ಮೊಬೈಲ್ ದಾಸರಿಗಾಗಿ ಸೆಲ್ಫಿ ಮಮ್ಮಿ, ಗೂಗಲ್ ಡ್ಯಾಡಿ
ಕ್ರೌಡ್ ಫಂಡೆಡ್ ಸಿನ್ಮಾ
Team Udayavani, Feb 21, 2020, 5:58 AM IST
ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್, ಫೇಸ್‌ಬುಕ್, ಇನ್ಸ್‌ಟಾಗ್ರಾಂ, ಟ್ವಿಟ್ಟರ್…ಹೀಗೆ ಒಂದಾ ಎರಡಾ ಅನೇಕ ಆ್ಯಪ್‌ಗ್ಳಿಗೆ ಈಗಿನ ಜನ ಅಂಟಿಕೊಂಡಿದ್ದಾರೆ. ಅದರ ಸುತ್ತವೇ ಒಂದು ಕಥೆ ಹೆಣೆದು, ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ ನಿರ್ದೇಶಕ ಮಧುಚಂದ್ರ.
ಹೌದು, ಆ ಚಿತ್ರಕ್ಕೆ “ಸೆಲ್ಫಿ ಮಮ್ಮಿ, ಗೂಗಲ್ ಡ್ಯಾಡಿ’ ಎಂದು ನಾಮಕರಣ ಮಾಡಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ನಲವತ್ತು ಮಂದಿ ಸಮಾನ ಮನಸ್ಕರು ಸೇರಿ ನಿರ್ಮಾಣ ಮಾಡಿದ್ದಾರೆ. ಮೊದಲೇ ಹೇಳಿದಂತೆ, ಇದು ಮೊಬೈಲ್‌ಗೆ ದಾಸರಾಗಿರುವವರ ಕುರಿತ ಕಥೆ ಹೊಂದಿದೆ. ಈ ರೀತಿಯ ಕಥೆ ರೆಡಿ ಮಾಡಿಕೊಂಡು ಒಂದಷ್ಟು ಅಭಿಪ್ರಾಯ ಸಂಗ್ರಹಿಸಲು ಕೆಲವರನ್ನು ಭೇಟಿ ಮಾಡಿದ ನಿರ್ದೇಶಕರಿಗೆ, ತಮ್ಮ ಮನೆಯಲ್ಲೇ ಈ ರೀತಿಯ ಮೊಬೈಲ್ ಗೀಳು ಇದೆ. ನಾವೂ ನಿರ್ಮಾಣಕ್ಕೆ ಕೈ ಜೋಡಿಸುತ್ತೇವೆ ಅಂತ ಎಲ್ಲರೂ ಸಾಥ್ ಕೊಟ್ಟಿದ್ದರಿಂದಲೇ 40 ಜನ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಷ್ಟೂ ಜನರನ್ನು ಒಂದೆಡೆ ಸೇರಿಸಿ, ಅವರಿಗೆ ಸಿನಿಮಾ ಕಥೆ ವಿವರಿಸಿ, ಯಾವುದೇ ಸಮಸ್ಯೆ ಇಲ್ಲದಂತೆ ಚಿತ್ರ ಮಾಡಿ ಮುಗಿಸಿದ್ದಾರೆ ಮಧುಚಂದ್ರ.
ಇನ್ನು, ಸೃಜನ್ ಲೋಕೇಶ್ ಹಾಗು ಮೇಘನಾರಾಜ್ ಇಲ್ಲಿ ಇಬ್ಬರು ಮಕ್ಕಳ ಪೋಷಕರಾಗಿ ನಟಿಸಿದ್ದಾರೆ. ಇಂದು ಮನೆಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಮೊಬೈಲ್‌ಗೆ ಅಂಟಿಕೊಂಡಿರುತ್ತಾರೆ. ಅದರಿಂದ ಏನೆಲ್ಲಾ ಪರಿಣಾಮ ಬೀರುತ್ತೆ ಎಂಬುದು ಕಥೆ. ಸಿನಿಮಾದಲ್ಲಿ ಪತಿ ಸದಾ ಗೂಗಲ್‌ನಲ್ಲಿ ಹೊಸ ಹೊಸ ವಿಷಯ ಹುಡುಕಾಟ ನಡೆಸುತ್ತಿದ್ದರೆ, ಪತ್ನಿ ಯಾರೇ ಮನೆಗೆ ಬಂದರೂ, ಮೊದಲು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಫೇಸ್‌ಬುಕ್‌ನಲ್ಲಿ ಅಪಲೋಡ್ ಮಾಡುವ ಖಯಾಲಿ ಹೊಂದಿರುತ್ತಾಳೆ. ಅವರ ಮಕ್ಕಳೂ ಸಹ ಮೊಬೈಲ್‌ನೊಂದಿಗೆ ತಮ್ಮದೆ ಲೋಕದಲ್ಲಿ ಮುಳುಗಿರುತ್ತಾರೆ. ಇದೆಲ್ಲವೂ ಹೇಗೆಲ್ಲಾ ಅನಾಹುತಕ್ಕೆ ಕಾರಣವಾಗುತ್ತೆ ಎಂಬುದನ್ನು ಹಾಸ್ಯ ಮೂಲಕವೇ ಹೇಳಲಾಗಿದೆಯಂತೆ.
ಚಿತ್ರದಲ್ಲಿ ಅಚ್ಯುತ್ ಕುಮಾರ್, ಪವನ್‌ಕುಮಾರ್, ಮಾ.ಅಲಾಪ್, ಬೇಬಿಶ್ರೀ ಇತರರು ನಟಿಸಿದ್ದಾರೆ. ಶಮಂತ್‌ನಾಗ್ ಸಂಗೀತವಿದೆ. ರವೀಂದ್ರನಾಥ್ ಛಾಯಾಗ್ರಹಣ ಮಾಡಿದರೆ, ಸುರೇಶ್‌ಆರು¾ಗಂ ಸಂಕಲನವಿದೆ. ಮದನ್‌ಹರಣಿ ನೃತ್ಯವಿದೆ. ಆಕಾಶ ಬುತ್ತಿ ಫಿಲಂಸ್ ಮೂಲಕ ಸಿದ್ದಗೊಂಡಿರುವ ಸಿನಿಮಾಗೆ “ಯು’ ಪ್ರಮಾಣ ಪತ್ರ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.