ನೆನೆಯುವ ಅನುದಿನ; ಪುತ್ತೂರು ಮಹಾಲಿಂಗೇಶ್ವರ, ಈಶ್ವರಮಂಗಲ ಪಂಚಲಿಂಗೇಶ್ವರ ದೇವರು


Team Udayavani, Feb 21, 2020, 6:54 AM IST

chitra-31

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎನ್ನುತ್ತದೆ ಒಂದು ಹಾಡು. ಶಿವನನ್ನು ಭಜಿಸುವುದರ ಮಹತ್ವ ಇಂಥದ್ದು. ಅಂಥ ಮಹಾಶಿವನ ದಿನವಿದು, ಶಿವರಾತ್ರಿ. ಉಪವಾಸ, ಜಾಗರಣೆಗಳೊಂದಿಗೆ ಲಯಾಧಿಪತಿ ಸದಾಶಿವನ ಭಜನೆ ಈ ದಿನದ ವೈಶಿಷ್ಟé. ನಾಡಿನ ಎಲ್ಲ ಶಿವ ದೇಗುಲಗಳು ಶಿವರಾತ್ರಿ ಆಚರಣೆಗೆ ಸಿದ್ಧವಾಗಿವೆ. ಮನೆಗಳಲ್ಲೂ ಹರನಿಗೆ ವಿಶೇಷ ಅರ್ಚನೆ, ಅಭಿಷೇಕ ಇತ್ಯಾದಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳ ಶಿವರಾತ್ರಿ ಸಂಭ್ರಮದ ಇಣುಕುನೋಟ ಇಲ್ಲಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಾಲಯ
ಪುತ್ತೂರು: ಪುತ್ತೂರು ಸೀಮೆಯ ದೇವಾಲಯ, ಪ್ರಮುಖ ಶಿವ ದೇವಾಲಯವೂ ಆದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವ ವಿಶೇಷ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ಬೆಳಗ್ಗೆ ಶಿವರಾತ್ರಿಯ ವಿಶೇಷವಾಗಿ ಶತರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ, ಸಂಜೆ ಭಜನೆ, ರಾತ್ರಿ ಶ್ರೀ ದೇವರು ಬಲಿ ಹೊರಟು ಒಳಾಂಗಣದಲ್ಲಿ ಸಾಂಪ್ರದಾಯಿಕ ಸುತ್ತು ಬಲಿ ನಡೆದು ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆಯುತ್ತದೆ.  ಬಳಿಕ ದೇವರ ಚಂದ್ರಮಂಡಲ ಉತ್ಸವ, ಮುತ್ತು ಬೆಳೆದ ಕೆರೆಯಲ್ಲಿ ಕೆರೆ ಆಯನ ಉತ್ಸವ ನಡೆಯುತ್ತದೆ.

ವಿಶೇಷ: ಉತ್ಸವ ನಡೆಯುವ ಸಂದರ್ಭ ದೇವಾಲಯದ ಒಳಾಂಗಣದಲ್ಲಿ ಮಹಾ ಶಿವರಾತ್ರಿ ವ್ರತಾಚರಣೆಯಲ್ಲಿರುವ ಭಕ್ತರಿಂದ ಸಹಸ್ರ ಪ್ರದಕ್ಷಿಣೆ ಸೇವೆ ನಡೆಯುತ್ತದೆ.

ಈಶ್ವರಮಂಗಲ ಪಂಚಲಿಂಗೇಶ್ವರ ದೇವರು
ಈಶ್ವರಮಂಗಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳ ಹಿಂದೆ ಸರಳವಾಗಿ ಆಚರಣೆಯಾಗುತ್ತಿದ್ದ ಶಿವರಾತ್ರಿ ಈಚಿನ ವರ್ಷಗಳಲ್ಲಿ ಭಕ್ತರ ಒಗ್ಗೂಡುವಿಕೆಯಿಂದ ಶ್ರದ್ಧೆ, ಭಕ್ತಿಯಿಂದ ಮೇಳೈಸುತ್ತಿದೆ. ಜಾತ್ರೆ ಸಂದರ್ಭದಲ್ಲೇ ಶಿವರಾತ್ರಿ ಬರುವುದರಿಂದ ಬೆಳಗ್ಗೆ ದೇವರ ಉತ್ಸವ, ಮಧ್ಯಾಹ್ನ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಸೂರ್ಯಾಸ್ತದಿಂದ ಪ್ರಾರಂಭಗೊಂಡ ಭಜನೆ, ಮರುದಿನ ಸೂರ್ಯೋದಯದ ತನಕ ಶ್ರೀ ಪಂಚಲಿಂಗೇಶ್ವರ ಭಜನ ಸಂಘದ ನೇತೃತ್ವದಲ್ಲಿ ಸ್ಥಳೀಯ ಭಜನ ಸಂಘಗಳಿಂದ ಆಹೋರಾತ್ರಿ ಭಜನ ನಡೆಯುತ್ತದೆ. ಇದರಿಂದ ಭಕ್ತರು ಜಾಗ್ರತರಾಗಿ ದೇವರ ಸೇವೆಯಲ್ಲಿ ತೊಡಗುತ್ತಾರೆ.

ವಿಶೇಷ: ಜಾತ್ರೆ ಸಂದರ್ಭದಲ್ಲೇ ಶಿವರಾತ್ರಿ. ಉತ್ಸವ, ಏಕಾದಶ ರುದ್ರಾಭಿಷೇಕ, ಅಹೋರಾತ್ರಿ ಭಜನೆ ನಡೆಯುತ್ತದೆ.

ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನ
ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂದು ಮಧ್ಯಾಹ್ನ ಪೂಜೆ, ಸಂಜೆಯಿಂದ ಭಜಕರಿಂದ ಭಜನೆ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಚನೆ, ಕುಂಕುಮಾರ್ಚನೆ ಸೇವೆಗಳು ನಡೆಯುತ್ತದೆ.
ಪಾರಾಯಣ ಪಠಣ, ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಶಿವನಿಗೆ ಪ್ರಿಯವಾದ ಕೇದಗೆ, ಬಿಲ್ವಪತ್ರೆ, ತುಳಸಿ, ವಿವಿಧ ಪುಷ್ಪಗಳನ್ನು ದೇವರಿಗೆ ಆರ್ಪಿಸುತ್ತಾರೆ. ರಾತ್ರಿ ಭಜನೆಯೊಂದಿಗೆ ದೇವರಿಗೆ 8 ಗಂಟೆಗೆ ಪೂಜೆ ನಡೆದರೆ, ಅನಂತರ ಪ್ರತಿ ಮುಕ್ಕಾಲು ಗಂಟೆಗೊಮ್ಮೆ ದೇವರಿಗೆ ಪೂಜೆ ನಡೆದು ಮಧ್ಯರಾತ್ರಿ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯುತ್ತದೆ. ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

ವಿಶೇಷ: ಪಾರಾಯಣ, ರಾತ್ರಿ ಮಹಾಪೂಜೆ ಬಳಿಕ ಪ್ರತಿ ಮುಕ್ಕಾಲು ಗಂಟೆಗೊಮ್ಮೆ ದೇವರಿಗೆ ಪೂಜೆ, ಮಧ್ಯರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ.

ಅಡೂರು ಮಹಾಲಿಂಗೇಶ್ವರ ದೇವಸ್ಥಾನ
ಜಾಲೂಸೂರು: ಕಾಸರಗೋಡು ಜಿಲ್ಲೆಯ ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರವು ಗಜಪೃಷ್ಠಾಕಾರದಲ್ಲಿದ್ದು, ದಾರುಶಿಲ್ಪ ರಚನೆಮನ ಸೆಳೆಯುತ್ತವೆ. ಮಕರ ಮಾಸ 20 ರಿಂದ 24ರ ತನಕ ಪದಿಕ್ಕಾಲಡ್ಕ ದೈವಸ್ಥಾನದ ಕಳಿಯಾಟ ಮಹೋತ್ಸವ ನಡೆಯಲಿದ್ದು, ದೈವಗಳು ಕ್ಷೇತ್ರದ ನಡೆಯವರೆಗೆ ಆಗಮಿಸಿ, ನುಡಿ ಕೊಟ್ಟು ಪ್ರಸಾದ ಪಡೆದು ಹೋಗುವ ಪದ್ಧತಿ ಇದೆ. ಕ್ಷೇತ್ರದಿಂದ ಆರತಿ ಕೊಂಡೊಯ್ದು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಬೇಕಾಗುವ ಮೇಲರಿಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಕುಂಭ ಮಾಸ 27ರಂದು ಧ್ವಜಾರೋಹಣವಾಗಿ ಮೀನ ಸಂಕ್ರಮಣದಂದು ಪ್ರಾರಂಭಗೊಂಡು 5 ದಿನಗಳ ಪರ್ಯಂತ ಜಾತ್ರೆ, ಎರಡು ದಿನಗಳ ನೇಮ ನೆರವೇರುತ್ತದೆ.

ವಿಶೇಷ: ಶಿವರಾತ್ರಿಯಂದು ಮಾತ್ರ ಮಹಾಲಿಂಗೇಶ್ವರ ದೇವರಿಗೆ ರಾತ್ರಿ ಅಭಿಷೇಕ ನಡೆಯುತ್ತದೆ. ಅಂದು ನವಕಾಭಿಷೇಕ ಹಾಗೂ ಶ್ರೀ ಭೂತಬಲಿ ನಡೆಯುತ್ತದೆ.

ಕಡಬ ಶ್ರೀಕಂಠ ಸ್ವಾಮಿ ದೇವಸ್ಥಾನ
ಕಡಬ: ಇಲ್ಲಿನ ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 25ನೇ ವರ್ಷದ ಮಹಾಶಿವರಾತ್ರಿ ಉತ್ಸವ ನಡೆಯಲಿದೆ. ಉತ್ಸವದ ಪ್ರಯುಕ್ತ ಶ್ರೀ ಶ್ರೀಕಂಠ ದೇವರಿಗೆ ರಂಗಪೂಜೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ, ಅಪ್ಪಕಜ್ಜಾಯ ಸೇವೆ, ಸಂಗೀತ, ಭರತನಾಟ್ಯ, ಯಕ್ಷಗಾನ ನಡೆಯಲಿವೆ. ಶಿವ ಮತ್ತು ಗಣಪತಿ ನ ದೇವಾಲಯಗಳು ಅಕ್ಕಪಕ್ಕದಲ್ಲಿರುವುದು ವಿಶೇಷ. ಏಳು ಶತಮಾನಗಳ ಹಿಂದೆ ಇಲ್ಲಿನ ಗಣಪತಿ ದೇವಸ್ಥಾನವು ರಸಬಾವಿಯ ಮೇಲೆ ನಿರ್ಮಾಣವಾಗಿದೆ. ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು ಇಲ್ಲಿ ತಂಗಿ ಶ್ರೀ ಶ್ರೀಕಂಠ ಸ್ವಾಮಿಯನ್ನು ಆರಾಧಿಸಿದ್ದರೆಂದು “ಶಂಕರ ದಿಗ್ವಿಜಯ’ ಗಂಥದಲ್ಲಿ ಉಲ್ಲೇಖವಿದೆ.

ವಿಶೇಷ: ಶಂಕರಾಚಾರ್ಯರು ಆರಾಧಿಸಿದ್ದ ದೇವರು. ಶಿವರಾತ್ರಿಯಂದು ರಂಗಪೂಜೆ, ಸಂಗೀತ, ಭರತನಾಟ್ಯ, ಯಕ್ಷಗಾನ.

ಕಾಯ್ಮಣ- ಅಗಳಿ ಸದಾಶಿವ ದೇವಸ್ಥಾನ
ಕಾಣಿಯೂರು: ದರ್ಬೆಯಿಂದ 20 ಕಿ.ಮೀ. ದೂರದಲ್ಲಿದೆ ಅಗಳಿ ಶ್ರೀ ಸದಾಶಿವ ದೇವಸ್ಥಾನ. ಗಣಪತಿ, ಶಾಸ್ತಾವು, ಸುಬ್ರಹ್ಮಣ್ಯ, ಉಳ್ಳಾಕುಲು, ಪಂಜುರ್ಲಿ, ರಕ್ತೇಶ್ವರಿ, ಗುಳಿಗ ಆರಾಧನೆಯೂ ಇಲ್ಲಿ ನಡೆಯುತ್ತದೆ. ಆದಿದ್ರಾವಿಡ ಜನಾಂಗದ ವ್ಯಕ್ತಿಯೊಬ್ಬರಿಗೆ ಹೆಬ್ಬಲಸಿನ ಮರದ ಬುಡದಲ್ಲಿ ದೊರೆತ ಶಿವಲಿಂಗವನ್ನು ಬಲ್ಲಾಳ ಅರಸರು ಪ್ರತಿಷ್ಠಾಪಿಸಿ ಆರಾಧಿಸಿದ ರೆಂದು ಪ್ರತೀತಿ. ಪಶ್ಚಿಮಾಭಿಮುಖವಾದ ಗರ್ಭಗುಡಿ ಶಿಲಾಮಯ ವಾಗಿದ್ದು, ಎಡೆನಾಳ ಇದೆ. ಅಗಳಿ ಶ್ರೀ ಸದಾಶಿವ ಯುವಕ ಮಂಡಲದ ಸಹಕಾರದೊಂದಿಗೆ ವರ್ಷಂಪ್ರತಿ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ರಂಗಪೂಜೆ, ಮೊಸರು ಕುಡಿಕೆ ನಡೆಯುತ್ತಿದೆ.

ವಿಶೇಷ: ಶಿವರಾತ್ರಿಯಂದು ಮಂಗಳಾರತಿ, ಪಂಚಕಜ್ಜಾಯ, ರುದ್ರಾಭಿಷೇಕ, ಬಲಿವಾಡು, ರಂಗಪೂಜೆ, ಶಿವರಾತ್ರಿ ಉತ್ಸವ, ಧನುಪೂಜೆ ನಡೆಯುತ್ತದೆ.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ
ಉಪ್ಪಿನಂಗಡಿ: ನೇತ್ರಾವತಿ – ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ಉದ್ಭವ ಶಿವಲಿಂಗ ಶ್ರೀ ಸಹಸ್ರಲಿಂಗೇಶ್ವರ ಪುರಾಣ ಪ್ರಸಿದ್ಧವಾಗಿದೆ. ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ರಾಜಸೂಯ ಯಾಗಕ್ಕೆ ಮುಂದಾಗುತ್ತಾರೆ. ಅದಕ್ಕೆ ಪುರುಷ ಮೃಗ ತರಲೆಂದು ಭೀಮ ಹೋಗುತ್ತಾನೆ. ಮನೋವೇಗದಲ್ಲಿ ಸಂಚರಿಸುವ ಪುರುಷ ಮೃಗವನ್ನು ನಿಯಂತ್ರಿಸಲು ಮಹೇಂದ್ರಗಿರಿಯ ದಾರಿಯಲ್ಲಿ ಹನುಮಂತನ ರೋಮಗಳನ್ನು ಬೀಳಿಸುತ್ತಾನೆ. ಅವು ಶಿವಲಿಂಗದ ರೂಪ ತಾಳಿದಾಗ ಪುರುಷ ಮೃಗ ಪೂಜೆ ಮಾಡುತ್ತದೆ. ಭೀಮನೇ ಮೊದಲು ಭೀಮ ಯಾಗ ಮಂಟಪವನ್ನು ತಲುಪುತ್ತಾನೆ. ನದಿ ಒಡಲಿನಲ್ಲಿ ಲಿಂಗಾಕಾರದ ಸಾವಿರಾರು ಕಲ್ಲುಗಳಿವೆ. ಮಖೆ ಜಾತ್ರೆ ಸಂದರ್ಭ ಮರಳನ್ನು ಸರಿಸಿ ಭಕ್ತರು ಶಿವನನ್ನು ಪೂಜಿಸುತ್ತಾರೆ.

ಉಪ್ಪಿನಂಗಡಿ: ನೇತ್ರಾವತಿ – ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ಉದ್ಭವ ಶಿವಲಿಂಗ ಶ್ರೀ ಸಹಸ್ರಲಿಂಗೇಶ್ವರ ಪುರಾಣ ಪ್ರಸಿದ್ಧವಾಗಿದೆ. ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ರಾಜಸೂಯ ಯಾಗಕ್ಕೆ ಮುಂದಾಗುತ್ತಾರೆ. ಅದಕ್ಕೆ ಪುರುಷ ಮೃಗ ತರಲೆಂದು ಭೀಮ ಹೋಗುತ್ತಾನೆ. ಮನೋವೇಗದಲ್ಲಿ ಸಂಚರಿಸುವ ಪುರುಷ ಮೃಗವನ್ನು ನಿಯಂತ್ರಿಸಲು ಮಹೇಂದ್ರಗಿರಿಯ ದಾರಿಯಲ್ಲಿ ಹನುಮಂತನ ರೋಮಗಳನ್ನು ಬೀಳಿಸುತ್ತಾನೆ. ಅವು ಶಿವಲಿಂಗದ ರೂಪ ತಾಳಿದಾಗ ಪುರುಷ ಮೃಗ ಪೂಜೆ ಮಾಡುತ್ತದೆ. ಭೀಮನೇ ಮೊದಲು ಭೀಮ ಯಾಗ ಮಂಟಪವನ್ನು ತಲುಪುತ್ತಾನೆ. ನದಿ ಒಡಲಿನಲ್ಲಿ ಲಿಂಗಾಕಾರದ ಸಾವಿರಾರು ಕಲ್ಲುಗಳಿವೆ. ಮಖೆ ಜಾತ್ರೆ ಸಂದರ್ಭ ಮರಳನ್ನು ಸರಿಸಿ ಭಕ್ತರು ಶಿವನನ್ನು ಪೂಜಿಸುತ್ತಾರೆ.

ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನ
ಬೆಳ್ಳಾರೆ: ಖರಾಸುರ ಪ್ರತಿಷ್ಠೆ ಎಂಬ ಪ್ರತೀತಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕಿದೆ. ಅಜಿಪಿಲ ಮಹಾಲಿಂಗೇಶ್ವರ ದೇವರ ಬೃಹತ್‌ ವಿಗ್ರಹ ಹಾಗೂ ಕೃಷ್ಣ ಶಿಲೆಯ ಕೆತ್ತನೆ ಮನಮೋಹಕವಾಗಿದೆ. ಅಜಪಿಲದ ಮಹಾಲಿಂಗೇಶ್ವರ ಬಲ್ಲಾಳ ಅರಸರ ಆರಾಧ್ಯ ದೇವರು. ಬೆಳ್ಳಾರೆ ಪ್ರದೇಶದ ಆಡಳಿತ ಹೊಂದಿದ್ದ ಬಲ್ಲಾಳರಿಗೆ ಸಂತತಿ ಇಲ್ಲದೆ ಆಳ್ವಿಕೆ ನಿಂತುಹೋಗುವ ಪ್ರಮೇಯ ಎದುರಾದಾಗ ಅಜಪಿಲದಲ್ಲಿ ಸದಾಶಿವ ಚೈತನ್ಯದ ಗೋಚರವಾಗಿ ದೇವರ ಆರಾಧನೆಯಿಂದ ಸಂತಾನ ಪ್ರಾಪ್ತಿಯಾಯಿತೆಂದು ಇತಿಹಾಸ. ಸಂಜೆ ಮೂಲ್ಕಿ ನವವೈಭವ ಕಲಾವಿದರಿಂದ ಚಂದ್ರಶೇಖರ ಸುವರ್ಣ ನಿರ್ದೇಶನದಲ್ಲಿ ತುಳುನಾಡ ವೈಭವ ಕಾರ್ಯಕ್ರಮ ನಡೆಯಲಿದೆ.

ವಿಶೇಷ:ಶಿವರಾತ್ರಿಯಂದು ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಸಂಜೆ ಶತರುದ್ರಾಭಿಷೇಕ, ಪಾರಾಯಣ, ರಾತ್ರಿ ಮಹಾಪೂಜೆ ನಡೆಯಲಿದೆ.

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ
ಅರಂತೋಡು: ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸುಳ್ಯ ಸೀಮೆಯ ದೇವಾಲಯವಾಗಿದೆ.ಅರ್ಜುನನು ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ ಕ್ಷೇತ್ರವಿದು. ಕಿರಾತನ ರೂಪದಲ್ಲಿ ಆಗಮಿಸಿದ ಶಿವ ಹಾಗೂ ಅರ್ಜುನನ ಮಧ್ಯೆ ಬೇಟೆ ಯಾರಿಗೆ ಸೇರಬೇಕೆಂಬ ವಿಚಾರದಲ್ಲಿ ಯುದ್ಧ ನಡೆಯುತ್ತದೆ. ಕೊನೆಗೆ ಕಿರಾತ ಯಾರೆಂದು ಅರ್ಜುನನಿಗೆ ತಿಳಿಯುತ್ತದೆ. ಬಳಿಕ ಶಿವನು ಅರ್ಜುನನಿಗೆ ಪಾಶುಪಾತಾಸ್ತ್ರ, ಪಾರ್ವತಿಯು ಅಂಜನಾಸ್ತ್ರ ನೀಡಿ ಹರಸಿದ ಸ್ಥಳ ತುದಿಕಾನವೇ ಆಗಿದೆ. ಕಣ್ವ ಮುನಿಗಳ ತಪೋಭೂಮಿ ಇದು. ತುಲಾಭಾರ ಸೇವೆಗೆ ಇಲ್ಲಿ ವಿಶೇಷ ಮಹತ್ವ. ಕೊಡಗಿನ ರಾಜ ಲಿಂಗರಾಜ ಇಲ್ಲಿ ಚಿನ್ನದಲ್ಲಿ ತುಲಾಭಾರ ಮಾಡಿಸಿಕೊಂಡಿದ್ದ ಎನ್ನುವ ಪ್ರತೀತಿ ಇದೆ.

ವಿಶೇಷ: ತಂತ್ರಿಗಳ ಆಗಮನ, ರಾಶಿಪೂಜೆ, ರಂಗ ಪೂಜೆ. ರಾತ್ರಿ ಉತ್ಸವ ಬಲಿ, ನಿತ್ಯ ಬಲಿ, ಶನಿವಾರ ದರ್ಶನ ಬಲಿ, ಬಟ್ಟಲು ಕಾಣಿಕೆ, ತುಲಾ ಭಾರ ಸೇವೆ ನಡೆಯುತ್ತದೆ.

ಚಾರ್ವಾಕ ಕಪಿಲೇಶ್ವರ ದೇವಸ್ಥಾನ
ಕಾಣಿಯೂರು: ಕಾಣಿಯೂರು – ಮುದ್ವ ನಡುವೆ 5 ಕಿ.ಮೀ. ದೂರದಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನವಿದೆ. ಕ್ಷೇತ್ರ ರಕ್ಷಕರಾಗಿ ಜೋಡು ದೈವಗಳನ್ನು (ಉಳ್ಳಾಕುಲು) ಬಲ್ಲಾಳ ಅರಸರು ಸ್ಥಾಪಿಸಿದ್ದರು. ಪೂಮಾಣಿ, ಕಿನ್ನಿಮಾಣಿ ದೈವಗಳು ತಂಗಿ ಪೋಲಂಕಮ್ಮ ದೈಯದಯರೆ (ದೇವಿ) ಜತೆಗೆ ನೆಲೆನಿಲ್ಲಲು ಕಾಸ್ಪಾಡಿಯನ್ನು ಆರಿಸಿಕೊಂಡವು. ಇಡ್ಯಡ್ಕ, ಚಾವಡಿತ್ತಾರು ಎಂಬಲ್ಲಿ ವಿಶ್ರಮಿಸಿದ್ದ ವೇಳೆ ಆಕೆಯ ಮುಡಿಯಿಂದ ಬಿದ್ದ ಹೂವೊಂದು ಅಶೋಕ (ಅಚ್ಚಗೆ) ವೃಕ್ಷವಾಗಿ ಬೆಳೆಯಿತು. ಮಿತ್ತೂರ್‌ ಚಂದು ನಾಯರ್‌ ಮತ್ತು ಮರ್ಲ್ ಮಾಣಿ ದೈವಗಳೂ ನೆಲೆನಿಂತಿವೆ. ಶ್ರೀ ಕಪಿಲೇಶ್ವರ ದೇವರ ಗರ್ಭಗುಡಿಯ ಜತೆಗೆ ಗಣಪತಿ ಮತ್ತು ಶಾಸ್ತಾವು ಗುಡಿಗಳಿವೆ. ಪಶ್ಚಿಮಕ್ಕೆ ದೇವಿ ಗುಡಿ ಹಾಗೂ ಆಗ್ನೇಯದಲ್ಲಿ ನಾಗ ಬನವಿದೆ.

ವಿಶೇಷ: ಇಷ್ಟಾರ್ಥ ಸಿದ್ಧಿ ಕ್ಷೇತ್ರ. ಇಲ್ಲಿ ಜಾತ್ರೆಯ ಸಂದರ್ಭದಲ್ಲಿ ಅಚ್ಚಗೆಯ ಹೂವನ್ನು ದೈವಕ್ಕೆ ಒಪ್ಪಿಸುವ ಪದ್ಧತಿ ಇದೆ.

ಮುಕ್ವೆ -ಮಜಲುಮಾರು ಉಮಾಮಹೇಶ್ವರ ದೇವಸ್ಥಾನ
ನರಿಮೊಗರು: ಮಜಲುಮಾರು ಶ್ರೀ ಉಮಾಮಹೇಶ್ವರ ದೇವಾಲಯ ನರಿಮೊಗರು ಗ್ರಾಮದ ಮಜಲುಮಾರಿನಲ್ಲಿ ಉನ್ನತವಾದ ದಿಬ್ಬವೊಂದರ ಮೇಲೆ ಪೂರ್ವಾಭಿಮುಖವಾಗಿ ನಿರ್ಮಿತವಾಗಿದೆ.
ವ್ಯಾಲ ಮೃಗದ ಕೆತ್ತನೆ, ಹೊಯ್ಸಳ ಕಾಲದ ಆಭರಣಗಳ ಕೆತ್ತನೆ ಸೊಗಸಾಗಿವೆ. ಕ್ರಿ.ಶ. 13 -14ನೇ ಶತಮಾನದ ನಿರ್ಮಾಣವೆಂದು ಊಹಿಸಲಾಗಿದೆ. 2009ರ ಏಪ್ರಿಲ್‌ನಲ್ಲಿ ಇಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಪ್ರತಿ ತಿಂಗಳ ಸಂಕ್ರಮಣ ದಿನ ದುರ್ಗಾ ನಮಸ್ಕಾರ ಪೂಜೆ, ಗರಿಕೆ ಹೋಮ, ಅಪ್ಪ ಸೇವೆ, ಗಣಪತಿ ಹೋಮ, ದುರ್ಗಾ ನಮಸ್ಕಾರ ಪೂಜೆ, ಸ್ವಯಂವರ ಪೂಜೆ, ಮೃತ್ಯುಂಜಯ ಹೋಮ, ರಂಗಪೂಜೆ, ಏಕಾದಶ ರುದ್ರಾಭಿಷೇಕ ಸೇವೆಗಳು ನಡೆಯುತ್ತವೆ.

ವಿಶೇಷ: ಉಮಾ – ಮಹೇಶ್ವರರು ಜತೆಯಾಗಿ ಅನುಗ್ರ ಹಿಸುವ ಅಪೂರ್ವ ಕ್ಷೇತ್ರವಿದು. ಭಕ್ತರಿಗೆ ಮಾಂಗಲ್ಯ ಭಾಗ್ಯ, ನಾಗ ಸಾನ್ನಿಧ್ಯದಿಂದ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.

ಅಡೆಂಜ ಮಹಾಗಣಪತಿ ಪಂಚಲಿಂಗೇಶ್ವರ
ಕಲ್ಲುಗುಡ್ಡೆ: ಸುಮಾರು 600 ವರ್ಷಗಳ ಇತಿಹಾಸವಿರುವ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆ ತಟದಲ್ಲಿರುವ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಫೆ. 21ರಂದು ಉಷಾಪೂಜೆ, ಗಣಪತಿ ಹೋಮ, ಶಿವ ಪಂಚಾಕ್ಷರಿ ಪಠಣ, ಸಹಸ್ರನಾಮಾರ್ಚನೆ. ಏಕಾದಶ ರುದ್ರಾಭಿಷೇಕ, ಸಂಜೆ ಭಜನೆ, ಏಕದಶ ರುದ್ರಾಭಿಷೇಕ, ಸಹಸ್ರನಾಮ, ಬಿಲ್ವಾರ್ಚನೆ, ರಂಗಪೂಜೆ, ಮಹಾಪೂಜೆ ನಡೆಯಲಿವೆ. ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳ ನಡುವೆ ಈ ದೇವಾಲಯವಿದೆ. ಜೈನ ರಾಜರ ಆಡಳಿತಾವಧಿಯಲ್ಲಿ ಶಿವ ದೇವಾಲಯವನ್ನಾಗಿ ಮಾಡಿದರು ಎಂಬ ಪ್ರತೀತಿಯಿದೆ.

ವಿಶೇಷ: ಅಡೆಂಜದಲ್ಲಿ ಪಾಂಡವರು ಅಜ್ಞಾತವಾಸ ಸಂದರ್ಭ ನಿತ್ಯಪೂಜೆಗೆಂದು ಐದು ಶಿಲೆಗಳನ್ನು ಹೊಳೆಯಿಂದ ತಂದು, ಶಿವಲಿಂಗವಾಗಿ ಪ್ರತಿಷ್ಠಾಪಿಸಿದರು.

ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನ
ನರಿಮೊಗರು: ಕಾಶಿ ಕ್ಷೇತ್ರ ಬಿಟ್ಟರೆ ಈಶಾನ್ಯ ಭಾಗದಲ್ಲಿ ಪುಷ್ಕರಣಿ ಇರುವ 2ನೇ ದೇವಸ್ಥಾನ ಇದು. ಗರ್ಭಗುಡಿಯಲ್ಲಿ ದೇವರಿಗೆ ಅಭಿಷೇಕ ಮಾಡಿದ ನೀರು ತೀರ್ಥಬಾವಿ. ಮೂಲಕ ಪುಷ್ಕರಿಣಿ ಸೇರುತ್ತದೆ. ಈಶಾನ್ಯ ಭಾಗದಲ್ಲಿ ಪುಷ್ಕರಿಣಿ ಕಾಶಿ ಹಾಗೂ ಇಲ್ಲಿ ಮಾತ್ರವಿದೆ. ಈ ಪುಷ್ಕರಿಣಿಯ ಅಭಿವೃದ್ಧಿಗೆ 60 ಲಕ್ಷ ರೂ. ವೆಚ್ಚದ ಯೋಜನೆ ಸಿದ್ಧವಾಗಿದೆ. ದೇಗುಲಕ್ಕೆ ಸಂಬಂಧಿಸಿದ ಶಿಲಾ ಶಾಸನವೊಂದು ನಶಿಸಿ ಹೋಗಿದೆ. 2008ರಲ್ಲಿ ದೇವಸ್ಥಾನದ ನವೀಕರಣ, ಬ್ರಹ್ಮಕಲಶೋತ್ಸವ ನಡೆದಿದೆ. ಹೊರಾಂಗಣಕ್ಕೆ ಇಂಟರ್‌ ಲಾಕ್‌, ಮುಂಭಾಗದಲ್ಲಿ ಶೀಟ್‌ ಅಳವಡಿಸಿ ಛಾವಣಿ ನಿರ್ಮಿಸಲಾಗಿದೆ. ಪಾಕಶಾಲೆ, ಭೋಜನಶಾಲೆ. ಸಭಾಭವನ ಸುಸಜ್ಜಿತವಾಗಿವೆ.

ವಿಶೇಷ: ಖರಾಸುರ ಶಿವನಿಂದ ವರವಾಗಿ ಪಡೆದ ಮೂರು ಶಿವಲಿಂಗಗಳಲ್ಲಿ ನಾಲಗೆಯಲ್ಲಿ ಇರಿಸಿದ್ದ ಶಿವ ಲಿಂಗವನ್ನು ಮಂಡಿ ಊರಿ ಇರಿಸಿದ ಸ್ಥಳವೆಂದು ಪ್ರಸಿದ್ಧ.

ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನ
ಬೆಳಂದೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನ ಪಾಂಡವ ಪ್ರತಿಷ್ಠೆಯ ಶಿವಾಲಯ.
ಕೇಪುಳೇಶ್ವರ ದೇವಸ್ಥಾನದ ಮುಂದಿನ ತೀರ್ಥಬಾವಿಯನ್ನು ಭೀಮ ತನ್ನ ಕಿರು ಬೆರಳೂರಿ ರಚಿಸಿದ ಎಂದು ಐತಿಹ್ಯವಿದೆ. ಈ ಬಾವಿಯಲ್ಲಿ ನೀರು ಬತ್ತಿದ ನಿದರ್ಶನಗಳಿಲ್ಲ. ಸಂಕ್ರಮಣ ದಿನ ತಲಕಾವೇರಿಯಂತೆ ಇಲ್ಲಿಯೂ ತೀಥೋìದ್ಭವ ಆಗುತ್ತದೆ. ಇದರಲ್ಲಿ ಸ್ನಾನ ಮಾಡಿದರೆ ಕುದಿ ಜ್ವರ, ಕೆಡು ಗುಣವಾಗುತ್ತವೆ ಎನ್ನುವುದು ಭಕ್ತರ ನಂಬಿಕೆ. ಸಂತತಿ ಪ್ರಾಪ್ತಿಗಾಗಿ ಇಲ್ಲಿ ರಂಗಪೂಜೆ ಹರಕೆ ಪ್ರಸಿದ್ಧವಾಗಿದೆ. ಇಲ್ಲಿ 20 ವರ್ಷಗಳಿಂದ ಸಾಮೂಹಿಕ ಶಿವರಾತ್ರಿ ಉತ್ಸವ ನಡೆಯುತ್ತಿದೆ.

ವಿಶೇಷ: ಒಂದೇ ಅಂಗಣದಲ್ಲಿ ಎರಡು ಗರ್ಭಗುಡಿಗಳು ಇವೆ. 800 ವರ್ಷಗಳ ಇತಿಹಾಸದ ದೇಗುಲ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದೆ.

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ
ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವ ಸ್ಥಾನದಲ್ಲಿ ನೆಲೆನಿಂತ ಶ್ರೀ ಪಂಚಲಿಂಗೇಶ್ವರ ದೇವರು ವಿಟ್ಲ ಸೀಮೆಯ ಆರಾಧ್ಯ ಮೂರ್ತಿ. ಇಲ್ಲಿ ಫೆ. 21ರಂದು ಮಹಾಶಿವ ರಾತ್ರಿ ಉತ್ಸ ವದ ಅಂಗವಾಗಿ ಲಕ್ಷ ಬಿಲ್ವಾರ್ಚನೆ, ಏಕಾದಶ ರುದ್ರಾಭಿಷೇಕ, ದೇವರ ಬಲಿ ಉತ್ಸವ ನೆರವೇರು ತ್ತದೆ.
ವಿಟ್ಲ ಸೀಮೆಯ ದೇಗುಲಗಳಲ್ಲೆಲ್ಲ ಇದು ಪ್ರಮುಖ ಮತ್ತು ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇಗುಲಗಳಿಲ್ಲ. ಸಾವಿರ ವರ್ಷಗಳ ಇತಿಹಾಸ ವಿರುವ ಈ ದೇಗುಲದಲ್ಲಿ ಪಂಚಭೂತಗಳಲ್ಲಿ ಪರಮೇಶ್ವರನನ್ನು ಪ್ರಮಾಣೀಕರಿಸಿ ಶಿರಬಾಗಿ ಉಪಾಸನೆ ಸಲ್ಲಿಸುವ ಪದ್ಧತಿ ಇದೆೆ.

ವಿಶೇಷ: ಸೀಮೆ ದೇವಸ್ಥಾನವಾದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿರುವ ಲಕ್ಷ ಬಿಲ್ವಾರ್ಚನೆ ವಿಶೇಷವಾಗಿದೆ.

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.