ಚಹಾ ಮಾಡಿದ ರಿಷಿ ಸುನಕ್ ; ಟ್ವಿಟ್ಟರ್ನಲ್ಲಿ ಬಿಸಿ ಬಿಸಿ ಚರ್ಚೆ
Team Udayavani, Feb 22, 2020, 8:40 PM IST
ಲಂಡನ್: ಯುಕೆ ಹಣಕಾಸು ಸಚಿವ, ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್, ಶುಕ್ರವಾರ ಟ್ವಿಟರ್ನಲ್ಲಿ ಕೊಂಚ ಮುಜುಗರಕ್ಕೊಳಗಾಗಿದ್ದಾರೆ.
ಭಾರತ ಮೂಲದ ರಿಷಿ ಮಾರ್ಚ್ನಲ್ಲಿ ತಮ್ಮ ಮೊದಲ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ಟೀ ಬ್ರೇಕ್ನಲ್ಲಿ, ತಮ್ಮ ಇಡೀ ತಂಡಕ್ಕೆ ಸ್ವತಃ ಚಹಾ ಮಾಡಿಕೊಟ್ಟಿದ್ದಾರೆ. ಚಹಾ ಮಾಡುವಾಗಿನ ಫೋಟೋವನ್ನು ಟ್ವೀಟ್ ಕೂಡ ಮಾಡಿದ್ದಾರೆ. ಆದರೆ ಈ ಫೋಟೋ ಕೆಲ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೈಯಲ್ಲಿ ಚಾ ಮಾಡುವ ಕೆಟ್ಲ ಹಿಡಿದ ರಿಷಿ ಅವರ ಹಿಂದೆ “ಯಾರ್ಕ್ಶೈರ್ ಟಿ’ ಬ್ಯಾಗ್ ಇದೆ.
ಈ ಚಿತ್ರ ಟ್ವೀಟ್ ಮಾಡಿರುವ ರಿಷಿ, “ಬಜೆಟ್ ಸಿದ್ಧತೆ ನಡುವೆ ನಮ್ಮ ಟೀಮ್ಗೆ ಚಹಾ ಮಾಡುತ್ತಿದ್ದೇನೆ. ಯಾರ್ಕ್ಶೈರ್ಗಿಂತ ಉತ್ತಮ ಟೀ ಮತ್ತೂಂದಿಲ್ಲ’ ಎಂದು ಬರೆದಿದ್ದಾರೆ. “ಹೀಗೆ ಬರೆಯಲು ಯಾರ್ಕ್ಶೈರ್ ನಿಮಗೆ ಎಷ್ಟು ಹಣ ಕೊಟ್ಟಿದೆ, ತಮ್ಮ ಬ್ರಾಂಡ್ ಪ್ರಚಾರಕ್ಕಾಗಿ ಅವರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ನಾನು ಇನ್ನು ಮುಂದೆ ಆ ಟೀ ಪೌಡರ್ ಕೊಳ್ಳುವುದಿಲ್ಲ’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟೀ ಕಂಪನಿ, ಇದರಲ್ಲಿ ತನ್ನ ಪಾತ್ರವೇನೂ ಇಲ್ಲ. ಎಲ್ಲ ಪಕ್ಷದವರೂ ತನ್ನ ಟೀ ಪೌಡರ್ ಇಷ್ಟಪಡುತ್ತಾರೆ ಎಂದು ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.