ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು!
21,90,858 ಮತದಾರರು ಹೊಸದಾಗಿ 27,590 ಮತದಾರರ ನೋಂದಣಿ 278 ಇತರೆ ಮತದಾರರು
Team Udayavani, Feb 23, 2020, 12:48 PM IST
ಬಳ್ಳಾರಿ: ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇರೆಗೆ ಗಣಿನಾಡು ಜಿಲ್ಲೆಯಲ್ಲಿನ ಮತದಾರರ ಪಟ್ಟಿಯನ್ನು ಕಳೆದ ಫೆ.7 ರಂದು ಅಂತಿಮಗೊಳಿಸಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿ ಒಟ್ಟು 21,90,858 ಮತದಾರರಿದ್ದಾರೆ ಎಂದು ಘೋಷಿಸಿದೆ. ಇದರಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ.
ಭಾರತೀಯ ಚುನಾವಣಾ ಆಯೋಗ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಹೊಸದಾಗಿ ಹೆಸರು ನೋಂದಣಿ ಮಾಡಿಕೊಂಡಿರುವ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸುತ್ತದೆ. ಅದೇ ಜನವರಿ ತಿಂಗಳು 1ರಂದು 18 ವರ್ಷ ತುಂಬಿದ ಯುವಕ-ಯುವತಿಯರಿಗೆ ಮತದಾನದ ಹಕ್ಕು ನೀಡಲು ಕ್ರಮ ಕೈಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಬೂತ್‌ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಅರ್ಹ ಯುವಕ-ಯುವತಿಯರ ಹೆಸರು ನೋಂದಾಯಿಸಿಕೊಂಡು, ಇಲ್ಲದ ಹೆಸರುಗಳನ್ನು ತೆಗೆದು ಹಾಕಲಾಗುತ್ತದೆ. ಗ್ರಾಪಂ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಈ ಕ್ರಮಕೈಗೊಳ್ಳುತ್ತದೆ. ಅದರಂತೆ ಜಿಲ್ಲಾಡಳಿತ ಹೊಸ ಮತದಾರರನ್ನು ಸೇರಿಸಿದ ಮತದಾರರ ಪಟ್ಟಿಯನ್ನು ಕಳೆದ ಫೆ.7 ರಂದು ಅಂತಿಮಗೊಳಿಸಿದೆ.
21,90,858 ಮತದಾರರು: ಬಳ್ಳಾರಿ ಜಿಲ್ಲಾಡಳಿತ ಹೊಸದಾಗಿ ಪ್ರಕಟಿಸಿದ ಮತದಾರರ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ 21,90,858 ಮತದಾರರನ್ನು ಹೊಂದಿದೆ. ಹಡಗಲಿ ವಿಧಾನಸಭೆ ಕ್ಷೇತ್ರದಲ್ಲಿ 94399 ಪುರುಷ, 92685 ಮಹಿಳೆ, 13 ಇತರೆ ಸೇರಿ ಒಟ್ಟು 1,87,097 ಮತದಾರರು ಇದ್ದಾರೆ. ಹಗರಿಬೊಮ್ಮನಹಳ್ಳಿ ಕ್ಷೇತ್ರ 1,13,639 ಪುರುಷ, 1,14,201 ಮಹಿಳೆ, 27 ಇತರೆ ಒಟ್ಟು 2,27,867 ಮತದಾರರು, ವಿಜಯನಗರ ಕ್ಷೇತ್ರ 1,17831 ಪುರುಷ, 1,23,061, 69 ಇತರೆ, ಒಟ್ಟು 2,40,961 ಮತದಾರರು. ಕಂಪ್ಲಿ ವಿಧಾನಸಭೆ ಕ್ಷೇತ್ರ 1,08,871 ಪುರುಷ, 1,11,028 ಮಹಿಳೆ, 29 ಇತರೆ ಒಟ್ಟು 2,19,928 ಮತದಾರರು, ಸಿರುಗುಪ್ಪ ಕ್ಷೇತ್ರ 1,03,707 ಪುರುಷ, 1,06,526 ಮಹಿಳೆ, 33 ಇತರೆ, ಒಟ್ಟು 2,10,266, ಬಳ್ಳಾರಿ ಗ್ರಾಮೀಣ ಕ್ಷೇತ್ರ 1,11,653 ಪುರುಷ, 1,16,715 ಮಹಿಳೆ, 44 ಇತರೆ, ಒಟ್ಟು 2,28,412 ಮತದಾರರು, ಬಳ್ಳಾರಿ ನಗರ ಕ್ಷೇತ್ರ 1,19,536 ಪುರುಷ, 1,24,735 ಮಹಿಳೆ, 19 ಇತರೆ, ಒಟ್ಟು 2,44,290 ಮತದಾರರು, ಸಂಡೂರು ಕ್ಷೇತ್ರ 1,11,097 ಪುರುಷ, 1,09,896 ಮಹಿಳೆ, 30 ಇತರೆ ಒಟ್ಟು 2,21,023 ಮತದಾರರು, ಕೂಡ್ಲಿಗಿ ಕ್ಷೇತ್ರ 1,04,133 ಪುರುಷ, 1,02,102 ಮಹಿಳೆ, 14 ಇತರೆ ಒಟ್ಟು 2,06,249, ಹರಪನಹಳ್ಳಿ 1,04,526 ಪುರುಷ, 1,00,239 ಮಹಿಳೆ ಸೇರಿ ಒಟ್ಟು 2,01,765 ಮತದಾರರು ಸೇರಿ ಜಿಲ್ಲೆಯಲ್ಲಿ ಒಟ್ಟು 21,90,858 ಮತದಾರರು ಇದ್ದಾರೆ ಎಂದು ಜಿಲ್ಲಾಡಳಿತದ ದಾಖಲೆಗಳಲ್ಲಿನ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ.
ಮಹಿಳೆಯರೇ ಹೆಚ್ಚು: ಬಳ್ಳಾರಿ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಪೈಕಿ ಹರಪನಹಳ್ಳಿ, ಹಡಗಲಿ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲೂ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಜಿಲ್ಲೆಯಲ್ಲಿ ಒಟ್ಟಾರೆ 10,89,392 ಪುರುಷ ಮತದಾರರು ಇದ್ದರೆ, ಮಹಿಳೆಯರು 11,01,188 ಮತದಾರರಿದ್ದು, ಪುರುಷರಿಗಿಂತ 11,796 ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 278 ಇತರೆ ಮತದಾರರು ಇದ್ದಾರೆ. ಹರಪನಹಳ್ಳಿ ಕ್ಷೇತ್ರದಲ್ಲಿ ಶೇ. 77.10ರಷ್ಟು ಪುರುಷರು, ಶೇ. 75.65ರಷ್ಟು ಮಹಿಳೆಯರು ಇದ್ದರೆ, ಉಳಿದ ಹಡಗಲಿ ಶೇ. 69.47 ಪುರುಷ, ಶೇ. 68.92 ಮಹಿಳೆ, ಹ.ಬೊ. ಹಳ್ಳಿ ಶೇ. 67.41 ಪುರುಷ, ಶೇ. 68.42 ಮಹಿಳೆ, ವಿಜಯನಗರ ಶೇ. 65.57 ಪುರುಷ, ಶೇ. 66.83 ಮಹಿಳೆ, ಕಂಪ್ಲಿ ಶೇ. 66.45 ಪುರುಷ, ಶೇ. 66.47 ಮಹಿಳೆ, ಸಿರುಗುಪ್ಪ ಶೇ. 64.57 ಪುರುಷ, ಶೇ. 65.03 ಮಹಿಳೆ, ಬಳ್ಳಾರಿ ಗ್ರಾಮೀಣ ಶೇ. 69.19 ಪುರುಷ, ಶೇ. 72.15 ಮಹಿಳೆ, ಬಳ್ಳಾರಿ ನಗರ ಶೇ. 65.71 ಪುರುಷ, ಶೇ. 68.30 ಮಹಿಳೆ, ಸಂಡೂರು ಶೇ. 62.75 ಪುರುಷ, ಶೇ. 65.08 ಮಹಿಳೆ, ಕೂಡ್ಲಿಗಿ ಶೇ. 68.95 ಪುರುಷ, ಶೇ. 69.45ರಷ್ಟು ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.
27,590 ಹೊಸ ಮತದಾರರು
ಜನವರಿ 1ರಿಂದ ಆರಂಭವಾದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 27,590 ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಹಡಗಲಿ 721 ಪುರುಷ, 1097 ಮಹಿಳೆ ಸೇರಿ ಒಟ್ಟು 1818, ಹ.ಬೊ.ಹಳ್ಳಿ 1561 ಪುರುಷ, 2096
ಮಹಿಳೆ ಸೇರಿ 3657, ವಿಜಯನಗರ 2140 ಪುರುಷ, 2667 ಮಹಿಳೆ ಸೇರಿ 4807, ಕಂಪ್ಲಿ 722 ಪುರುಷ, 1193 ಮಹಿಳೆ ಸೇರಿ 1915, ಸಿರುಗುಪ್ಪ 930 ಪುರುಷ, 1478 ಮಹಿಳೆ ಸೇರಿ 2408, ಬಳ್ಳಾರಿ ಗ್ರಾಮೀಣ 2014 ಪುರುಷ, 2387 ಪುರುಷ ಸೇರಿ 4401, ಬಳ್ಳಾರಿ ನಗರ 468 ಪುರುಷ, 1118 ಮಹಿಳೆ ಸೇರಿ 1586, ಸಂಡೂರು 907 ಪುರುಷ, 1303 ಮಹಿಳೆ ಸೇರಿ 2210, ಕೂಡ್ಲಿಗಿ 1726 ಪುರುಷ, 2410 ಮಹಿಳೆ ಒಟ್ಟು 4136, ಹರಪನಹಳ್ಳಿ 170 ಪುರುಷ, 482 ಮಹಿಳೆ ಸೇರಿ 652 ಸೇರಿ ಜಿಲ್ಲೆಯಲ್ಲಿ 11359 ಪುರುಷರು, 16231 ಮಹಿಳೆಯರು ತಮ್ಮ ಹೆಸರು ನೋಂದಾಯಿಸಿದ್ದಾರೆ. ಇದರಲ್ಲೂ ಸಹ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿರುವುದು ಗಮನಾರ್ಹ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.