ಹಾಗಲಕಾಯಿ ಸವಿರುಚಿ
Team Udayavani, Feb 21, 2020, 4:58 AM IST
ಮಧುಮೇಹಿಗಳಿಗೆ ವರದಾನವೆಂದೇ ಕರೆಯುವ ಹಾಗಲಕಾಯಿ ಹಲವಾರು ಉತ್ತಮ ಅಂಶಗಳನ್ನೊಳಗೊಂಡಿದ್ದು ಇದರ ಸೇವನೆಯಿಂದ ರಕ್ತಶುದ್ದಿ ಹಾಗೂ ಚರ್ಮರೋಗಗಳು, ವ್ರಣಗಳು, ಕರುಳಿನಹುಣ್ಣು, ಹೊಟ್ಟೆಹುಣ್ಣು ಇತ್ಯಾದಿ ಸಮಸ್ಯೆಗಳಿದ್ದಲ್ಲಿ ಗಮನಾರ್ಹ ಸುಧಾರಣೆ ಕಂಡುಬರುವುದು.
ಹಾಗಲಕಾಯಿ ಮಸಾಲ ಫ್ರೈ
ಬೇಕಾಗುವ ಸಾಮಗ್ರಿ: ಹಾಗಲಕಾಯಿ- ಎರಡು, ಕೆಂಪು ಮೆಣಸಿನಪುಡಿ- ಒಂದು ಚಮಚ, ಹುಣಸೆಹಣ್ಣು- ಮೂರು ಚಮಚ, ಬೆಲ್ಲ- ಎಂಟು ಚಮಚ, ಗರಂಮಸಾಲ- ಒಂದು ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಒಂದು ಚಮಚ, ಅರಸಿನ- ಅರ್ಧ ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಬಿಲ್ಲೆಯಾಕಾರದಲ್ಲಿ ಹೆಚ್ಚಿ, ಉಪ್ಪು ಬೆರೆಸಿ, ಹತ್ತು ನಿಮಿಷ ಇಡಿ. ನಂತರ, ಇದರಲ್ಲಿ ಬಿಟ್ಟ ನೀರಿನಿಂದ ಹಾಗಲಕಾಯಿಯನ್ನು ಬೇರ್ಪಡಿಸಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಹಾಗಲಕಾಯಿಯನ್ನು ಹದ ಬೆಂಕಿಯಲ್ಲಿ ಬಾಡಿಸಬೇಕು. ನಂತರ, ಇದಕ್ಕೆ ಹುಣಸೆರಸ, ಬೆಲ್ಲ ಹಾಗೂ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಮಗುಚುತ್ತ ಇದ್ದು ಚೆನ್ನಾಗಿ ಹಾಗಲಕಾಯಿಯ ಜೊತೆ ಸೇರಿಕೊಳ್ಳುವಂತೆ ಮಾಡಿ, ಒಲೆಯಿಂದ ಇಳಿಸಿ.
ಹಾಗಲಕಾಯಿ ಸಾಸಿವೆ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಹಾಗಲಕಾಯಿ- ಅರ್ಧ ಕಪ್, ತೆಂಗಿನತುರಿ- ಒಂದು ಕಪ್, ಸಾಸಿವೆ- ಒಂದು ಚಮಚ, ಹಸಿಮೆಣಸು- ಒಂದು, ಮೊಸರು- ಒಂದು ಕಪ್, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಕಾದ ಕೂಡಲೇ ಹೆಚ್ಚಿಟ್ಟ ಹಾಗಲಕಾಯಿಯನ್ನು ಹಾಕಿ, ಸಣ್ಣ ಉರಿಯಲ್ಲಿ ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ಬಾಡಿಸಿ. ತೆಂಗಿನತುರಿಗೆ ಸಾಸಿವೆ, ಹಸಿಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಮೊಸರು ಹಾಗೂ ಬಾಡಿಸಿಟ್ಟ ಹಾಗಲಕಾಯಿ ಮತ್ತು ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.
ಹಾಗಲಕಾಯಿ ವಿದ್ ದಾಳಿಂಬೆ ಸಲಾಡ್
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಹಾಗಲಕಾಯಿ- ಅರ್ಧ ಕಪ್, ತೆಂಗಿನತುರಿ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಹಸಿಮೆಣಸಿನಕಾಯಿ- ಒಂದು, ಕ್ಯಾರೆಟ್‌ತುರಿ- ನಾಲ್ಕು ಚಮಚ, ದಾಳಿಂಬೆ- ಎಂಟು ಚಮಚ, ಮೊಳಕೆ ಮೆಂತೆ- ನಾಲ್ಕು ಚಮಚ, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಹಾಗಲಕಾಯಿಗೆ ಉಪ್ಪು ಬೆರೆಸಿದ ಹತ್ತು ನಿಮಿಷದ ನಂತರ ರಸ ತೆಗೆದು ಬದಿಗಿರಿಸಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಹಾಗಲಕಾಯಿಯನ್ನು ಹಾಕಿ, ಬಾಡಿಸಿ, ಮಿಕ್ಸಿಂಗ್ ಬೌಲ್‌ಗೆ ಹಾಕಿ. ತೆಂಗಿನತುರಿಗೆ ಕೊತ್ತಂಬರಿಸೊಪ್ಪು ಮತ್ತು ಹಸಿಮೆಣಸಿನಕಾಯಿ ಸೇರಿಸಿ ನೀರು ಸೇರಿಸದೆ ಪುಡಿ ಮಾಡಿ ಮಿಕ್ಸಿಂಗ್ ಬೌಲ್‌ಗೆ ಸೇರಿಸಿ. ನಂತರ, ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ, ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.
ಹಾಗಲಕಾಯಿ ಚಿಪ್ಸ್
ಬೇಕಾಗುವ ಸಾಮಗ್ರಿ: ಹಾಗಲಕಾಯಿ- ಎರಡು, ನನೆಸಿದ ಬೆಳ್ತಿಗೆ ಅಕ್ಕಿ- ಒಂದು ಕಪ್, ಕೆಂಪು ಮೆಣಸು- ಐದು, ಹುಣಸೆಹಣ್ಣು- ಎರಡು ಚಮಚ, ಧನಿಯಾ- ಒಂದು ಚಮಚ, ಜೀರಿಗೆ- ಅರ್ಧ ಚಮಚ, ಇಂಗು- ಒಂದು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಬಿಲ್ಲೆಯಾಕಾರದಲ್ಲಿ ಹೆಚ್ಚಿ ಉಪ್ಪು ಬೆರೆಸಿ ಹತ್ತು ನಿಮಿಷ ಬಿಟ್ಟು, ಇದರಲ್ಲಿಯ ಕಹಿನೀರು ಬೇರ್ಪಡಿಸಿ. ಅಕ್ಕಿಗೆ ಮೆಣಸು, ಧನಿಯ, ಹುಣಸೆ, ಇಂಗು, ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ, ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ, ತೆಗೆದಿರಿಸಿದ ಹಾಗಲಕಾಯಿಯನ್ನು ಇದರಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಚಿಪ್ಸ್ ಕರಿಯಿರಿ. ಬಹಳ ರುಚಿಯಾಗಿದ್ದು, ಊಟಕ್ಕೆ ಸಾಥ್‌ಕೊಡಬಲ್ಲದು.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.