡ ಎಂದಿದ್ದಾರೆ.
ಈ ವರ್ಷವಿಡೀ ನಷ್ಟ
ಈ ವರ್ಷ ಒಂದು ತಿಂಗಳಲ್ಲಿಯೂ ಕೋಳಿ ಸಾಕಾಣಿಕೆದಾರರಿಗೆ ಲಾಭ ಬಂದಿಲ್ಲ. ಮೊದಲ 6 ತಿಂಗಳಲ್ಲಿ ಪ್ರಕೃತಿ ವಿಕೋಪ ಮತ್ತಿತರ ಕಾರಣಗಳಿಂದ ಆಹಾರ ವಸ್ತು ಸರಿಯಾಗಿ ಸಿಗದೆ ನಷ್ಟವಾಗಿತ್ತು. ಅನಂತರದ 3 ತಿಂಗಳು ಲಾಭ-ನಷ್ಟ ಎರಡೂ ಇಲ್ಲದೆ ಉದ್ಯಮ ನಡೆದಿತ್ತು. ಇದೀಗ ಸುಳ್ಳು ಸುದ್ದಿಯಿಂದಾಗಿ ನಷ್ಟವೇ ಆಗುತ್ತಿದೆ. ಬ್ಯಾಂಕ್ ಸಾಲ ಪಡೆದು ಉದ್ಯಮ ಆರಂಭಿಸಿದವರು ಸಂಕಷ್ಟದಲ್ಲಿದ್ದಾರೆ. ಸರಕಾರ ಈ ಉದ್ಯಮಕ್ಕೆ ಸಬ್ಸಿಡಿ ಒದಗಿಸಿ ನೆರವಾಗಬೇಕು ಎಂದು ಕೋಳಿ ಸಾಕಾಣಿಕೆದಾರ ವೈ.ಬಿ. ಸುಂದರ್ ಆಗ್ರಹಿಸಿದ್ದಾರೆ.
ಯಾವುದೇ ರೋಗಾಣುಗಳಿದ್ದರೂ ಮಾಂಸ ಅಥವಾ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿದಾಗ ಉಳಿಯುವುದಿಲ್ಲ. ಯಾವುದೇ ಭಯ ಪಡುವ ಅಗತ್ಯವಿಲ್ಲ.
– ದಯಾನಂದ ಅಡ್ಯಾರ್, ದ.ಕ. ಜಿಲ್ಲಾ ಕೋಳಿ ಸಾಕಾಣಿಕೆದಾರರ ವಿವಿಧೋದ್ದೇಶ ಸ. ಸಂಘದ ಅಧ್ಯಕ್ಷ
– ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.