ಸಮಿತ್ ತಂದೆಗೆ ತಕ್ಕ ಮಗ
Team Udayavani, Feb 22, 2020, 6:01 AM IST
ಅಪ್ಪ ಒಳ್ಳೆಯ ಕ್ರಿಕೆಟ್ ಸಾಧಕನಾಗಿದ್ದರೂ ಮಕ್ಕಳು ಕ್ರಿಕೆಟ್ ಜೀವನದಲ್ಲಿ ಶೂನ್ಯರಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ವಿಷಯದಲ್ಲಿ ಮಾತ್ರ ಇದು ಸುಳ್ಳಾಗಲಿದೆ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಎಳೆವೆಯಲ್ಲೇ “ತಂದೆಗೆ ತಕ್ಕ ಮಗ’ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಭವಿಷ್ಯದಲ್ಲಿ ಭಾರತ ಹಿರಿಯರ ತಂಡದ ಪರ ಆಡಿ ಅಪ್ಪನ ಕನಸನ್ನು ನನಸಾಗಿಸುವ ಗುರಿ ಹೊಂದಿದ್ದಾರೆ.
ಸದ್ಯ ಸಮಿತ್ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಇದಕ್ಕೆ ಪ್ರತಿಫಲ ಎನ್ನುವಂತೆ ಸಮಿತ್ ಕಳೆದ ಎರಡು ತಿಂಗಳಲ್ಲಿ ಶಾಲಾ ಕೂಟದಲ್ಲಿ ಸತತ ಎರಡನೇ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದಾರೆ. 14 ವಯೋಮಿತಿಯೊಳಗಿನ ಬಿಟಿಆರ್ ಶೀಲ್ಡ್ ಕೂಟದಲ್ಲಿ ತಮ್ಮ ಶಾಲೆ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲಾ ತಂಡವನ್ನು ಪ್ರತಿನಿಧಿಸಿರುವ ಸಮಿತ್, ಶ್ರೀಕುಮಾರನ್ ಶಾಲೆ ವಿರುದ್ಧ 204 ರನ್ ಬಾರಿಸಿದ್ದಾರೆ. ಇವರ ಬ್ಯಾಟಿಂಗ್‌ನಲ್ಲಿ ಒಟ್ಟಾರೆ 33 ಬೌಂಡರಿ ಒಳಗೊಂಡಿತ್ತು.
ಇವರ ಸಾಹಸದಿಂದ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲಾ ತಂಡ 3 ವಿಕೆಟ್‌ಗೆ 377 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಕುಮಾರನ್ ಶಾಲಾ ತಂಡ 110 ರನ್‌ಗೆ ಆಲೌಟಾಗಿ ಒಟ್ಟಾರೆ 267 ರನ್‌ಗಳಿಂದ ಸೋಲು ಅನುಭವಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಮಿತ್ ವೈಸ್ ಪ್ರಸಿಡೆಂಟ್ ಇಲೆವೆನ್ ತಂಡದ ಪರ 14 ವಯೋಮಿತಿ ಅಂತರ್ ವಲಯ ಕ್ರಿಕೆಟ್ ಕೂಟದಲ್ಲಿ ಧಾರವಾಡ ತಂಡದ ವಿರುದ್ಧ 201 ರನ್ ಸಿಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಾರೆ ಸಮಿತ್ ಶ್ರೇಷ್ಠ ಕ್ರಿಕೆಟಿಗನಾಗಿ ರೂಪುಗೊಳ್ಳುವ ಹಾದಿಯಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.