ಬರ್ಮಿಂಗ್‌ಹ್ಯಾಮ್- ಮಾಹೆ ವಿ.ವಿ. ಒಪ್ಪಂದ
Team Udayavani, Feb 23, 2020, 6:23 AM IST
ಉಡುಪಿ: ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಸರ್ ಡೇವಿಡ್ ಈಸ್ಟ್‌ವುಡ್ ಮತ್ತು ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಚ್. ವಿನೋದ ಭಟ್ ಅವರು ದಿಲ್ಲಿಯಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಮಾಡಿದರು.
ಮಣಿಪಾಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳು 2021ರಿಂದ ಬರ್ಮಿಂಗ್‌ಹ್ಯಾಮ್ ವಿ.ವಿ.ಯ ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಮೆಕಟ್ರಾನಿಕ್ಸ್ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಬಹುದಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ವಿಶ್ವಾಸಾರ್ಹತೆಯ ವರ್ಗಾವಣೆ ಅವಕಾಶವನ್ನು ಕಲ್ಪಿಸಲಾಗುವುದು ಮತ್ತು ಭಾರತದಲ್ಲಿ ಮೂರು ವರ್ಷ ಕಲಿತು ಸಮಗ್ರ ಸ್ನಾತಕೋತ್ತರ ಕೋರ್ಸ್‌ನ್ನು ಎರಡೂ ವಿ.ವಿ.ಗಳಿಂದ ಪಡೆಯುವ ಅವಕಾಶ ಕಲ್ಪಿಸಲಾಗುವುದು.
ಐದು ವರ್ಷಗಳಲ್ಲಿ ಭಾರತದ ಪಾಲುದಾರಿಕೆಯೊಂದಿಗೆ ಸಂಶೋಧನ ಪ್ರತಿಫಲ ತರುವಲ್ಲಿ ಬರ್ಮಿಂಗ್‌ಹ್ಯಾಮ್ ವಿ.ವಿ. ದುಪ್ಪಟ್ಟು ಸಾಧನೆ ಮಾಡಿದೆ. ಈಗ 40ಕ್ಕೂ ಹೆಚ್ಚು ಗುಣಮಟ್ಟದ ಸಂಶೋಧನ ಯೋಜನೆಗಳು ಹೊರಬರುತ್ತಿವೆ ಎಂದು ಡೇವಿಡ್ ಈಸ್ಟ್‌ವುಡ್ ತಿಳಿಸಿದರು.
ಬರ್ಮಿಂಗ್‌ಹ್ಯಾಮ್ ವಿ.ವಿ. ಭಾರತದಲ್ಲಿ ವಿವಿಧಶೈಕ್ಷಣಿಕ ಆಯಾಮಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುತ್ತಿದೆ. ಯುನೈಟೆಡ್ ಕಿಂಗ್‌ಡಮ್ ಸರಕಾರ ಇಂತಹ ಪಾಲುದಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಮುಂಬಯಿ ಮತ್ತು ವೆಸ್ಟ್ ಇಂಡೀಸ್‌ನ ಬ್ರಿಟಿಷ್ ಹೈಕಮಿಷನರ್ ಕ್ರಿಸ್ಪಿನ್ ಸೈಮನ್ ಹೇಳಿದರು.
ಶೈಕ್ಷಣಿಕ ಸಾಧನೆ
ನಾವು ಜಗತ್ತಿನ ಶ್ರೇಷ್ಠ ವಿ.ವಿ.ಗಳೊಂದಿಗೆ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಮುದಾಯಗಳಲ್ಲಿ ನಿರ್ದಿಷ್ಟ ಸಾಧನೆಗಳನ್ನು ಸಾಧಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯಕ್ಕೆ ಶೈಕ್ಷಣಿಕ ಮತ್ತು ಸಂಶೋಧನ ಸೇವೆಗಳನ್ನು ಸಲ್ಲಿಸಲಿದ್ದೇವೆ ಎಂದು ಜಾಗತೀಕರಣದ ಮಹತ್ವದ ಬಗ್ಗೆ ಡಾ| ಎಚ್. ವಿನೋದ ಭಟ್ ತಿಳಿಸಿದರು.
ಬರ್ಮಿಂಗ್‌ಹ್ಯಾಮ್ ವಿ.ವಿ. ಜಗತ್ತಿನ ಶ್ರೇಷ್ಠ 100 ಸಂಸ್ಥೆಗಳಲ್ಲಿ ಒಂದಾಗಿದೆ. ಮಾಹೆ ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್ ಸ್ಥಾನವನ್ನು ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.