ಅಚಲ ಯೋಗಿ ಮಹಾಶಿವ; ಮಹಾಶಿವರಾತ್ರಿ ಅಚಲತೆಯ ರಾತ್ರಿ

ಮಹಾ ಶಿವರಾತ್ರಿ ಪುಣ್ಯ ಕಾಲ

Team Udayavani, Feb 21, 2020, 6:10 AM IST

shivaratri

ಸೃಷ್ಟಿ, ಸ್ಥಿತಿ ಮತ್ತು ಲಯಗಳ ದೈವಸ್ವರೂಪವೇ ಬ್ರಹ್ಮ, ವಿಷ್ಣು ಮತ್ತು ಶಿವ. ಇವುಗಳಲ್ಲಿ ಲಯಕಾರಕನಾದ ಶಿವನ ಸ್ಮರಣೆಗೆ ವಿಶೇಷವಾದ ದಿನವಿದು. ಭಕ್ತರೆಲ್ಲ ಉಪವಾಸ, ಜಾಗರಣೆ, ಪ್ರಾರ್ಥನೆ ಮೂಲಕ ಭವತಾಪಹಾರಕ ಶಿವನನ್ನು ಆರಾಧಿಸುವ ಪುಣ್ಯ ಸಮಯವೇ ಮಹಾಶಿವರಾತ್ರಿ.

1. ಅಮೃತಕ್ಕಾಗಿ ದೇವತೆಗಳು ಮತ್ತು ಅಸುರರು ಸಮುದ್ರ ಮಂಥನ ಮಾಡುವ ವೇಳೆಯಲ್ಲಿ ಹಾಲಾಹಲ(ಮಹಾವಿಷ) ಉತ್ಪತ್ತಿಯಾಗುತ್ತದೆ. ಇಡೀ ಸೃಷ್ಟಿಯನ್ನೇ ನಾಶಮಾಡುವ ಶಕ್ತಿ ಹಾಲಾಹಲಕ್ಕಿರುತ್ತದೆ. ನಭೋಮಂಡಲವನ್ನು ಉಳಿಸುವುದಕ್ಕಾಗಿ ಶಂಕರನು ಹಾಲಾಹಲವನ್ನು ಕುಡಿಯುತ್ತಾನೆ. ಆಗ ಪಾರ್ವತಿ ದೇವಿ ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲÇÉೇ ತಡೆ ಹಿಡಿದಳು. ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷ ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು. ವಿಷವು ಗಂಟಲಲ್ಲೇ ಉಳಿದು, ಶಿವನ ಗಂಟಲು ನೀಲಿ ಬಣ್ಣ ಪಡೆದದ್ದರಿಂದ, ಆತನನ್ನು ನೀಲಕಂಠ ಎನ್ನುತ್ತಾರೆ.

2. ಪ್ರತಿ ಸಂವತ್ಸರ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ
ಚತುರ್ದಶಿಯಂದು ರಾತ್ರಿ ಸಮಯದಲ್ಲಿ ಮಹಾಶಿವನು ಪಾರ್ವತಿ ದೇವಿಯ ಜತೆಗೆ ಭೂಸಂಚಾರ ಮಾಡುತ್ತಾನೆ. ಆ ಸಮಯದಲ್ಲಿ, ಅಂದರೆ ಶಿವರಾತ್ರಿ ರಾತ್ರಿಯ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿ¨ªಾನೆ ಎಂಬು ದರ ಬಗ್ಗೆ ಶಾಸ್ತ್ರೋಕ್ತಿ ಇದೆ.

3. ಸ್ಕಂದ ಪುರಾಣದಲ್ಲೂ ಶಿವರಾತ್ರಿ ಹಬ್ಬದ ಬಗ್ಗೆ ಉÇÉೇಖವಿದೆ. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ.

4. ತ್ರಯೋದಶಿಯು ಶಕ್ತಿರೂಪವಾದರೆ,, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉÇÉೇಖವಿದೆ.

ಒಂದು ಕಾಲದಲ್ಲಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ವರ್ಷದ ಮುನ್ನೂರ ಅರವತ್ತೈದು ದಿನಗಳೂ ಹಬ್ಬಗಳಿರುತ್ತಿದ್ದವು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ವರ್ಷದ ಪ್ರತಿದಿನವನ್ನೂ ಆಚರಿಸಲು ಅವರಿಗೊಂದು ನೆಪ ಬೇಕಿತ್ತಷ್ಟೆ. ಈ ಮುನ್ನೂರ ಅರವತ್ತೈದು ಹಬ್ಬಗಳನ್ನು ಬೇರೆ ಬೇರೆ ಕಾರಣಗಳಿಗೆ ಮತ್ತು ಜೀವನದ ಬೇರೆ ಬೇರೆ ಉದ್ದೇಶಗಳಿಗೆ ಆಚರಿಸಲಾಗುತ್ತಿತ್ತು. ನಾನಾ ರೀತಿಯ ಐತಿಹಾಸಿಕ ಘಟನೆಗಳು, ಗೆಲುವುಗಳು ಅಥವಾ ಜೀವನದ ನಿರ್ದಿಷ್ಟ ಸಂದರ್ಭಗಳಾದ ಬಿತ್ತನೆ, ನಾಟಿ ಮತ್ತು ಕೊಯ್ಲು ಮಾಡುವುದನ್ನು ಸಂಭ್ರಮಿಸಲು ಆ ಹಬ್ಬಗಳನ್ನು ಆಚರಿಸುತ್ತಿದ್ದರು. ಹೀಗೆ, ಪ್ರತಿ ಸಂದರ್ಭಕ್ಕೂ ಒಂದು ಹಬ್ಬವಿರುತ್ತಿತ್ತು. ಆದರೆ ಮಹಾಶಿವರಾತ್ರಿಯು ಬೇರೆಯದ್ದೇ ಪ್ರಾಮುಖ್ಯತೆಯನ್ನು ಹೊಂದಿದೆ.

ಪ್ರತಿ ಚಾಂದ್ರಮಾಸದ ಹದಿನಾಲ್ಕನೇ ರಾತ್ರಿ ಅಥವಾ ಅಮಾವಾಸ್ಯೆಯ ಹಿಂದಿನ ರಾತ್ರಿಯನ್ನು ಶಿವರಾತ್ರಿಯೆಂದು ಕರೆಯಲಾಗುತ್ತದೆ. ಒಂದು ವರ್ಷದಲ್ಲಿ ಸಂಭವಿಸುವ ಎÇÉಾ ಹನ್ನೆರಡು ಶಿವರಾತ್ರಿಗಳಲ್ಲಿ, ಫೆಬ್ರವರಿ-ಮಾರ್ಚಿನಲ್ಲಿ ಬರುವ ಮಹಾ ಶಿವರಾತ್ರಿ ಹೆಚ್ಚಿನ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ರಾತ್ರಿಯಂದು, ಭೂಮಿಯ ಉತ್ತರ ಗೋಳಾರ್ಧದಲ್ಲಿ ಮನುಷ್ಯರಲ್ಲಿ ಶಕ್ತಿಯ ನೈಸರ್ಗಿಕವಾದ ಏರಿಕೆ ಉಂಟಾಗುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಮನುಷ್ಯರನ್ನು ಅವರ ಆಧ್ಯಾತ್ಮಿಕ ಉತ್ತುಂಗಕ್ಕೆ ತಳ್ಳುತ್ತಿರುತ್ತದೆ. ನಾವಿದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದೇ ನಮ್ಮ ಸಂಪ್ರದಾಯದಲ್ಲಿ, ರಾತ್ರಿಯಿಡೀ ಜರುಗುವಂತಹ ಒಂದು ಉತ್ಸವವನ್ನು ನಾವು ನಿಗದಿಪಡಿಸಿದ್ದೇವೆ. ರಾತ್ರಿ ಪೂರ್ತಿ ನಡೆಯುವ ಈ ಉತ್ಸವದ ಮೂಲ ಭೂತ ಅಂಶವೆಂದರೆ, ಸ್ವಾಭಾವಿಕವಾಗಿ ಏರುವ ಶಕ್ತಿಗೆ ಅದರ ದಾರಿ ಯನ್ನು ಕಂಡುಕೊಳ್ಳಲು ಅನುವು ಮಾಡಿಕೊಡು ವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಅದಕ್ಕಾಗಿ ನೀವು ನಿಮ್ಮ ಬೆನ್ನು ಮೂಳೆಯನ್ನು ನೆಟ್ಟಗಿನ ಸ್ಥಿತಿಯಲ್ಲಿ ಇಟ್ಟುಕೊಂಡು, ಎಚ್ಚರವಾಗಿರಬೇಕಾಗುತ್ತದೆ.

ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಮಹಾಶಿವ ರಾತ್ರಿ ಬಹಳ ಪ್ರಮುಖವಾದದ್ದು. ಕುಟುಂಬ ಜೀವನದಲ್ಲಿರುವವರಿಗೆ ಮತ್ತು ಜಗತ್ತಿನಲ್ಲಿನ ಮಹತ್ವಾಕಾಂಕ್ಷಿಗಳಿಗೂ ಸಹ ಇದು ತುಂಬ ಮಹತ್ವವುಳ್ಳದ್ದಾಗಿದೆ.

ಕುಟುಂಬಸ್ಥರು ಮಹಾ ಶಿವರಾತ್ರಿಯನ್ನು ಶಿವನ ಮದುವೆ ವಾರ್ಷಿಕೋತ್ಸವವಾಗಿ ಆಚರಿಸುತ್ತಾರೆ. ಲೌಕಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವವರು ಆ ದಿನವನ್ನು ಶಿವನು ತನ್ನ ಶತ್ರುಗಳನ್ನೆಲ್ಲಾ ಸದೆಬಡಿದ ದಿನವಾಗಿ ನೋಡುತ್ತಾರೆ. ಆದರೆ ಆಧ್ಯಾತ್ಮಿಕ ಸಾಧಕರು, ಮುನಿಗಳು, ತಪಸ್ವಿಗಳು, ಯೋಗಿಗಳಿಗೆ ಮಹಾಶಿವರಾತ್ರಿಯು ಶಿವನು ಕೈಲಾಸ ಪರ್ವತದೊಂದಿಗೆ ಐಕ್ಯವಾದ ದಿನ. ಅವನು ಪರ್ವತದ ಹಾಗೆ ಸಂಪೂರ್ಣವಾಗಿ ನಿಶ್ಚಲನಾದ. ಯೋಗ ಪರಂಪರೆಯಲ್ಲಿ, ಶಿವನನ್ನು ಒಬ್ಬ ದೇವರೆಂದು ಪೂಜಿಸಲಾಗುವುದಿಲ್ಲ, ಆದರೆ ಯೋಗ ವಿಜ್ಞಾನದ ಉಗಮಕಾರಕ, ಆದಿ ಗುರು ಎಂದು ಪರಿಗಣಿಸಲಾಗುತ್ತದೆ. ಅನೇಕ ಸಹಸ್ರಮಾನಗಳ ಧ್ಯಾನದ ನಂತರ, ಒಂದು ದಿನ ಅವನು ಸಂಪೂರ್ಣವಾಗಿ ಅಚಲನಾದನು. ಆ ದಿನವೇ ಮಹಾಶಿವರಾತ್ರಿ. ಅವನಲ್ಲಿನ ಎಲ್ಲಾ ಚಲನೆಗಳೂ ನಿಂತುಹೋಗಿ, ಅವನು ಅತ್ಯಂತ ಅಚಲನಾದನು. ಆದ್ದರಿಂದ ಯೋಗಿಗಳು ಮಹಾಶಿವರಾತ್ರಿಯನ್ನು ಅಚಲತೆಯ ರಾತ್ರಿಯಾಗಿ ನೋಡುತ್ತಾರೆ.

ದಂತಕಥೆಗಳನ್ನು ಹೊರತುಪಡಿಸಿ, ಯೋಗ ಸಂಪ್ರದಾಯದಲ್ಲಿ ಈ ದಿನ ಹಾಗೂ ರಾತ್ರಿಯನ್ನು ಏಕಿಷ್ಟು ಮುಖ್ಯವಾಗಿ ಕಾಣುತ್ತಾ ರೆಂದರೆ ಆಧ್ಯಾತ್ಮಿಕ ಅನ್ವೇಷಕರಿಗೆ ಅದು ನೀಡುವ ಅಗಾಧವಾದ ಸಾಧ್ಯತೆಗಳ ಕಾರಣಕ್ಕೆ.

ಆಧುನಿಕ ವಿಜ್ಞಾನವು ಹಲವು ಹಂತಗಳ ಪ್ರಯೋಗಗಳ ಮೂಲಕ ಹಾದು ಹೋಗಿ, ನೀವಿಂದು ತಿಳಿದಿರುವ ಎಲ್ಲ ಜೀವಗಳೂ, ದ್ರವ್ಯಪದಾರ್ಥ ಮತ್ತು ಅಸ್ತಿತ್ವವೆಲ್ಲವೂ, ಬ್ರಹ್ಮಾಂಡ ಹಾಗೂ ಎಲ್ಲ ಆಕಾಶ ಗಂಗೆಗಳೂ ಕೋಟ್ಯಂತರ ರೀತಿಗಳಲ್ಲಿ ಅಭಿವ್ಯಕ್ತವಾಗಿರುವ ಒಂದೇ ಒಂದು ಶಕ್ತಿ ಎಂದು ಸಾಬೀತುಪಡಿಸುವ ಹಂತಕ್ಕೆ ಬಂದು ತಲುಪಿದೆ. ಈ ವೈಜ್ಞಾನಿಕ ವಾಸ್ತವಾಂಶವು ಪ್ರತಿಯೊಬ್ಬ ಯೋಗಿಯಲ್ಲೂ ಒಂದು ಅನುಭವಾತ್ಮಕ ಸತ್ಯವಾಗಿದೆ. ಯೋಗಿ ಎಂಬ ಪದದ ಅರ್ಥ ಅಸ್ತಿತ್ವದ ಏಕತೆ ಯನ್ನು ಸಾಕ್ಷತ್ಕರಿಸಿಕೊಂಡವನು ಎಂದು. ನಾನು ಯೋಗ ಎಂದು ಹೇಳಿದಾಗ, ನಾನು ಯಾವುದೇ ಒಂದು ನಿರ್ದಿಷ್ಟವಾದ ಅಭ್ಯಾಸ ಅಥವಾ ವ್ಯವಸ್ಥೆಯ ಕುರಿತಾಗಿ ಹೇಳುತ್ತಿಲ್ಲ. ಅಪರಿಮಿತ ವಾದುದ್ದನ್ನು ತಿಳಿಯಲು, ಅಸ್ತಿತ್ವದಲ್ಲಿನ ಏಕತೆಯನ್ನು ಅನುಭವಿಸಲು ಇರುವ ತೀವ್ರವಾದ ಹಾತೊರೆಯುವಿಕೆಯೇ ಯೋಗ. ಮಹಾ ಶಿವರಾತ್ರಿಯ ರಾತ್ರಿಯು ಈ ಏಕತೆಯನ್ನು ಅನುಭವಿಸುವ ಸದವಕಾಶವನ್ನು ನಮಗೆ ನೀಡುತ್ತದೆ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ
isha.sadhguru.org/in/kn)

– ಸದ್ಗುರು

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.