ಎಲ್ಲೆಡೆ ಮೊಳಗಿದ ಶಿವನಾಮ ಜಪ
Team Udayavani, Feb 22, 2020, 1:03 PM IST
ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಶುಕ್ರವಾರ ಸಾರ್ವಜನಿಕರು ಶ್ರದ್ಧೆ- ಭಕ್ತಿಯಿಂದ ಆಚರಿಸಿದರು.
ಸೂರ್ಯೋದಯಕ್ಕೂ ಮುನ್ನವೇ ಜಿಲ್ಲೆಯ ಸೋಮನಾಥೇಶ್ವರ, ಪಂಚಲಿಂಗೇಶ್ವರ, ಪರಮೇಶ್ವರ ಸೇರಿದಂತೆ ಈಶ್ವರನ ವಿವಿಧ ದೇವಸ್ಥಾನಗಳಲ್ಲಿ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಅದರಂತೆ ಭಕ್ತರು ಬೆಳಗ್ಗೆ ಅಭ್ಯಂಗ ಸ್ನಾನ ಮುಗಿಸಿ, ಶಿವನ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಶಿವನ ಆರಾಧನೆ, ಶಿವ ಸ್ತೋತ್ರಗಳನ್ನು ಸ್ತುತಿಸಿ, ಮಂತ್ರಗಳ ಪಠಣದೊಂದಿಗೆ ರುದ್ರಾಕ್ಷಿ ಮಾಲೆಗೆ ಪೂಜೆ, ಅಭಿಷೇಕ ಹಾಗೂ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಇಡೀ ದಿನ ಶಿವಶಂಕರನ ನಾಮ ಸ್ಮರಣೆಯಲ್ಲಿ ತಲ್ಲೀನರಾಗಿದ್ದರು.
ಅವಳಿ ನಗರದ ಶಿವನ ಪ್ರಮುಖ ದೇವಸ್ಥಾನಗಳಾದ ತ್ರಿಕೂಟೇಶ್ವರ ದೇವಸ್ಥಾನ, ಬೆಟಗೇರಿ ರಂಗಪ್ಪಜ್ಜನ ಮಠ ಸಮೀಪದ ಅಮರೇಶ್ವರ ದೇವಸ್ಥಾನ, ಸಿದ್ಧಲಿಂಗ ನಗರದ ಸಿದ್ದಲಿಂಗೇಶ್ವರ ದೇವಸ್ಥಾನ, ಗ್ರೇನ್ ಮಾರುಕಟ್ಟೆಯ ಈಶ್ವರ ದೇಗುಲ, ಪಿ ಆ್ಯಂಡ್ ಟಿ ಕ್ವಾರ್ಟರ್ಸ್‌ನ ಪರಮೇಶ್ವರ ದೇಗುಲ, ರಾಜೀವ್ ಗಾಂಧಿ ನಗರದ ಈಶ್ವರ ಸನ್ನಿಧಾನ, ಶಹಪುರಪೇಟೆಯ ಶಂಕರಲಿಂಗ ದೇವಸ್ಥಾನ, ಸರಾಫ್ ಬಜಾರ್ ರಸ್ತೆಯ ಪಂಚಲಿಂಗೇಶ್ವರ ದೇವಸ್ಥಾನ, ಸಂಭಾಪುರ ರಸ್ತೆಯ ಕಾಶಿ ವಿಶ್ವನಾಥ ದೇವಸ್ಥಾನ ಸೇರಿದಂತೆ ಅವಳಿ ನಗರದ ಇನ್ನಿತರೆ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ, ಪುನಸ್ಕಾರದ ಸಂಭ್ರಮ ಮನೆ ಮಾಡಿತ್ತು.
ಮಹಾಶಿವರಾತ್ರಿ ಅಂಗವಾಗಿ ಶಿವಭಕ್ತರು ಉಪವಾಸ ವ್ರತಾಚರಣೆ ಕೈಗೊಂಡಿದ್ದು, ವಿವಿಧ ದೇವಸ್ಥಾನಗಳಲ್ಲಿ ನಡೆದ ಭಜನೆ, ಶಿವನ ನಾಮಸ್ಮರಣೆಯೊಂದಿಗೆ ದಿನ ಕಳೆದರು. ಬಳಿಕ ಸಂಜೆ ಶಿವನಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥಗಳ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು, ಹಣ್ಣು- ಹಂಪಲ ಸೇವಿಸಿ, ಶಿವನ ಧ್ಯಾನ ಮಾಡಿ, ಧನ್ಯತೆ ಮೆರೆದರು.
ದರ್ಶನಕ್ಕಾಗಿ ಸರದಿ: ನಗರದ ಐತಿಹಾಸಿಕ ಪ್ರಸಿದ್ಧ ಕೃತಪುರ ನಿವಾಸಿ ತ್ರಿಕೂಟೇಶ್ವರ ಹಾಗೂ ಭಲ್ಲೇಶ್ವರ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿದ್ದರು. ಬೆಳಗ್ಗೆ ನಡೆದ ಮಹಾರುದ್ರಾಭೀಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ಇನ್ನಿತರೆ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನಗಳಲ್ಲಿ ನೆರೆದಿದ್ದ ನೂರಾರು ಭಕ್ತರು ಕಣ್ತುಂಬಿಕೊಂಡು, ಭಕ್ತಿ ಪರವಶರಾದರು. ಶಿವರಾತ್ರಿ ನಿಮಿತ್ತ ದೇವಸ್ಥಾನಗಳಲ್ಲಿ ತರಹೇವಾರಿ ಪುಷ್ಪಗಳಿಂದ ಮಾಡಿದ್ದ ಅಲಂಕಾರ ನೋಡುಗರಿಗೆ ಮುದ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.