ಕೋಟಿಕುಳಂ ರೈಲ್ವೇ ಮೇಲ್ಸೇತುವೆ ಕಾರ್ಯ ಸ್ಥಗಿತ
ಕೇರಳ ಸರಕಾರದ ಪಾಲು ಶೇ.50 ವೆಚ್ಚ ನೀಡದಿರುವುದು ಕಾರಣ: ಶ್ರೀಕಾಂತ್
Team Udayavani, Feb 20, 2020, 10:50 PM IST
ಕಾಸರಗೋಡು: ಕೋಟಿಕುಳಂ ರೈಲ್ವೇ ಮೇಲ್ಸೇತುವೆಯ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳಲು ಕಾರಣ ನಿರ್ಮಾಣದ ಶೇ. 50 ವೆಚ್ಚವನ್ನು ರಾಜ್ಯ ಸರಕಾರವು ನೀಡದಿರುವುದೇ ಕಾರಣವೆಂದು ಬಿ.ಜೆ.ಪಿ.ಜಿಲ್ಲಾಧ್ಯಕ್ಷ,ನ್ಯಾಯವಾದಿ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ.
2005- 2006ರ ಆರ್ಥಿಕ ವರ್ಷದಲ್ಲಿ ಪ್ರಾರಂಭಗೊಳ್ಳಬೇಕಾದ ನಿರ್ಮಾಣ ಕಾರ್ಯ ಇದುವರೆಗೂ ಮುಂದೂಡಲು ರಾಜ್ಯ ಸರಕಾರದ ಅನಾಸ್ಥೆಯೇ ಪ್ರಮುಖ ಕಾರಣವೆಂದು ಶ್ರೀಕಾಂತ್ ತಿಳಿಸಿದರು. ಮೇಲ್ಸೇತುವೆಯ ನಿರ್ಮಾಣ ಕಾರ್ಯಕ್ಕೆ ತಗಲುವ ವೆಚ್ಚದಲ್ಲಿ ಶೇ. 50ಕ್ಕಿಂತ ಹೆಚ್ಚು ಕೇಂದ್ರ ರೈಲ್ವೇ ಇಲಾಖೆ ಭರಿಸುತ್ತದೆ. ಬಾಕಿ ಬರುವಂತಹ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕಾದದ್ದು. ಈ ಮೊತ್ತವನ್ನು ರೈಲ್ವೇಗೆ ರಾಜ್ಯ ಸರಕಾರವು ಇದುವರೆಗೂ ಹಸ್ತಾಂತರಿಸಲಿಲ್ಲ. 2005-2006ರ ಆರ್ಥಿಕ ವರ್ಷದಿಂದಲೇ ಕೋಟಿಕುಳಂ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ರೈಲ್ವೇ ಇಲಾಖೆ ಸಜ್ಜಾಗಿತ್ತು. 2010-2011ರ ಆರ್ಥಿಕ ವರ್ಷದಿಂದ ರೈಲ್ವೇ 5.47 ಕೋಟಿ ರೂಪಾಯಿ ನಿಗಾ ಇರಿಸಿತ್ತು. ಆದರೆ ರಾಜ್ಯ ಸರಕಾರವು ಇದಕ್ಕೆ ಪೂರಕವಾದ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ.
ನಿಜಸ್ಥಿತಿ ಇದಾದುದರಿಂದ ಮೇಲ್ಸೇ ತುವೆಯ ನಿರ್ಮಾಣದ ಎಲ್ಲ ಮೊತ್ತವನ್ನು ಹಾಗೂ ಖರ್ಚನ್ನು ರಾಜ್ಯ ಸರಕಾರವು ಭರಿಸಬೇಕು. ಅದಕ್ಕಾಗಿ 19 ಕೋಟಿ ರೂಪಾಯಿ ರಾಜ್ಯ ಸರಕಾರ ನಿಗಾ ಇರಿಸಲಾಗಿದೆ ಎಂದೂ ಇದು ರೈಲ್ವೇಯ ತಾಂತ್ರಿಕ ಕಾರಣಗಳಿಂದಾಗಿ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಗೊಳಿಸಲು ಸಾಧ್ಯವಾಗಿಲ್ಲವೆಂದು ಉದುಮ ಶಾಸಕ ಕೆ. ಕುಂಞಿರಾಮನ್ ಅವರ ಆರೋಪ ಆಧಾರ ರಹಿತವಾಗಿದೆ ಎಂದು ಶ್ರೀಕಾಂತ್ ವ್ಯಕ್ತಗೊಳಿಸಿದರು.
ಅಪ್ರೋಚ್ ರೋಡ್ ಕಾಮ ಗಾರಿ ನಿರ್ಮಿಸಬೇಕಾದದ್ದು ರಾಜ್ಯ ಸರಕಾ ರದ ಹೊಣೆಗಾರಿಕೆಯಾಗಿದ್ದು ಆ ಕೆಲಸ ಕಾರ್ಯಗಳನ್ನು ಇನ್ನೂ ಪ್ರಾರಂಭಗೊಳಿ ಸಲಿಲ್ಲ. ರಾಜ್ಯ ಸರಕಾರದ ಅಡಚಣೆಗಳನ್ನು ಮರೆಯಾಗಿರಿಸಿಕೊಂಡು ಉದುಮ ಶಾಸಕರು ಅಪಪ್ರಚಾರ ನಡೆಸುತಿದ್ದಾರೆ. ರೈಲ್ವೇ ಮೇಲ್ಸೇತುವೆಯ ಕೆಲಸ ಕಾರ್ಯಗಳಿಗೆ ಅಡಚಣೆಗಳನ್ನು ಉಂಟುಮಾಡಿದ್ದಲ್ಲಿ ರಾಜ್ಯ ಸರಕಾರಕ್ಕೆ ವಿರುದ್ಧವಾಗಿ ಬೃಹತ್ ಪ್ರತಿಭಟನೆಗಳಿಗೆ ನೇತೃತ್ವ ನೀಡುವೆವು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
2018-2019
ವರ್ಷದಲ್ಲಿ
2018-2019 ವರ್ಷದಲ್ಲಿ 16.70 ಕೋಟಿ ರೂಪಾಯಿ ನಿರ್ಮಾಣ ವೆಚ್ಚಕ್ಕಾಗಿ ನಿಗದಿಪಡಿಸಿತ್ತು. ಇದಕ್ಕೆ ದೇಶೀಯ ರೈಲ್ವೇ ಸುರಕ್ಷಾ ನಿಧಿಯಿಂದ 5.31 ಕೋಟಿ ರೂಪಾಯಿಯನ್ನು ಇರಿಸಲಾಗಿತ್ತು. ನಿರ್ಮಾಣ ಮೊತ್ತದ ರಾಜ್ಯ ಸರಕಾರದ ಪಾಲು 5.47 ಕೋಟಿ ರೊ. ರೈಲ್ವೇಗೆ ಹಸ್ತಾಂತರಿಸಬೇಕಾಗಿತ್ತು. ಆದರೆ ಇದಕ್ಕಾಗಿ ಎಡರಂಗ ಸರಕಾರ ತಯಾರಾಗಲಿಲ್ಲ. ಯೋಜನೆಯು ಜಾರಿಗೊಳಿಸಲು 2005-2006ರಿಂದ 2018-2019ರ ವರೆಗೆ ನಿರ್ಮಾಣ ಮೊತ್ತವನ್ನು ಇರಿಸಲಾಗಿದ್ದು ರಾಜ್ಯ ಸರಕಾರದ 50 ಶೇಕಡಾ ಪಾಲು ನೀಡದುದರಿಂದ ನಿರ್ಮಾಣ ಕಾರ್ಯಗಳು ನಡೆಯಲಿಲ್ಲ. ಇನ್ನು ನಿರ್ಮಾಣ ನಡೆಯಲು ಎಸ್ಟಿಮೇಟ್ ನವೀಕರಿಸಬೇಕಾಗಿದೆ. ರಾಜ್ಯ ಸರಕಾರದ ಪಾಲನ್ನು ರೈಲ್ವೇಗೆ ನೀಡಿದರೆ ನಿರ್ಮಾಣ ಕಾರ್ಯ ಕೈಗೊಳ್ಳಲು ರೈಲ್ವೇ ಸಿದ್ಧವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.