ಪ್ರಯಾಣಿಕರ ಗೋಳಿಗೆ ಕೊನೆ ಎಂದು!
ಸಿರುಗುಪ್ಪದಿಂದ ಬಳ್ಳಾರಿ ಕಡೆಗೆ ತೆರಳುವುದಕ್ಕೆ ಬಸ್ ಕೊರತೆನಿತ್ಯ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ
Team Udayavani, Feb 20, 2020, 12:42 PM IST
ಸಿರುಗುಪ್ಪ: ನಗರದಿಂದ ಬಳ್ಳಾರಿ ಕಡೆಗೆ ತೆರಳುವ ಸಾರ್ವಜನಿಕರಿಗೆ ಸಂಜೆ 5ಗಂಟೆಯಿಂದ 7ಗಂಟೆವರೆಗೆ ಬಸ್‌ಗಳ ಕೊರತೆ ಇರುವುದರಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿವಿಧ ಇಲಾಖೆಗಳ ನೌಕರರು ಕಳೆದ ಒಂದು ವರ್ಷದಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ನಗರದಿಂದ ಬಳ್ಳಾರಿ ಕಡೆಗೆ ಸಂಚರಿಸುವ ಬಹುತೇಕ ಬಸ್‌ಗಳು ಸಂಜೆ 5ಗಂಟೆ ಒಳಗೆ ತೆರಳುತ್ತಿರುವುದರಿಂದ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸರ್ಕಾರಿ ನೌಕರರಿಗೆ ಬಳ್ಳಾರಿ ಕಡೆಗೆ ತೆರಳಲು ಯಾವುದೇ ಬಸ್ ಸೌಲಭ್ಯವಿಲ್ಲದೆ ದೂರದ ಗುಲ್ಬರ್ಗಾ-ಬಳ್ಳಾರಿ, ರಾಯಚೂರು-ಬಳ್ಳಾರಿ, ಹುಮ್ನಾಬಾದ್-ಬಳ್ಳಾರಿ, ಬೀದರ್-ಬಳ್ಳಾರಿ, ಸಿಂಧನೂರು-ಬೆಂಗಳೂರಿನಿಂದ ಬರುವ ಬಸ್‌ಗಳೇ ಸಂಚಾರಕ್ಕೆ ಆಧಾರವಾಗಿವೆ.
ಈ ಬಸ್‌ಗಳು ಕೂಡ ಯಾವ ಸಮಯಕ್ಕೆ ಬರುತ್ತವೋ ಯಾರಿಗೂ ಗೊತ್ತಿರುವುದಿಲ್ಲ, ಆದರೆ ದೂರದ ಊರುಗಳಿಂದ ಬರುವ ಈ ಬಸ್‌ಗಳು ಯಾವಾಗಲೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಒಮ್ಮೊಮ್ಮೆ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ತುಂಬಿರುತ್ತಾರೆ.
ಹುಮ್ನಾಬಾದ್-ಬಳ್ಳಾರಿ, ಸಿಂಧನೂರು- ಬೆಂಗಳೂರು ಬಸ್‌ಗಳು ತೆಕ್ಕಲಕೋಟೆಯಲ್ಲಿ ಮಾತ್ರ ನಿಲ್ಲಿಸುವುದರಿಂದ ತೆಕ್ಕಲಕೋಟೆಗೆ ತೆರಳುವ ಪ್ರಯಾಣಿಕರು ಬಸ್ ತುಂಬಿದ್ದರೂ ಅದರಲ್ಲಿ ಪ್ರಯಾಣಿಸುತ್ತಾರೆ. ಆದರೆ ಸಿರಿಗೇರಿ ಕ್ರಾಸ್, ಕೊಳೂರು ಕ್ರಾಸ್, ಸಿಂದಿಗೇರಿ, ಬೈಲೂರು, ಭೈರಾಪುರ ಕ್ರಾಸ್, ಕೋಳೂರು, ಸೋಮಸಮುದ್ರ, ಲಕ್ಷ್ಮೀನಗರ ಕ್ಯಾಂಪ್ ಮುಂತಾದ ಕಡೆಗಳಲ್ಲಿ ಈ
ಬಸ್ ನಿಲ್ಲಿಸದೆ ಇರುವುದರಿಂದ ಗುಲ್ಬರ್ಗಾ-ಬಳ್ಳಾರಿ, ರಾಯಚೂರು-ಬಳ್ಳಾರಿ, ಬೀದರ್-ಬಳ್ಳಾರಿ ಬಸ್‌ಗಳು ಕೇವಲ ತೆಕ್ಕಲಕೋಟೆ, ಸಿರಿಗೇರಿ ಕ್ರಾಸ್, ಭೆ„ರಾಪುರ ಕ್ರಾಸ್, ಕೋಳೂರು ಕ್ರಾಸ್, ಸಿಂದಿಗೇರಿ, ಬೈಲೂರಿನಲ್ಲಿ ನಿಲುಗಡೆ ಮಾಡಲಾಗುತ್ತದೆ. ಇನ್ನುಳಿದ ಗ್ರಾಮಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಇದರಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಸಿರುಗುಪ್ಪದಿಂದ ಬಳ್ಳಾರಿವರೆಗೆ ಎಲ್ಲ ಗ್ರಾಮಗಳಲ್ಲಿ ನಿಲುಗಡೆ ಮಾಡುವ ಒಂದು ಬಸ್ ಮತ್ತು ಆಯ್ದ ಕೆಲವು ಗ್ರಾಮಗಳ ಕಡೆ ಮಾತ್ರ ನಿಲ್ಲಿಸುವ ಒಂದು ಬಸ್‌ನ್ನು ಸಂಜೆ 5-30ರ ನಂತರ ಓಡಿಸಿದರೆ ಸಿರುಗುಪ್ಪ ಕಡೆಯಿಂದ ಬಳ್ಳಾರಿ ಕಡೆಗೆ ಸಂಚರಿಸುವ ಎಲ್ಲ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ ಸಿರುಗುಪ್ಪ ಸಾರಿಗೆ ಇಲಾಖೆ ಅಧಿ ಕಾರಿಗಳು ಮಾತ್ರ ಸಂಜೆ 5 ಗಂಟೆಯಿಂದ 7ಗಂಟೆವರೆಗೆ ಸಿರುಗುಪ್ಪದಿಂದ ಬಳ್ಳಾರಿ ಕಡೆಗೆ ಬಸ್
ಓಡಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ನಿತ್ಯವೂ 150ರಿಂದ 200ಕ್ಕೂ ಹೆಚ್ಚು ಪ್ರಯಾಣಿಕರು ಸಿರುಗುಪ್ಪ ಬಸ್‌ನಿಲ್ದಾಣದ ಮುಂದೆ ಬಸ್ಸಿಗಾಗಿ ಚಾತಕ ಪಕ್ಷಿಯಂತೆ ಕಾಯುವುದು ಸಾಮಾನ್ಯವಾಗಿದೆ.
ಸಂಜೆ 5ಗಂಟೆ ನಂತರ ಸಿರುಗುಪ್ಪದಿಂದ ಬಳ್ಳಾರಿ ಕಡೆಗೆ ತೆರಳುವ ಪ್ರಯಾಣಿಕರಿಗೆ ಬಸ್ ಸೌಕರ್ಯವಿಲ್ಲ, ಹೊರ ಜಿಲ್ಲೆಗಳಿಂದ ಬರುವ ನಾಲ್ಕು ಬಸ್‌ಗಳು ಯಾವಾಗಲು ಭರ್ತಿಯಾಗಿರುತ್ತವೆ. ಇದರಲ್ಲಿ 2
ಬಸ್‌ಗಳು ತೆಕ್ಕಲಕೋಟೆಯಲ್ಲಿ ಮಾತ್ರ ನಿಲುಗಡೆ ಮಾಡುತ್ತವೆ. ಇನ್ನೆರಡು ಬಸ್ ಗಳು ಐದು ಕಡೆ ಮಾತ್ರ ನಿಲುಗಡೆ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯವೂ ನರಕಯಾತನೆ ಅನುಭವಿಸಬೇಕಾಗಿದೆ.
ಭಾಗ್ಯಲಕ್ಷ್ಮೀ , ಗೃಹಿಣಿ
ಸಂಜೆ ನಂತರ ಬಳ್ಳಾರಿ ಕಡೆಗೆ ಹೊರಡುವ ಬಸ್‌ಗಳ ಕೊರತೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಈ ಬಗ್ಗೆ ಸಿರುಗುಪ್ಪ ಸಾರಿಗೆ ಡಿಪೋ ವ್ಯವಸ್ಥಾಪಕ ತಿರುಮಲೇಶರೊಂದಿಗೆ ಚರ್ಚಿಸಿದ್ದೇನೆ. ಪ್ರಯಾಣಿಕರ ಅನುಕೂಲಕ್ಕೆ ಶೀಘ್ರವಾಗಿ ಬಸ್‌ಬಿಡುವ ಭರವಸೆ ನೀಡಿದ್ದಾರೆ.
ಎಸ್.ಬಿ. ಕೂಡಲಗಿ,
ತಹಶೀಲ್ದಾರ್
ಸಂಜೆ 5ರ ನಂತರ ಬಳ್ಳಾರಿ ಕಡೆಗೆ ಹೆಚ್ಚುವರಿ ಬಸ್ ಬಿಡುವ ಬಗ್ಗೆ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
ಕೆ.ಎಂ. ತಿರುಮಲೇಶ,
ಸಿರುಗುಪ್ಪ ಸಾರಿಗೆ ಘಟಕದ ವ್ಯವಸ್ಥಾಪಕ
ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.