ಹೂಕೋಸು, ಕ್ಯಾಬೇಜ್ ಕೃಷಿ
ಬಾಳಿಲದ ಗೃಹಿಣಿಯ ಪ್ರಯೋಗ ಯಶಸ್ಸು
Team Udayavani, Feb 23, 2020, 4:29 AM IST
ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು ಯಶಸ್ವಿಯಾಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಪೋಷಣೆ ಮಾತ್ರ ನೀಡಿ ಬೆಳೆದ ವಿಷರಹಿತ ಕ್ಯಾಬೇಜ್ ಮತ್ತು ಹೂಕೋಸ್ ಗಿಡಗಳಲ್ಲಿ ಬೆಳೆಲದ ಬೆಳೆ ಖಾದ್ಯ ಸವಿಯಲು ಸಿದ್ಧವಾಗಿದೆ.
ವಾಟ್ಸ್ ಆ್ಯಪ್ ಪ್ರೇರಣೆ
ಸುಳ್ಯ ತಾಲೂಕಿನ ಬಾಳಿಲದ ಪ್ರಗತಿಪರ ಕೃಷಿಕ ನೆಟ್ಟಾರು ಗೋಪಾಲಕೃಷ್ಣ ಭಟ್ಟರ ಪತ್ನಿ ವಿಜಯಕುಮಾರಿ ವಾಟ್ಸ್ ಆ್ಯಪ್ ಗ್ರೂಪ್ ಒಂದರಲ್ಲಿ ಬಂದ ಸಂದೇಶವೊಂದರಿಂದ ಪ್ರೇರಿತರಾಗಿ ಕ್ಯಾಬೇಜ್ ಮತ್ತು ಹೋಕೋಸು ಬೆಳೆಯನ್ನು ತನ್ನ ಮನೆಯಲ್ಲೂ ಬೆಳೆಯುವ ಉತ್ಸಾಹ ತೋರಿ ಯಶಸ್ಸು ಕಂಡವರು. ಬೆಟ್ಟಂಪಾಡಿ ಹರಿಕೃಷ್ಣ ಕಾಮತ್ ಅವರ ಮನೆಯಿಂದ ಈ ಎರಡೂ ಬೆಳೆಗಳ ತರಕಾರಿ ಬೀಜಗಳನ್ನು ತಂದು ಕೃಷಿ ಆರಂಭಿಸಿದ್ದರು.
ಸಾವಯವ ಪೋಷಣೆ
ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳಾದ ಇವುಗಳನ್ನು ಋತುಮಾನಕ್ಕೆ ತಕ್ಕಂತೆ ನವೆಂಬರ್ ತಿಂಗಳ ಮೊದಲ ವಾರ ಬಿತ್ತನೆ ಮಾಡಿದರು. ಮೊದಲ ಪ್ರಯೋಗವಾದ ಕಾರಣ ತಲಾ 15 ಬೀಜಗಳನ್ನು ಮಾತ್ರ ಬಿತ್ತನೆ ಮಾಡಿದರು. ಇವುಗಳ ಪೈಕಿ 5 ಕ್ಯಾಬೇಜು ಹಾಗೂ 10 ಹೂಕೋಸು ಗಿಡಗಳು ಸೊಂಪಾಗಿ ಬೆಳೆದವು. ಕೆಂಪು ಮಣ್ಣು, ಮರಳು, ಸುಡುಮಣ್ಣಿನ ಮಿಶ್ರಣದಲ್ಲಿ ಬೆಳೆಸಿದ ಈ ಗಿಡಗಳಿಗೆ ಪ್ರತಿನಿತ್ಯ ನೀರಿನ ಜೊತೆ ಹುಳಿ ಬರಿಸಿದ ಬೇವಿನ ಹಿಂಡಿ, ಸೆಗಣಿ ನೀರಿನಿಂದ ಶುದ್ಧ ಸಂಪೂರ್ಣ ಸಾವಯವ ಪೋಷಣೆ ನೀಡಿದ್ದಾರೆ.
ಸಿದ್ಧವಾಗಿದೆ ಬೆಳೆ
ಸಾವಯವ ಪೋಷಣೆಯಿಂದ ಬೆಳೆದ ಗಿಡದಲ್ಲಿ ಮೂರೇ ತಿಂಗಳಲ್ಲಿ ಹೂಕೋಸು ಮತ್ತು ಕ್ಯಾಬೇಜ್ ಬೆಳೆದು ಕೊಯ್ಯಲು ಸಿದ್ಧವಾಗಿದೆ. ಈ ತಿಂಗಳಲ್ಲಿ ಬಾಳಿಲದ ವಿಜಯ ಕುಮಾರಿಯವರ ಮನೆಗೆ ಭೇಟಿ ನೀಡುವ ಆಸಕ್ತ ಕೃಷಿಕರಿಗೆ ಸಾವಯವವಾಗಿ ಬೆಳೆಸಿದ ಹೂಕೋಸಿನಿಂದ ಮಾಡಿದ ಖಾದ್ಯಗಳನ್ನು ಸವಿಯುವ ಭಾಗ್ಯ ಸಿಗಲಿದೆ.
ಮೊದಲ ಪ್ರಯೋಗ ಯಶಸ್ಸು
ಕರಾವಳಿಯ ಹವಾಮಾನಕ್ಕೆ ಒಗ್ಗದ ಹೂಕೋಸು ಮತ್ತು ಕ್ಯಾಬೇಜ್ ನಮ್ಮ ಮನೆಯಂಗಳದಲ್ಲಿ ಸೊಂಪಾಗಿ ಬೆಳೆದು ಫಲ ನೀಡಿರುವುದು ಖುಷಿ ತಂದಿದೆ. ಮೊದಲ ಪ್ರಯೋಗವಾದ ಕಾರಣ ಸೀಮಿತ ಮಟ್ಟಕ್ಕೆ ಬೆಳೆ ಸಿಕ್ಕಿದೆ.
– ವಿಜಯಕುಮಾರಿ , ಗೃಹಿಣಿ
ಉಮೇಶ್ ಮಣಿಕ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.