ವರ್ಷಕ್ಕೊಂದು ವಿಶ್ವಕಪ್: ಬಿಸಿಸಿಐ ವಿರೋಧ
ಐಸಿಸಿಗೆ ಸವಾಲು: ಕೂಟದ ಆಯೋಜನೆ ಹಕ್ಕನ್ನು ಪಡೆದುಕೊಳ್ಳಲು ಬಿಸಿಸಿಐ ಹಿಂದೇಟು?
Team Udayavani, Feb 20, 2020, 5:36 AM IST
ಮುಂಬಯಿ: 2023-2031ರ ಅವಧಿಯಲ್ಲಿ ಪ್ರತೀ ವರ್ಷಕ್ಕೊಂದು ವಿಶ್ವಮಟ್ಟದ ಕ್ರಿಕೆಟ್ ಕೂಟ ನಡೆಸುವ ಐಸಿಸಿ ಯೋಜನೆಗೆ ಬಿಸಿಸಿಐ ವಿರೋಧ ಮುಂದುವರಿದಿದೆ. ಈಗಾಗಲೇ ಈ ಪ್ರಸ್ತಾವಕ್ಕೆ ಐಸಿಸಿ ತಾತ್ಕಾಲಿಕ ಒಪ್ಪಿಗೆ ನೀಡಿದೆ ಎಂದು ಕೆಲವು ಮೂಲಗಳು ಹೇಳಿವೆ. ಆದರೆ ಬಿಸಿಸಿಐ, ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ಕೂಟದ ಬಗ್ಗೆ ಆಕ್ರೋಶ ಹೊಂದಿವೆ. ಹೀಗಿರುವಾಗ ಹೇಗೆ ಕೂಟಕ್ಕೆ ತಾತ್ಕಾಲಿಕ ಒಪ್ಪಿಗೆ ಸಿಕ್ಕಿದೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.
ಈಗಾಗಲೇ ವಿಪರೀತ ಕ್ರಿಕೆಟ್ ಕಾರಣಕ್ಕೆ ಅಭಿಮಾನಿಗಳು ಕ್ರಿಕೆಟ್ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ಈಗ ಮೊದಲಿನ ಜನಪ್ರಿಯತೆ ಹೊಂದಿಲ್ಲ, ಏಕದಿನವೂ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಟಿ20 ಒಂದೇ ಜನರನ್ನು ಸೆಳೆಯುತ್ತಿದೆ. ಹೀಗಿರುವಾಗ ಐಸಿಸಿ, 8 ವರ್ಷಗಳಲ್ಲಿ ವಿಶ್ವಕಪ್ ಹೋಲುವ 8 ಕೂಟಗಳನ್ನು ನಡೆಸುವ ಯೋಜನೆ ಹಾಕಿಕೊಂಡಿದೆ. ಅಭಿಮಾನಿಗಳಿಂದ ಇದು ಸ್ವೀಕಾರಾರ್ಹವೇ, ಆಗ ವಿಶ್ವಕಪ್ ಮಹತ್ವ ಎಂದಿನಂತೆ ಉಳಿದುಕೊಳ್ಳುವುದೇ ಎಂಬೆಲ್ಲ ಪ್ರಶ್ನೆಗಳ ಮಹತ್ವ ಗೊತ್ತಿದ್ದರೂ, ಐಸಿಸಿ ಬರೀ ಹಣಕ್ಕಾಗಿ ಕೂಟಗಳನ್ನು ನಡೆಸಲು ಮುಂದಾಗಿದೆ ಎನ್ನುವುದು ಸ್ಪಷ್ಟ.
ಐಸಿಸಿಗೆ ಬಿಸಿಸಿಐ ಸವಾಲು
ಇದರಿಂದ ಸದಸ್ಯ ರಾಷ್ಟ್ರಗಳು ಸಿಟ್ಟಾಗಿವೆ. ಈ ರಾಷ್ಟ್ರಗಳ ಆದಾಯ ಕಡಿಮೆಯಾಗಲಿದೆ ಎನ್ನುವುದು ಒಂದು ಕಡೆಯಾದರೆ, ಎಲ್ಲಿ ಜನ ಕ್ರಿಕೆಟ್‌ನಿಂದ ದೂರ ಸರಿಯುತ್ತಾರೋ ಎನ್ನುವ ಆತಂಕ ಇನ್ನೊಂದು ಕಡೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಐಸಿಸಿಗೆ ಸವಾಲು ಒಡ್ಡುವ ಮಾತನ್ನಾಡಿದ್ದಾರೆ. “ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ನಂತಹ ಕ್ರಿಕೆಟ್ ಮಂಡಳಿಗಳು ಐಸಿಸಿಯ ಈ ಕೂಟಗಳನ್ನು ಆಯೋಜಿಸಲು ಮುಂದಾಗದಿದ್ದರೆ ಏನಾಗುತ್ತದೆ, ಈ ಕೂಟಗಳನ್ನು ಐಸಿಸಿ ಎಲ್ಲಿ ನಡೆಸುತ್ತದೆ… ಎಂದು ಪ್ರಶ್ನಿಸಿದ್ದಾರೆ. ಪರೋಕ್ಷವಾಗಿ ಈ ಕೂಟಗಳಿಂದ ಅಂತರ ಕಾಯ್ದುಕೊಳ್ಳುವ ಸುಳಿವು ನೀಡಿದ್ದಾರೆ.
ಕಡಿಮೆಯಾಗಲಿದೆ ಆದಾಯ
ಸದ್ಯದಲ್ಲೇ ಈ ಕೂಟಗಳ ಮಾಧ್ಯಮ ಹಕ್ಕನ್ನು ಐಸಿಸಿ ಮಾರುವುದರಿಂದ, ಅದಕ್ಕೂ ಮುನ್ನ ಕೂಟ ನಡೆಸುವ ಸ್ಥಳ ನಿಗದಿ ಮಾಡಬೇಕಾಗುತ್ತದೆ. ಒಂದು ವೇಳೆ ಈ ಕೂಟಗಳ ಬಗ್ಗೆ ಪ್ರಮುಖ ರಾಷ್ಟ್ರಗಳು ನಿರಾಸಕ್ತಿ ತೋರಿದರೆ ನೇರಪ್ರಸಾರ ಮಾಡುವ ವಾಹಿನಿಗಳು ಬಹಳ ಹಣ ನೀಡಲಾರವು. ಜತೆಗೆ ಜಾಹೀರಾತುದಾರರೂ ಹಿಂದೇಟು ಹಾಕುತ್ತಾರೆ. ಅಷ್ಟೇ ಅಲ್ಲ, ಪ್ರೇಕ್ಷಕರಿಂದ ಬರಬೇಕಾದ ಆದಾಯಕ್ಕೂ ಕತ್ತರಿ ಬೀಳುತ್ತದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.