ಕಾಂಗರೂ ನಾಡಿನಲ್ಲಿ ವನಿತಾ ಟಿ20 ವಿಶ್ವಕಪ್‌ ಕಲರವ

ಭಾರತಕ್ಕೆ ಚಾಂಪಿಯನ್‌ ಆಸೀಸ್‌ ಸವಾಲು

Team Udayavani, Feb 21, 2020, 6:10 AM IST

asis-savalu

ಸಿಡ್ನಿ: ಹೆಸರಿಗೆ ತಕ್ಕಂತೆ 2020 ಎನ್ನುವುದು ಟಿ20 ವಿಶ್ವಕಪ್‌ ವರ್ಷವಾಗಿ ಸುದ್ದಿಯಲ್ಲಿದೆ. ವನಿತೆಯರ ಹಾಗೂ ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿಗಳೆರಡೂ ಈ ವರ್ಷ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಬೋನಸ್‌ ಆಗಿವೆ. ಈ ಎರಡೂ ಕೂಟಗಳು ಆಸ್ಟ್ರೇಲಿಯದ ಆತಿಥ್ಯದಲ್ಲಿ ನಡೆಯುತ್ತಿರುವುದು ವಿಶೇಷ. ವರ್ಷಾಂತ್ಯದಲ್ಲಿ ಪುರುಷರ ಪಂದ್ಯಾವಳಿ ಏರ್ಪಟ್ಟರೆ, ಶುಕ್ರವಾರದಿಂದಲೇ ವನಿತಾ ವಿಶ್ವಕಪ್‌ ಕಲರವ ಮೊದಲ್ಗೊಳ್ಳಲಿದೆ. ಸಿಡ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಹಾಗೂ ಭಾರತ ಮುಖಾಮುಖೀ ಆಗಲಿವೆ.

ಕೂಟದಲ್ಲಿ 10 ತಂಡಗಳು ಪಾಲ್ಗೊಳ್ಳಲಿವೆ. ಇವನ್ನು ತಲಾ 5 ತಂಡಗಳ 2 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಲೀಗ್‌ನಲ್ಲಿ ಒಂದು ಸುತ್ತಿನ ಸ್ಪರ್ಧೆ ಏರ್ಪಡಲಿದೆ. ಗುಂಪಿನ ಮೊದಲೆರಡು ಸ್ಥಾನ ಪಡೆದ ತಂಡಗಳು ಸೆಮಿ ಪ್ರವೇಶಿಸಲಿವೆ.

“ಎ’ ವಿಭಾಗ ಹೆಚ್ಚು ಬಲಿಷ್ಠ
“ಎ’ ವಿಭಾಗ ಹೆಚ್ಚು ಬಲಿಷ್ಠವಾಗಿ ಗೋಚರಿ ಸುತ್ತಿದ್ದು, ಇದನ್ನು “ಗ್ರೂಪ್‌ ಆಫ್ ಡೆತ್‌’ ಎಂದೇ ಗುರುತಿಸಲಾಗುತ್ತಿದೆ. ಹಾಲಿ ಚಾಂಪಿಯನ್‌ ಹಾಗೂ ಅತೀ ಹೆಚ್ಚು 4 ಸಲ ಕಪ್‌ ಎತ್ತಿರುವ ಆಸ್ಟ್ರೇಲಿಯ, ಅಪಾಯಕಾರಿ ನ್ಯೂಜಿಲ್ಯಾಂಡ್‌, ಏರುಪೇರಿನ ಫ‌ಲಿತಾಂಶಕ್ಕೆ ಹೆಸರುವಾಸಿಯಾಗಿರುವ ಶ್ರೀಲಂಕಾ ಜತೆಗೆ ಬಾಂಗ್ಲಾದೇಶ ತಂಡವನ್ನು ಭಾರತ ಎದುರಿಸಬೇಕಿದೆ.

ಭಾರತದ ವನಿತೆಯರು ಈವರೆಗೆ ವಿಶ್ವಕಪ್‌ ಎತ್ತಿಲ್ಲ. ಅಷ್ಟೇ ಅಲ್ಲ, ಫೈನಲ್‌ ಕೂಡ ಪ್ರವೇಶಿಸಿಲ್ಲ. ಈವರೆಗೆ 3 ಸಲ ಸೆಮಿಫೈನಲ್‌ ತಲುಪಿದ್ದೇ ಅತ್ಯುತ್ತಮ ಸಾಧನೆ (2009, 2010 ಮತ್ತು 2018). ವಿಶ್ವಕಪ್‌ನಲ್ಲಿ ಆಡಿದ 26 ಪಂದ್ಯಗಳಲ್ಲಿ ಸೋಲು ಗೆಲುವಿನ ಸಮಬಲದ ಸಾಧನೆ ದಾಖಲಿಸಿದೆ (13 ಜಯ, 13 ಸೋಲು). ಈ ಸಲವಾದರೂ ಭಾರತದ ಟ್ರೋಫಿಯ ಕನಸು ನನಸಾದೀತೇ ಎಂಬುದು ಎಲ್ಲರ ಕುತೂಹಲ ಹಾಗೂ ನಿರೀಕ್ಷೆ.

ಸ್ಥಿರ ಪ್ರದರ್ಶನ ಅಗತ್ಯ
ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ಈ ಕೂಟದ ಫೇವರಿಟ್‌ ತಂಡವಂತೂ ಅಲ್ಲ. ಆದರೆ ಸೆಮಿಫೈನಲ್‌ ಸಾಮರ್ಥ್ಯದ ಬಲಿಷ್ಠ ಪಡೆಯನ್ನು ಹೊಂದಿದೆ. ಸ್ಮತಿ ಮಂಧನಾ, ಹರ್ಮನ್‌ಪ್ರೀತ್‌ ಕೌರ್‌, ಜೆಮಿಮಾ ರೋಡ್ರಿಗಸ್‌, ಯುವ ಆಟಗಾರ್ತಿ ಶಫಾಲಿ ವರ್ಮ ಭಾರತದ ಬ್ಯಾಟಿಂಗ್‌ ವಿಭಾಗದ ಆಧಾರಸ್ತಂಭವಾಗಿದ್ದಾರೆ. ಆದರೆ ವೇದಾ ಕೃಷ್ಣಮೂರ್ತಿ, ಕೀಪರ್‌ ತನಿಯಾ ಭಾಟಿಯ ರನ್‌ ಬರಗಾಲದಿಂದ ಹೊರ ಬರಬೇಕಿದೆ.
ಭಾರತದ ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ಗಳೇ ತುಂಬಿಕೊಂಡಿದ್ದಾರೆ.

ಇವರೆಂದರೆ ರಾಜೇಶ್ವರಿ ಗಾಯಕ್ವಾಡ್‌, ಪೂನಂ ಯಾದವ್‌, ರಾಧಾ ಯಾದವ್‌ ಮತ್ತು ದೀಪ್ತಿ ಶರ್ಮ. ಶಿಖಾ ಪಾಂಡೆ ವೇಗದ ಅಸ್ತ್ರ. ಎಲ್ಲರೂ ಸ್ಥಿರ ಪ್ರದರ್ಶನ ನೀಡುವುದು ಅಗತ್ಯ.

ಮೊದಲ ಸವಾಲೇ ಕಠಿನ
ಭಾರತಕ್ಕೆ ಮೊದಲ ಸವಾಲೇ ಕಠಿನವಾಗಿ ಗೋಚರಿಸಿದೆ. ಚಾಂಪಿಯನ್ನರ ಆಟವನ್ನಾಡುವ ಆಸ್ಟ್ರೇಲಿಯವನ್ನು ಅವರದೇ ಅಂಗಳದಲ್ಲಿ ಎದುರಿಸುವುದು ಸುಲಭವಲ್ಲ. ಕಳೆದ ತ್ರಿಕೋನ ಸರಣಿಯಲ್ಲಿ ಭಾರತ ಒಮ್ಮೆ ಆಸೀಸ್‌ಗೆ ಸೋಲಿನೇಟು ನೀಡಿತಾದರೂ ಫೈನಲ್‌ನಲ್ಲಿ ಎಡವಿತು. ಅಲ್ಲದೇ ವಿಶ್ವಕಪ್‌ಎನ್ನುವುದು “ಡಿಫ‌ರೆಂಟ್‌ ಬಾಲ್‌ ಗೇಮ್‌’. ಮೊದಲ ಮುಖಾಮುಖೀಯೇ “ಎ’ ವಿಭಾಗದ ಚಿತ್ರಣವನ್ನು ಬಿಡಿಸಿಡುತ್ತದೆ. ಭಾರತ ಗೆದ್ದರೆ ದೊಡ್ಡ ಬೇಟೆಯೊಂದನ್ನು ನಡೆಸಿದಂತಾಗುತ್ತದೆ. ಬಳಿಕ ನ್ಯೂಜಿಲ್ಯಾಂಡ್‌, ಲಂಕಾ ಮತ್ತು ಬಾಂಗ್ಲಾವನ್ನು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಎದುರಿಸಬಹುದು.

ಸಂಭಾವ್ಯ ತಂಡ
ಭಾರತ:
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ದೀಪ್ತಿ ಶರ್ಮ, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್‌, ಹಲೀìನ್‌ ದೇವಲ್‌, ತನಿಯಾ ಭಾಟಿಯ, ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್‌, ಪೂನಂ ಯಾದವ್‌, ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌.

ಟಾಪ್ ನ್ಯೂಸ್

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಸಂಚಾರ: ಬಿಸಿಸಿಐ ನಿಂದ ತೀವ್ರ ಖಂಡನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.