ಮೀನುಗಾರ ಕುಟುಂಬಗಳಿಗೆ ಕೆರೆ ಹಸ್ತಾಂತರಿಸಿ ಆರ್ಥಿಕ ನೆರವು: ಶ್ರೀನಿವಾಸ ಪೂಜಾರಿ
Team Udayavani, Feb 23, 2020, 12:00 AM IST
ಉಡುಪಿ: ಮೀನು ಸಾಕಾಣಿಕೆಗೆ ಕೆರೆಗಳನ್ನು ಮೀನುಗಾರ ಕುಟುಂಬಗಳಿಗೆ ನೀಡಿ ಮೀನುಗಾರಿಕೆಗೆ ನಡೆಸಲು ಮತ್ತು ಆರ್ಥಿಕ ಸಹಾಯಕ್ಕೆ ಸರಕಾರ ನಿರ್ಧರಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿರಿಸುವ ಸಾಧ್ಯತೆಯಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿ ಜಿ.ಪಂ. ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ಶನಿವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಮಾಹಿತಿ ಕಾರ್ಯಾಗಾರ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯರೂಪ ಹಂತದಲ್ಲಿ ಹಲವು ಯೋಜನೆ
ಕರಾವಳಿಯಲ್ಲಿ ಹಲವು ಮೀನುಗಾರಿಕೆ ಯೋಜನೆಗಳು ಕಾರ್ಯರೂಪ ಹಂತದ ಲ್ಲಿದೆ. ದಶಕಗಳ ಬೇಡಿಕೆಯಾಗಿದ್ದ ಗಂಗೊಳ್ಳಿ ಕಿರು ಬಂದರು ಅಭಿವೃದ್ಧಿಗೆ 12 ಕೋ.ರೂ. ವೆಚ್ಚದ ಮಂಜೂರಾತಿ ನೀಡಲಾ ಗಿದೆ. ಹೆಜಮಾಡಿ ಬಂದರು ಅಭಿವೃದ್ಧಿಗೆ 34 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 180.84 ಕೋ.ರೂ ವೆಚ್ಚದಲ್ಲಿ ಬಂದರು ಅಭಿವೃದ್ಧಿಗೆ ಸರಕಾರದಿಂದ ಅನುಮೋದನೆ ದೊರಕಿದೆ. ಮೀನುಗಾರಿಕೆಯ ಅಭಿವೃದ್ಧಿಗೆ ಸರಕಾರ ಬದ್ಧತೆ ತೋರಿದೆ. ಮತ್ಸಗಂಧಿ ಯೋಜನೆ 11 ಕಡೆ ಜಾರಿಯಾಗಿದೆ ಇನ್ನು ಕೆಲವೆಡೆ ಆಗಬೇಕಿದೆ ಎಂದರು. ನೇಕಾರರು, ರೈತರು ಸಹಿತ ಇನ್ನಿತರ ವಲಯಗಳಿಗೆ ನೀಡಿದಂತೆ ಮೀನುಗಾರ ಮಹಿಳೆಯರಿಗೆ ರಾಜ್ಯ ಸರಕಾರ ತಲಾ 50 ಸಾವಿರ ರೂ. ಸಾಲ ಮನ್ನಾ ನೀಡು ತ್ತಿದೆ. ಇದಕ್ಕಾಗಿ ಸರಕಾರ 60 ಕೋ.ರೂ. ಮೀಸಲಿರಿಸಿದೆ. ರಾಜ್ಯದಲ್ಲಿ 23 ಸಾವಿರ ಮೀನುಗಾರ ಮಹಿಳಾ ಫಲಾನುಭವಿ ಗಳಿದ್ದು, ಅದರಲ್ಲಿ 18ಸಾವಿರ ಮಹಿಳೆಯರು ಉಡುಪಿ ಜಿಲ್ಲೆಯವರೇ ಆಗಿದ್ದಾರೆ ಎಂದರು.
ಸಾಲಮನ್ನಾ; ಗೊಂದಲ ಬೇಡ
ಸಾಲ ಮನ್ನಾ ವಿಚಾರವಾಗಿ ಒಂದಷ್ಟು ಗೊಂದಲಗಳು ಏರ್ಪಟ್ಟಿದೆ. ಖಾತೆಗೆ ಹಣ ಜಮಾವಣೆ ವಿಚಾರವಾಗಿ ಇರುವ ಗೊಂದಲದಿಂದ ಸಮಸ್ಯೆಯಾಗಿದೆ. ಅದು ಶೀಘ್ರ ಬಗೆಹರಿಯಲಿದೆ. ಗೊಂದಲ ಬೇಡ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಧಿಕಾರಿಗಳು ಮೀನುಗಾರ ಮಹಿಳೆಯರಿಗೆ ಸಾಲ ಮನ್ನಾ ವಿಚಾರದಲ್ಲಿ ಸತಾಯಿಸುತ್ತಿರುವುದು ಕಂಡು ಬರುತ್ತಿದೆ. ರಾಜ್ಯ ಮಟ್ಟದಲ್ಲಿ ಎಲ್ಲ ಬ್ಯಾಂಕ್ ಅಧಿಕಾರಿಗಳ ಸಭೆ ಶೀಘ್ರ ಕರೆದು ಸಮಸ್ಯೆ ನಿವಾರಿಸಲಾಗುವುದು ಎಂದರು.
4 ಸಾವಿರ ಮಂದಿಗೆ ಕ್ರೆಡಿಟ್ ಕಾರ್ಡ್ ವಿತರಣೆ
ಯಾಂತ್ರೀಕೃತ, ಕಿರುದೋಣಿಗಾರಿಕೆ ನಡೆಸುವ ಮೀನುಗಾರರಿಗೆ ಕೇಂದ್ರ ಸರಕಾರ ಕ್ರೆಡಿಟ್ ಕಾರ್ಡ್ ವಿತರಿಸುತ್ತಿದೆ. ಗರಿಷ್ಠ 3 ಲ.ರೂ. ಹಾಗೂ ಕನಿಷ್ಠ 2 ಲ.ರೂ. ವ್ಯವಹಾರ ನಡೆಸಲು ಅನುಕೂಲವಾಗಿದೆ. ರಾಜ್ಯದಲ್ಲಿ 28 ಸಾವಿರ ಮಂದಿ ಹಾಗೂ ಜಿಲ್ಲೆಯಲ್ಲಿ 4 ಸಾವಿರ ಮಂದಿ ಮೀನುಗಾರರಿಗೆ ಕಾರ್ಡ್ ವಿತರಿಸಲಾಗಿದೆ ಎಂದರು.
ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ತಾ.ಪಂ. ಉಪಾಧ್ಯಕ್ಷ ಭುಜಂಗ ಶೆಟ್ಟಿ, ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾಕುಂದರ್, ತಾ.ಪಂ. ಸಿಇಒ ಮೋಹನ್‌ರಾಜ್, ತಾ.ಪಂ. ಸದಸ್ಯರಾದ ಸುಲೋಚನಾ, ವಸಂತಿ, ಕುಸುಮಾ ಪೂಜಾರಿ ಉಪಸ್ಥಿತರಿದ್ದರು. ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಗಣೇಶ್ ಕೆ.ಪ್ರಸ್ತಾವನೆಗೈದರು. ಹಿರಿಯ ಸಹಾಯಕ ನಿರ್ದೇಶಕ ಪಿ. ಪಾರ್ಶ್ವನಾಥ್ ಸ್ವಾಗತಿಸಿ, ಸಹಾಯಕ ನಿರ್ದೇಶಕ ಕಿರಣ್ ಬಿ.ಡಿ. ನಿರೂಪಿಸಿದರು. ಸರಕಾರದಿಂದ ಮೀನುಗಾ ರರಿಗೆ ದೊರಕುವ ವಿವಿಧ ಯೋಜನೆಗಳ ಧನಸಹಾಯ ಮಂಜೂ ರಾತಿ ಪತ್ರ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.