ರಾಘವೇಂದ್ರ ರಾವ್‌ ಭಾನುಮತಿ ಅವರಿಗೆ ಸುಂದರ-ಮುರಳಿ ಪ್ರಶಸ್ತಿ


Team Udayavani, Feb 21, 2020, 5:22 AM IST

kala-3

ಮಂಗಳೂರಿನ ಸನಾತನ ನಾಟ್ಯಾಲಯವು ಕಳೆದ ವರ್ಷದಿಂದ ಮೌಲಿಕವಾದ ಪ್ರಶಸ್ತಿಯನ್ನು ಸಂಗೀತ ಮತ್ತು ನೃತ್ಯಕಲಾ ಕ್ಷೇತ್ರದ ಹಿರಿಯ ಕಲಾವಿದರಿಗೆ ನೀಡಲು ಪ್ರಾರಂಭಿಸಿದೆ. ಈ ವರ್ಷ ಅಪ್ರತಿಮ ಸಕಲಕಲಾವಲ್ಲಭ ಸಂಗೀತ ವಿದ್ವಾನ್‌ ಎನ್‌. ಕೆ. ಸುಂದರಾಚಾರ್ಯ ಸಂಸ್ಮರಣಾ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ಕ್ಷೇತ್ರದ ಹಿರಿಯ ವೇಣುವಾದಕರಾದ ಪಂ| ರಾಘವೇಂದ್ರ ರಾವ್‌ ಉಡುಪಿ ಇವರಿಗೆ ಹಾಗೂ ನಾಟ್ಯಾಚಾರ್ಯ ಮುರಳೀಧರ ರಾವ್‌ ಪ್ರಶಸ್ತಿಯನ್ನು ಭಾನುಮತಿ ಅವರಿಗೆ ನೀಡಲಾಗುವುದು.

ರಾಘವೇಂದ್ರ ರಾವ್‌
ರಾಘವೇಂದ್ರ ರಾಯರು ಬಾಲ್ಯದಲ್ಲಿಯೇ ವೇಣುವಾದನಕ್ಕೆ ಮನಸೋತು ಉಡುಪಿಯ ನರಸಿಂಹ ಶೇರಿಗಾರರಲ್ಲಿ ಬಾಲ ಪಾಠ ಆರಂಭಿಸಿ ಮಂಗಳೂರಿನ ಎನ್‌. ಕೆ. ಸುಂದರಾಚಾರ್ಯರಲ್ಲಿ ಹೆಚ್ಚಿನ ತರಬೇತಿ ಪಡೆದು, ಮನೆಯವರ ಇಚ್ಚೆಗೆ ಸಡ್ಡು ಹೊಡೆದು ತೂತುಕುಡಿಯಲ್ಲಿ ವಿ| ಮುತ್ತುಸ್ವಾಮಿ ಅಯ್ಯಂಗಾರ್‌ ಅವರಲ್ಲಿ ಕೊಳಲು ವಾದನದ ಸರ್ವ ತಂತ್ರಗಾರಿಕೆ, ಕೌಶಲ್ಯಗಳನ್ನು ಅಭ್ಯಸಿಸಿದವರು. 85ರ ಇಳಿ ವಯಸ್ಸಿನಲ್ಲೂ ಸುಮಾರು 60ಕ್ಕಿಂತಲೂ ಹೆಚ್ಚು ಶಿಷ್ಯರಿಗೆ ತಮ್ಮ ಮನೆಯಲ್ಲಿ ಬಾಲ ಪಾಠದಿಂದ ಆರಂಭಿಸಿ ಪುಟ್ಟ ಕಛೇರಿ ನೀಡುವ ಸಾಮರ್ಥ್ಯವನ್ನು ಒಂದಿನಿತೂ ಆಯಾಸವಿಲ್ಲದೆ ಶಿಕ್ಷಣ ನೀಡುತ್ತಿರುವುದು ಆಶ್ಚರ್ಯಕರವೂ ಆಗಿದೆ.

ಭಾನುಮತಿ
ನಾಟ್ಯಾಚಾರ್ಯ ಮುರಳೀಧರ ರಾವ್‌ ಪ್ರಶಸ್ತಿಗೆ ಭಾಜನರಾಗಿರುವವರು ಬೆಂಗಳೂರಿನ ಕಲಾಶ್ರೀ ಭಾನುಮತಿ ಯವರು ಭರತನಾಟ್ಯದಂತಹ ವ್ಯಾಪಕ ನೃತ್ಯಕ್ಷೇತ್ರದಲ್ಲಿ ಭಾವಪೂರ್ಣ ಶಿಸ್ತುಬದ್ಧ ನೃತ್ಯಮಾತ್ರವಲ್ಲದೆ, ಉತ್ಕೃಷ್ಟ ಮಟ್ಟದ ಗ್ರೂಪ್‌ ಕೊರಿಯೊಗ್ರಾಫಿಗೆ ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದವರು. ಸಂಗೀತದ ಒಲುಮೆ ಇರುವ ಕುಟುಂಬದಲ್ಲಿ ಜನಿಸಿದ ಇವರು ಅನೇಕ ದಿಗ್ಗಜ ಗುರುಗಳ ಶಿಷ್ಯತ್ವವನ್ನು ಪಡೆದ ಅದೃಷ್ಟವಂತರು. ಫೆ. 22ರಂದು ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

– ಪ್ರತಿಭಾ ಎಂ. ಎಲ್‌. ಸಾಮಗ

ಟಾಪ್ ನ್ಯೂಸ್

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.