ಒಂದು ವಿಕೆಟ್‌ನಿಂದ ಗೆದ್ದ ಶ್ರೀಲಂಕಾ
ವಿಂಡೀಸ್ ಎದುರಿನ ಮೊದಲ ಏಕದಿನ ಪಂದ್ಯ , ಹೋಪ್ ಶತಕ ವ್ಯರ್ಥ (115)
Team Udayavani, Feb 22, 2020, 11:06 PM IST
ಕೊಲಂಬೊ: ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಚೇಸಿಂಗ್ ನಡೆಸಿದ ಶ್ರೀಲಂಕಾ ಒಂದು ವಿಕೆಟ್ ಅಂತರದ ರೋಚಕ ಜಯ ದಾಖಲಿಸಿದೆ.
ಶನಿವಾರ “ಕೊಲಂಬೋದ ಸಿಂಹಳೀಸ್ ನ್ಪೋರ್ಟ್ಸ್ ಕ್ಲಬ್’ನಲ್ಲಿ ನಡೆದ ಈ ಬ್ಯಾಟಿಂಗ್ ಮೇಲಾಟದಲ್ಲಿ ವೆಸ್ಟ್ ಇಂಡೀಸ್ 7 ವಿಕೆಟಿಗೆ 289 ರನ್ ಪೇರಿಸಿ ಸವಾಲೊಡ್ಡಿತು. ಆರಂಭಕಾರ ಶೈ ಹೋಪ್ 115 ರನ್ ಬಾರಿಸಿ ಮೆರೆದರು. ಜವಾಬಿತ್ತ ಶ್ರೀಲಂಕಾ ಕೊನೆಯ ಹಂತದ ಆತಂಕದಿಂದ ಪಾರಾಗಿ 49.1 ಓವರ್‌ಗಳಲ್ಲಿ 9 ವಿಕೆಟಿಗೆ 290 ರನ್ ಬಾರಿಸಿ ಗೆದ್ದು ಬಂದಿತು.
ಲಂಕೆಯ ಅಗ್ರ ಕ್ರಮಾಂಕದ ಬ್ಯಾಟಿಂಗ್ ಅಮೋಘ ಮಟ್ಟದಲ್ಲಿತ್ತು. ಆರಂಭಿಕರಾದ ಆವಿಷ್ಕ ಫೆರ್ನಾಂಡೊ (50)-ದಿಮುತ್ ಕರುಣರತ್ನೆ (52) ಭರ್ತಿ 18 ಓವರ್ ನಿಭಾಯಿಸಿ 111 ರನ್ ಪೇರಿಸಿದರು. ಇವರಿಬ್ಬರು 10 ರನ್ ಅಂತರದಲ್ಲಿ ಔಟಾದರೂ ಕುಸಲ್ ಪೆರೆರ (42), ಕುಸಲ್ ಮೆಂಡಿಸ್ (20) ಹೋರಾಟ ಮುಂದುವರಿಸಿದರು.
38ನೇ ಓವರಿನಲ್ಲಿ 215ಕ್ಕೆ 6 ವಿಕೆಟ್ ಬಿದ್ದಾಗ ವಿಂಡೀಸಿಗೆ ಗೆಲುವಿನ ಉಜ್ವಲ ಅವಕಾಶವಿತ್ತು. ಆದರೆ ತಿಸರ ಪೆರೆರ (32), ವನಿಂದು ಹಸರಂಗ (ಅಜೇಯ 42) ಸೇರಿಕೊಂಡು ವಿಂಡೀಸ್ ಮೇಲೆರಗಿದರು. ಕೀಮೊ ಪೌಲ್ ಪಾಲಾದ ಕೊನೆಯ ಓವರಿನಲ್ಲಿ ಲಂಕಾ 2 ವಿಕೆಟ್‌ಗಳಿಂದ ಒಂದು ರನ್ ಮಾಡಬೇಕಿತ್ತು. ಮೊದಲ ಎಸೆತದಲ್ಲೇ ಸಂದಕನ್ ರನೌಟಾದರು. ಮುಂದಿನ ಎಸೆತ ನೋಬಾಲ್ ಆಯಿತು!
ಶೈ ಹೋಪ್ ಶತಕ
ವಿಂಡೀಸ್ ಸರದಿಯಲ್ಲಿ ಓಪನರ್ ಶೈ ಹೋಪ್ 9ನೇ ಶತಕದೊಂದಿಗೆ ಮೆರೆದರು. 46ನೇ ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿ 115 ರನ್ ಹೊಡೆದರು (140 ಎಸೆತ, 10 ಬೌಂಡರಿ). ಆದರೆ ಇದು ವ್ಯರ್ಥವಾಯಿತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್-7 ವಿಕೆಟಿಗೆ 289 (ಹೋಪ್ 115, ಚೇಸ್ 41, ಡ್ಯಾರನ್ ಬ್ರಾವೊ 39, ಪೌಲ್ ಔಟಾಗದೆ 32, ಉದಾನ 82ಕ್ಕೆ 3). ಶ್ರೀಲಂಕಾ-49.1 ಓವರ್‌ಗಳಲ್ಲಿ 9 ವಿಕೆಟಿಗೆ 290 (ಕರುಣರತ್ನೆ 52, ಫೆರ್ನಾಂಡೊ 50, ಪೆರೆರ 42, ಹಸರಂಗ ಔಟಾಗದೆ 42, ಜೋಸೆಫ್ 42ಕ್ಕೆ 3, ವಾಲ್ಶ್ 38ಕ್ಕೆ 2, ಪೌಲ್ 48ಕ್ಕೆ 2).
ಪಂದ್ಯಶ್ರೇಷ್ಠ: ವನಿಂದು ಹಸರಂಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.