ಅನು ಪ್ರಭಾಕರ್‌ ಹೊಸ ಇನ್ನಿಂಗ್ಸ್‌

ಸಾರಾ ಅಬೂಬಕ್ಕರ್‌ ಕಾದಂಬರಿಗೆ ದೃಶ್ಯರೂಪ

Team Udayavani, Feb 22, 2020, 7:01 AM IST

Saara-Vajra

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕಾದಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ ಸಾರಾ ಅಬೂಬಕ್ಕರ್‌ ಅವರ “ವಜ್ರಗಳು’ ಕಾದಂಬರಿ ಚಿತ್ರವಾಗುತ್ತಿದೆ. ಆ ಚಿತ್ರಕ್ಕೆ “ಸಾರಾ ವಜ್ರ’ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ, ಈಗಾಗಲೇ ಸದ್ದಿಲ್ಲದೆಯೇ ಚಿತ್ರ ಪೂರ್ಣಗೊಂಡಿದ್ದು, ಡಬ್ಬಿಂಗ್‌ ಹಂತ ತಲುಪಿದೆ. ಈ ಚಿತ್ರವನ್ನು ಆರ್‍ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶಿಸಿದ್ದಾರೆ. ಸಂಭ್ರಮ ಡ್ರೀಮ್‌ ಹೌಸ್‌ ಬ್ಯಾನರ್‌ನಲ್ಲಿ ದೇವೇಂದ್ರ ರೆಡ್ಡಿ ಸಹಕಾರದೊಂದಿಗೆ ಚಿತ್ರ ನಿರ್ಮಾಣಗೊಂಡಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು ನಿರ್ದೇಶಕಿ ಆರ್‍ನಾ ಸಾಧ್ಯ.”ಇದು ನನ್ನ ಎರಡನೇ ಚಿತ್ರ. ಸಾರಾ ಅಬೂಬಕ್ಕರ್‌ ಅವರ ಕಾದಂಬರಿ “ವಜ್ರಗಳು’ ಓದಿದ್ದೆ. ಅದನ್ನು ಸಿನಿಮಾ ಮಾಡುವ ಆಸೆ ಆಯ್ತು. ಆದರೆ, ಬೇಗನೇ ರೈಟ್ಸ್‌ ಸಿಗಲಿಲ್ಲ. ವರ್ಷಗಟ್ಟಲೆ ಕಾದೆ. ಕೊನೆಗೆ ಸಿಕ್ಕಿದ ಬಳಿಕ ಸಿನಿಮಾಗೆ ತಯಾರಿ ನಡೆಸಿದೆ. ದೇವೇಂದ್ರ ರೆಡ್ಡಿ ಅವರ ಸಾರಥ್ಯದಲ್ಲಿ ಚಿತ್ರ ತಯಾರಾಗಿದೆ.

ಅನುಪ್ರಭಾಕರ್‌ ಅವರಿಗೆ ಕಾಲ್‌ ಮಾಡಿ, ಒನ್‌ಲೈನ್‌ ಹೇಳಿದೆ. ಭೇಟಿ ಮಾಡಲು ತಿಳಿಸಿದಾಗ, ಪೂರ್ಣ ಕಥೆ ವಿವರಿಸಿದೆ. ಒಪ್ಪಿದರು. ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶೇಷ ಅಂದರೆ, ರಮೇಶ್‌ ಭಟ್‌ ವಿಭಿನ್ನ ಪಾತ್ರ ಮಾಡಿದ್ದಾರೆ. ಕಾದಂಬರಿಗೆ ಎಲ್ಲೂ ಧಕ್ಕೆ ಆಗದಂತೆ ಚಿತ್ರೀಕರಿಸಿದ್ದೇವೆ. ನೋಡುವ ಪ್ರತಿಯೊಬ್ಬರಿಗೂ ಪಾತ್ರಗಳು ಕಾಡುತ್ತವೆ’ ಎಂದರು ಆರ್‍ನಾ ಸಾಧ್ಯ.

ರಮೇಶ್‌ ಭಟ್‌ ಮಾತನಾಡಿ, “ಚಿತ್ರದ ಆಶಯ ಚೆನ್ನಾಗಿದೆ. ಶ್ರೇಷ್ಠ ಲೇಖಕಿ ಬರೆದ ಕಾದಂಬರಿಯನ್ನು ಸಿನಿಮಾ ಮಾಡುವುದು ಸುಲಭವಲ್ಲ. ನಿರ್ದೇಶಕಿ ಅದನ್ನು ಯಶಸ್ವಿಗೊಳಿಸಿದ್ದಾರೆ. ನಾನಿಲ್ಲಿ ವಯಸ್ಸಿನ ಅಂತರ ಇರುವಂತಹ ಪಾತ್ರ ನಿರ್ವಹಿಸಿದ್ದೇನೆ. ಇಲ್ಲಿನ ಕಾಸ್ಟೂಮ್‌, ಲೊಕೇಷನ್‌, ಕಲಾವಿದರ ಅಭಿನಯ ಎಲ್ಲವೂ ವಿಶೇಷ. ಡಬ್ಬಿಂಗ್‌ ಮಾಡುವಾಗ, ನನಗೆ ಚಿತ್ರದಲ್ಲೇನೋ ವಿಶೇಷವಿದೆ ಎನಿಸಿದ್ದು ನಿಜ’ ಎಂದರು ರಮೇಶ್‌ಭಟ್‌

ಅನುಪ್ರಭಾಕರ್‌ ಅವರು “ಅನುಕ್ತ’ ಚಿತ್ರದ ಬಳಿಕ ಈ ಚಿತ್ರ ಮಾಡುತ್ತಿದ್ದು, ಅವರಿಗೆ ಇಲ್ಲಿ ಸಫೀಜಾ ಎಂಬ ಪಾತ್ರ ಸಿಕ್ಕಿದೆಯಂತೆ. ಒಳ್ಳೆಯ ಲೇಖಕಿ ಕಾದಂಬರಿಯಲ್ಲಿ ನಾನಿದ್ದೇನೆ ಎಂಬ ಹೆಮ್ಮೆ ಇದೆ. ಅದರಲ್ಲೂ ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಿರ್ದೇಶಕರಿಗೆ ಏನು ಬೇಕು ಎಂಬ ಕ್ಲಾರಿಟಿ ಇದೆ. ಹಾಗಾಗಿ ಸಿನಿಮಾ ಕೂಡ ಚೆನ್ನಾಗಿ ಬಂದಿದೆ. ಇದು ಬ್ಯಾರಿ ಜನರ ಕುರಿತ ಚಿತ್ರಣ ಹೊಂದಿದೆ.

ಹಾಗಂತ ಯಾವುದೇ ಜನಾಂಗದ, ಧರ್ಮದ ವಿಷಯವಿಲ್ಲ. ಮಾನವೀಯ ಮೌಲ್ಯಕ್ಕೆ ಆದ್ಯತೆ ಕೊಡಲಾಗಿದೆ’ ಎಂದರು. ವಿ.ಮನೋಹರ್‌ ಸಂಗೀತ ನೀಡಿದ್ದು, “ಇದು ನಮ್ಮ ಊರಿನ ಬರಹಗಾತಿ ಬರೆದ ಕಾದಂಬರಿ ಆಧರಿತ ಚಿತ್ರ. ನಾನು ಹಲವು ಬ್ಯಾರಿ ಗೆಳೆಯರ ಜೊತೆ ಓಡಾಡಿದವನು. ಅವರ ಮನೆಗಳಲ್ಲಿ ಸುತ್ತಾಡಿದವನು. ಹಾಗಾಗಿ, ಚಿತ್ರದ ಪಾತ್ರ ನೋಡಿದಾಗ, ಅವರನ್ನು ಎಲ್ಲೋ ನೋಡಿದ್ದೇನೆಂಬ ಭಾಸವಾಗುತ್ತೆ. ಇಲ್ಲಿ ನನ್ನ ಜವಾಬ್ದಾರಿ ಹೆಚ್ಚಿದೆ.

ಯಾಕೆಂದರೆ, ಬ್ಯಾರಿ ಸಂಸ್ಕೃತಿ, ಆಚರಣೆಗೆ ತಕ್ಕಂತೆ ಸಂಗೀತದ ಕೆಲಸ ಮಾಡಬೇಕಿದೆ’ ಎಂದರು ಮನೋಹರ್‌. ರೆಹಮಾನ್‌ ಚಿತ್ರದಲ್ಲಿ ನೆಗೆಟಿವ್‌ ಶೇಡ್‌ ಪಾತ್ರ ಮಾಡಿದ್ದಾರಂತೆ. ಇಂತಹ ಮಗ ಬೇಕಿತ್ತಾ, ಇಂತಹ ಪತಿ ಬೇಕಾ ಎನ್ನುವಂತಹ ಪಾತ್ರವಂತೆ. ನವ ಪ್ರತಿಭೆ ಪುನೀತ್‌ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಪರಮೇಶ್‌ ಛಾಯಾಗ್ರಹಣವಿದೆ. ಅಕ್ಷಯ್‌ ಪಿ.ರಾವ್‌ ಸಂಕಲನವಿದೆ. ಚಿತ್ರದಲ್ಲಿ ಸುಧಾ ಬೆಳವಾಡಿ, ಸುಹಾನ ಸೈಯದ್‌, ಪ್ರದೀಪ್‌ ಪೂಜಾರಿ, ವಿಭಾಸ್‌ ಇತರರು ಇದ್ದಾರೆ.

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.