ಉತ್ತರ ಪ್ರದೇಶದಲ್ಲಿ ಪತ್ತೆಯಾದ 3,800 ವರ್ಷ ಹಳೇ ಸ್ಮಶಾನ!
ಉತ್ತರ ಪ್ರದೇಶದಲ್ಲಿ ವರ್ಷಗಳ ಹಿಂದೆ ಪತ್ತೆಯಾಗಿದ್ದ ಸಮಾಧಿಗಳ ಸ್ಥಳ
Team Udayavani, Feb 22, 2020, 8:57 PM IST
– ಕಾರ್ಬನ್ ಡೇಟಿಂಗ್ ತಂತ್ರಜ್ಞಾನದಿಂದ ಕಾಲದ ಕರಾರುವಾಕ್ ಪತ್ತೆ
– ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ತಜ್ಞರಿಂದ ಪ್ರಕಟಣೆ
– ದೆಹಲಿಯಿಂದ 68 ಕಿ.ಮೀ. ದೂರದ ಬಾಗ್‌ಪತ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಸ್ಮಶಾನ
– 2005ರಲ್ಲಿ ಮೊದಲು ಭಾಗಶಃ ಉತ್ಖನನಗೊಂಡಿದ್ದ ರುದ್ರಭೂಮಿ
ನವದೆಹಲಿ: ಉತ್ತರ ಪ್ರದೇಶದಲ್ಲಿ 2005ರಿಂದೀಚೆಗೆ ಹಂತಹಂತವಾಗಿ ಉತ್ಖನನದ ಮೂಲಕ ಪತ್ತೆಯಾದ ವಿಶಾಲವಾದ ಸ್ಮಶಾನ 3,800 ವರ್ಷಗಳಷ್ಟು ಹಿಂದಿನದ್ದಾಗಿದ್ದು, ಕಾರ್ಬನ್ ಡೇಟಿಂಗ್ ತಂತ್ರಜ್ಞಾನದಿಂದ ಇದರ ಕಾಲವನ್ನು ಅಳೆಯಲಾಗಿದೆ ಎಂದು ಭಾತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ (ಎಎಸ್‌ಐ) ತಜ್ಞರು ಹೇಳಿದ್ದಾರೆ.
ದೆಹಲಿಯಿಂದ ಕೇವಲ 68 ಕಿ.ಮೀ. ದೂರವಿರುವ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಗೆ ಸೇರಿದ ಸನೌಲಿಯ ಬಳಿಯಿರುವ ಈ ಸ್ಮಶಾನದ ಒಂದು ಭಾಗ ಉತ್ಖನನದ ವೇಳೆ 2005ರಲ್ಲಿ ಮೊದಲ ಬಾರಿಗೆ ಗೋಚರಿಸಿತ್ತು.
ಆನಂತರ, 2018ರಲ್ಲಿ ಉತ್ಖನನವನ್ನು ಪುನರಾರಂಭಿಸಿದಾಗ ಭೂಗರ್ಭದಲ್ಲಿ 120 ಸಮಾಧಿಗಳು ಪತ್ತೆಯಾಗಿದ್ದವು.
ಪ್ರತಿಯೊಂದು ಸಮಾಧಿಗೂ ಒಂದೊಂದು ಪುಟ್ಟ ಕೋಣೆಯನ್ನು ಕಟ್ಟಲಾಗಿದ್ದು, ಅದರಲ್ಲಿ ಅಲಂಕೃತ ಕಾಲುಗಳುಳ್ಳ ಶವಪೆಟ್ಟಿಗೆಗಳಲ್ಲಿ ಶವ ಹಾಗೂ ಅಕ್ಕಿ ಮುಂತಾದ ವಸ್ತುಗಳನ್ನು ಇಟ್ಟು ಮಣ್ಣು ಮಾಡಲಾಗಿರುವುದು ಅವುಗಳ ಅಧ್ಯಯನದಿಂದ ತಿಳಿದುಬಂದಿತ್ತು.
ಇದು ಆ ಪ್ರಾಂತ್ಯದಲ್ಲಿ ಶತಮಾನಗಳ ಹಿಂದೆ ಇದ್ದ ಬುಡಕಟ್ಟು ಸಮುದಾಯದ ಸಮಾಧಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ಸ್ಮಶಾನದ ಜೊತೆಗೆ, ಮಣ್ಣಿನಿಂದ ಮಾಡಿದ ಮಡಕೆ ಮತ್ತಿತರ ಮನೆ ಬಳಕೆ ವಸ್ತುಗಳು, ಕುದುರೆ ಗಾಡಿ, ನಾಲ್ಕು ಕಾಲುಗಳುಳ್ಳ ಶವಪೆಟ್ಟಿಗೆಗಳು, ತಾಮ್ರದ ಒಂದು ಕತ್ತಿ, ಗುರಾಣಿಗಳು ಸಿಕ್ಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.