ನೆನೆಯುವ ಅನುದಿನ; ನಂದಳಿಕೆ ಮಹಾಲಿಂಗೇಶ್ವರ, ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇಗುಲ


Team Udayavani, Feb 21, 2020, 5:57 AM IST

maha-shivaratri

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎನ್ನುತ್ತದೆ ಒಂದು ಹಾಡು. ಶಿವನನ್ನು ಭಜಿಸುವುದರ ಮಹತ್ವ ಇಂಥದ್ದು. ಅಂಥ ಮಹಾಶಿವನದಿನವಿದು, ಶಿವರಾತ್ರಿ. ಉಪವಾಸ, ಜಾಗರಣೆಗಳೊಂದಿಗೆ ಲಯಾಧಿಪತಿ ಸದಾಶಿವನ ಭಜನೆ ಈ ದಿನದ ವೈಶಿಷ್ಟé. ನಾಡಿನ ಎಲ್ಲ ಶಿವ ದೇಗುಲಗಳು ಶಿವರಾತ್ರಿ ಆಚರಣೆಗೆ ಸಿದ್ಧವಾಗಿವೆ. ಮನೆಗಳಲ್ಲೂ ಹರನಿಗೆ ವಿಶೇಷ ಅರ್ಚನೆ, ಅಭಿಷೇಕ ಇತ್ಯಾದಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳ ಶಿವರಾತ್ರಿ ಸಂಭ್ರಮದ ಇಣುಕುನೋಟ ಇಲ್ಲಿದೆ.

ಉಮಾಮಹೇಶ್ವರ
ದುರ್ಗಾಪರಮೇಶ್ವರೀ ದೇವಸ್ಥಾನ
ಪಳ್ಳಿ: ಶ್ರೀಕ್ಷೇತ್ರ ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಅವಿಭಜಿತ ದ.ಕ. ಜಿಲ್ಲೆಗಳ ಕಾರಣಿಕ ಕ್ಷೇತ್ರಗಳಲ್ಲೊಂದಾಗಿದೆ. ಅನ್ನದಾನ ಅಭಯದಾನ ವಸ್ತ್ರದಾನಕ್ಕೆ ಪ್ರಧಾನವಾಗಿರುವ ಕ್ಷೇತ್ರದಲ್ಲಿ ಶ್ರೀ ವಿನಾಯಕ, ಶ್ರೀನಾಗ, ಭದ್ರಕಾಳಿ, ಚಾಮುಂಡಿ, ಕಾರಣಿಕ ದೈವ ಕಲ್ಕುಡ ಕಲ್ಲುರ್ಟಿ ಗಳ ಜತೆ 27 ಪರಿವಾರ ದೈವಗಳ ಸಾನ್ನಿಧ್ಯ ಸಂಗಮವಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹುಂಡಿಯಿಂದಲೇ ನಡೆಯುತ್ತಿದೆ.

ಈ ಬಾರಿಯ ವಿಶೇಷ: ಮಹಾ ಶಿವರಾತ್ರಿ ಅಂಗವಾಗಿ ಶಿವರಾತ್ರಿ ಉತ್ಸವ, ಮಹಾ ರಥೋತ್ಸವ ನಡೆಯಲಿದೆ.

ನಲ್ಲೂರು ಪರಪ್ಪಾಡಿ
ಮಹಾಲಿಂಗೇಶ್ವರ ದೇವಸ್ಥಾನ
ಬಜಗೋಳಿ: ನಲ್ಲೂರು ಪರಪ್ಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಕುದುರೆಮುಖ ಶಿಖರದ ಪಾರ್ಶ್ವ ದಲ್ಲಿ ಕಾನನದ ಮಧ್ಯದಲ್ಲಿದೆ. ಈ ಕ್ಷೇತ್ರವು ಸುಮಾರು 600ರಿಂದ 700 ವರ್ಷಗಳ ಪುರಾತನ ವಾಗಿದ್ದು 13ನೇ ಶತಮಾನದಲ್ಲಿ ಸ್ಥಾಪನೆಯಾದ ಬಗ್ಗೆ ಶಿಲಾಶಾಸನವಿದೆ.ಶ್ರೀ ಮಹಾಲಿಂಗೇಶ್ವರ ಸಾನ್ನಿಧ್ಯದಲ್ಲಿ ಅನ್ನಪೂರ್ಣೇಶ್ವರಿ ಗಣಪತಿ ದೇವರ ಸಾನ್ನಿಧ್ಯವಿದೆ. ರುದ್ರಾಭಿಷೇಕ, ಕಾರ್ತಿ ಪೂಜೆ, ಸೀಯಾಳಾಭಿಷೇಕ ಮುಂತಾದ ಸೇವೆ ನಡೆಯುವುದು ಇಲ್ಲಿನ ವಿಶೇಷ.

ಈ ಬಾರಿಯ ವಿಶೇಷ: ಶಿವರಾತ್ರಿ ಪ್ರಯುಕ್ತ ಶತರುದ್ರಾಭಿಷೇಕ ಪೂಜೆ ನಡೆಯುವುದು.

ನಗರದ ವಿವಿಧೆಡೆ ಶಿವರಾತ್ರಿ ಆಚರಣೆ
ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇಗುಲ
ಕಾರ್ಕಳ: 13ನೇ ಶತಮಾನದಲ್ಲಿ ಜಂಗಮರಿಂದ ಪೆರ್ವಾಜೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇಗುಲ ನಿರ್ಮಾಣವಾಯಿತೆಂಬ ಪ್ರತೀತಿ. 19ನೇ ಶತಮಾನ ದಲ್ಲಿ ಸ‌ರ್ವಾಂಗೀಣ ಅಭಿವೃದ್ಧಿಯನ್ನು ಕಂಡಿರುವ ದೇಗುಲ ಬಳಿಕ 2015 ರಲ್ಲಿ ಜೀರ್ಣೋದ್ಧಾರಗೊಂಡು ವೈಭವ ದೊಂದಿಗೆ ಬ್ರಹ್ಮಕಲಶೋತ್ಸವ ಜರಗಿತ್ತು. ಶಿಲಾಮಯವಾಗಿರುವ ಈ ದೇಗುಲ ಕಾರ್ಕಳದ ಪ್ರಸಿದ್ಧ ದೇಗುಲಗಳಲ್ಲೊಂದು.ಫೆ. 21ರಂದು ಮಹಾಶಿವರಾತ್ರಿ ಯಂಗವಾಗಿ ಬೆಳಗ್ಗೆ ಗಂಟೆ 7ರಿಂದ ವಿವಿಧ ಭಜನ ಮಂಡಳಿಗಳಿಂದ ಭಜನೆ, ರಾತ್ರಿ ರಂಗಪೂಜೆ ನಡೆಯಲಿದೆ. ಫೆ. 23ರಂದು ಸಂಜೆ 6 ಗಂಟೆಯಿಂದ ಸಾರ್ವಜನಿಕ ಶನಿಪೂಜೆ, ಫೆ. 24ರಂದು ಸಂಜೆ ಶ್ರೀ ದೈವಗಳ ಭಂಡಾರ ಇಳಿಯುವುದರೊಂದಿಗೆ ರಾತ್ರಿ ಅನ್ನಸಂತರ್ಪಣೆ ಹಾಗೂ ದೈವಗಳ ನೇಮ ನಡೆಯಲಿದೆ.

ಹೆಬ್ರಿ ತಾಣ
ಹೆಬ್ರಿ: ಹೆಬ್ರಿ ತಾಣ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಫೆ.21 ರಂದು ಶಿವರಾತ್ರಿ ಮಹೋತ್ಸವದ ಅಂಗವಾಗಿ ಬೆಳಗ್ಗೆ ರುದ್ರಾಭಿಷೇಕ,ರಾತ್ರಿ ಭಜನೆ ಹಾಗೂ ಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಶಿವಪುರ ಶಂಕರದೇವ ದೇಗುಲ
ಹೆಬ್ರಿ: ಶಿವಪುರ ಶ್ರೀ ಶಂಕರದೇವ ದೇವಸ್ಥಾನದಲ್ಲಿ ಫೆ.21ರಂದು ಶಿವರಾತ್ರಿ ಮಹೋತ್ಸವದ ಅಂಗವಾಗಿ ಪೂರ್ವಾಹ್ನ ರುದ್ರಾಭಿಷೇಕ , ಮಧ್ಯಾಹ್ನ ಮಹಾಪೂಜೆ ,
ರಾತ್ರಿ ರಂಗಪೂಜೆ, ಶಿವಪಂಚಾಕ್ಷರಿ ಮಹಿಮೆ ಯಕ್ಷಗಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಕೆರೆಬೆಟ್ಟು : ಭಜನ ಮಂಗಲೋತ್ಸವ
ಹೆಬ್ರಿ: ಕೆರೆಬೆಟ್ಟು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಫೆ.21 ರಂದು ಶಿವರಾತ್ರಿ ಮಹೋತ್ಸವದ ಅಂಗವಾಗಿ ಬೆಳಗ್ಗೆ ರುದ್ರಾಭಿಷೇಕ, ರುದ್ರಹೋಮ ರಾತ್ರಿ ರಂಗಪೂಜೆ ನಡೆಯಲಿದ್ದು, ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಆಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಮಠದ ಬೆಟ್ಟು : ಶಿವಲಿಂಗ ಸನ್ನಿಧಿ
ಹೆಬ್ರಿ: ಹೆಬ್ರಿ ಮಠದ ಬೆಟ್ಟು ಬಳಿಯ ನದಿತೀರದಲ್ಲಿರುವ ಶಿವಲಿಂಗ ಸನ್ನಿಧಿಯಲ್ಲಿ ಭಕ್ತರಿಂದಲೇ ಶಿವಲಿಂಗ ಪೂಜೆ, ಆರತಿ, ಹಾಗೂ ರುದ್ರಾಭಿಷೇಕ ಪೂಜೆ ಫೆ.21ರಂದು ಬೆಳಿಗ್ಗೆ 6.30ರಿಂದ 11ರತನಕ ನಡೆಯಲಿದೆ ಎಂದು ಪ್ರಕಟನೆ
ತಿಳಿಸಿದೆ.

ನಂದಳಿಕೆ ಮಹಾಲಿಂಗೇಶ್ವರ ದೇಗುಲ
ಬೆಳ್ಮಣ್‌: ಐತಿಹಾಸಿಕ ಸಿರಿ ಆಲಡೆಯ ಪುಣ್ಯ ಕ್ಷೇತ್ರ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಉತ್ಸವ ಫೆ. 21ರಂದು ನಡೆಯಲಿದೆ. ಶಿವ ದೇವರಿಗೆ ವಿಶೇಷ ಪೂಜೆ, ರುದ್ರಾಭಿಶೇಕ ಸಹಿತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ.

ಪಡುಬೆಳ್ಮಣ್‌ ಮಹಾಲಿಂಗೇಶ್ವರ ದೇಗುಲ
ಬೆಳ್ಮಣ್‌: ಪಡುಬೆಳ್ಮಣ್‌ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಮಹೋತ್ಸವ ಪ್ರಯುಕ್ತ ಫೆ. 21ರಂದು ದ್ರವ್ಯ ಕಳಶ ಸಹಿತ ಶತರುದ್ರಾಭಿಶೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು ರಾತ್ರಿ ರಂಗಪೂಜೆ ನಡೆಯಲಿದೆ. ಕ್ಷೇತ್ರದಲ್ಲಿ ಮಾರ್ಚ್‌ 4ರಂದು ವರ್ಧಂತ್ಯುತ್ಸವ ನಡೆಯಲಿದೆ.

ಇನ್ನಾ ಮಹಾಲಿಂಗೇಶ್ವರ ದೇಗುಲ
ಬೆಳ್ಮಣ್‌: ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಪ್ರಯುಕ್ತ ಶತರುದ್ರಾಭಿಶೇಕ, ರಂಗಪೂಜೆ, ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಅನ್ನ ಸಂತರ್ಪಣೆಯೂ ನಡೆಯಲಿದೆ.

ಕಾಡುಹೊಳೆ ಜಂಗಮ ಮಠ
ಅಜೆಕಾರು: ಸುಮಾರು 400ವರ್ಷ ಗಳ ಹಿಂದೆ ಜಂಗಮರಿಂದ ಸ್ಥಾಪಿಸಲ್ಪಟ ಜಂಗಮ ಮಠವು ಪ್ರಸ್ತುತ ಕಾಡುಹೊಳೆ ಪರಿಸರದ ಗ್ರಾಮ ದೇವಸ್ಥಾನವಾಗಿ ಪ್ರಸಿದ್ದಿ ಪಡೆದಿದೆ.

ಉತ್ತರಾಭಿಮುಖವಾಗಿ ರುವ ಶಿವನ ಮೂರ್ತಿ ಇಲ್ಲಿರುವುದು ವಿಶೇಷ. ಜಂಗಮರ ಆಡಳಿತ ನಂತರ ದಿ.ನಾರಾಯಣ ಅಜಿಲರು 150 ವರ್ಷಗಳ ಹಿಂದೆ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ್ದು ಪ್ರತಿ ಸೋಮವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದು ನಿತ್ಯ ಅನ್ನಸಂತರ್ಪಣೆ ನೆರವೇರುತ್ತದೆ.

ಈ ಬಾರಿಯ ವಿಶೇಷ: ಈ ಸಂದರ್ಭವೇ ದೇಗುಲದ ವರ್ಧಂತಿ ನಡೆಯುತ್ತಿದ್ದು ವಿಶೇಷ ರುದ್ರಾಭಿಷೇಕ ಸೇವೆ ಭಜನ ಕಾರ್ಯಕ್ರಮ ನಡೆಯುತ್ತದೆ.

ಕೆರ್ವಾಶೆ
ಮಹಾಲಿಂಗೇಶ್ವರ ದೇವಸ್ಥಾನ
ಅಜೆಕಾರು: ಕೆರ್ವಾಶೆ ಮಹಾಲಿಂಗೇಶ್ವರ ದೇವಸ್ಥಾನವು ಪಶ್ಚಿಮ ಘಟದ ತಪ್ಪಲಿನಲ್ಲಿದ್ದು ಶಿರ್ಲಾಲು, ಮುಂಡ್ಲಿ-ಜಾರ್ಕಳ, ಮುಡಾರು, ಮಾಳ ಸೇರಿದಂತೆ ಒಟ್ಟು 5 ಮಾಗಣೆ ಒಳಗೊಂಡಿದೆ.ಸಾವಿರ ವರ್ಷ ಗಳಿಗೂ ಹೆಚ್ಚಿನ ಇತಿಹಾಸವಿರುವ ಈ ದೇವಾಲಯದಲ್ಲಿ ಖರ ಮಹರ್ಷಿಯು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದು ಅನಂತರ ಭೈರವ ಅರಸರು ಕೆರ್ವಾಶೆಯನ್ನು ರಾಜಧಾನಿಯನ್ನಾಗಿಸಿ ಆಳ್ವಿಕೆ ಮಾಡುತ್ತಿದ್ದ ಸಂದರ್ಭ ಈ ದೇಗುಲವನ್ನು ಆರಾಧಿಸಿ ಕೊಂಡು ಬಂದ ಬಗ್ಗೆ ಶಿಲಾಶಾಸನಗಳಿಂದ ತಿಳಿದುಬಂದಿದೆ.

ಈ ಬಾರಿಯ ವಿಶೇಷ: ವಿಶೇಷ ಪೂಜೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಜಾಗರಣೆ ನಡೆಯುತ್ತದೆ.

ಬೈಲೂರು
ಬೀದಿ ಮಹಾಲಿಂಗೇಶ್ವರ ದೇಗುಲ
ಅಜೆಕಾರು: ಬೈಲೂರು ಬೀದಿ ಮಹಾಲಿಂಗೇಶ್ವರ ದೇವಸ್ಥಾನವು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು ದೇವಸ್ಥಾನದ ಶೀಲಾಶಾಸನದಿಂದ ತಿಳಿದು ಬರುತ್ತದೆ. ನಾಲ್ಕು ಮಾಗಣೆಗಳನ್ನು ಒಳಗೊಂಡಿರುವ ದೇವಸ್ಥಾನವು ಬೈಲೂರು ಗ್ರಾಮ ದೇವಸ್ಥಾನವಾಗಿದೆ. ದೇವಸ್ಥಾನದ ಕಟ್ಟಡವು ಪ್ರಸ್ತುತ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಗ್ರಾಮಸ್ಥರು ಸಮಿತಿ ರಚಿಸಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ಈ ಬಾರಿಯ ವಿಶೇಷ: ಧ್ವಜಾರೋಹಣ, ಉತ್ಸವ ಬಲಿ, ರುದ್ರಾಭಿಷೇಕ, ಕೊಡಮಣಿತ್ತಾಯ, ಬೈದರ್ಕಳ, ಜುಮಾದಿ ಬಂಟ ನೇಮ ನಡೆಯುತ್ತದೆ.

ಕೌಡೂರು
ಮಹಾಲಿಂಗೇಶ್ವರ ದೇವಸ್ಥಾನ
ಅಜೆಕಾರು: ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 800 ವರ್ಷಗಳ ಹಿಂದೆ ಪ್ರತಿಷ್ಠಾಪನೆ ಗೊಂಡಿದೆ. ಮಹಾಲಿಂಗೇಶ್ವರ ನನ್ನು ಪ್ರದಾನ ದೇವರಾಗಿ ಆರಾಧಿಸಲಾಗು ತ್ತಿದ್ದು ಪರಿವಾರದಲ್ಲಿ ಗಣಪತಿ ಇದೆ. ಮಕರ ಸಂಕ್ರಮಣ ಸಂದರ್ಭ ಇಲ್ಲಿನ ವಾರ್ಷಿಕ ಜಾತ್ರೆ ನಡೆಯುತ್ತದೆ.

ಈ ಬಾರಿಯ ವಿಶೇಷ: ಶಿವರಾತ್ರಿ ಸಂದರ್ಭ ರಂಗಪೂಜೆ, ರುದ್ರಾಭಿಷೇಕ ವಿಶೇಷವಾಗಿ
ನಡೆಯುತ್ತದೆ.

ಕಾಂತಾವರ
ಶ್ರೀ ಕಾಂತೇಶ್ವರ ದೇವಸ್ಥಾನ
ಕಾಂತಾವರ: ಇದನ್ನು ಅಂಬರೀಷ ಮುನಿ ತಪಸ್ಸಿನಿಂದ ಅಂಬರೀಷ ಬೆಟ್ಟ ಎಂಬ ಪದದಿಂದ ಕರೆಯುತ್ತಾರೆ. ಈ ಬೆಟ್ಟದಲ್ಲಿ ಕಾಂತಾವರ ಶ್ರೀ ಕಾಂತೇಶ್ವರ ದೇವಸ್ಥಾನವಿದೆ. ಅಂಬರೀಷ ಮುನಿಗಳ ತಪಸ್ಸಿಗೆ ಒಲಿದು ಶಿವ ಹಾಗೂ ಪಾರ್ವತಿ ಪ್ರತ್ಯಕ್ಷಗಿರುವ ಸೈಕತ ಲಿಂಗವನ್ನು ಕರುಣಿದ್ದಾಗಿ ಪ್ರತೀತಿ ಇದೆ. ಅಲ್ಲದೆ ಈ ಸಂದರ್ಭ ಪಾರ್ವತಿ ದೇವರು ಕಡಗವನ್ನು ನೀಡಿದ್ದು ಅದು ಈಗಲೂ ಈಶ್ವರನ ಲಿಂಗದಲಿದ್ದು ನಿತ್ಯ ಪೂಜೆಗೊಳ್ಳುತ್ತಿದೆ.

ಈ ಬಾರಿಯ ವಿಶೇಷ: ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ, ರಂಗಪೂಜೆ, ಭಜನೆ ಕಾರ್ಯಕ್ರಮಗಳು ನಡೆಯಲಿವೆ.

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.