ರಥ ತಯಾರಿಕೆ ತಾರಿಮರಕ್ಕೆ ಪೂಜೆ ಸಲ್ಲಿಕೆ
Team Udayavani, Feb 23, 2020, 2:25 PM IST
ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಮಾ.3 ರಿಂದ ನಡೆಯಲಿದ್ದು, ರಥಕ್ಕೆ ಬಳಸಲಾಗುವ ಮರವನ್ನು ಪೂಜಿಸಿ ಕಚ್ಚು ಹಾಕುವ ಸಂಪ್ರದಾಯವನ್ನು ಶಾಸ್ತ್ರ ಬದ್ಧವಾಗಿ ಶುಕ್ರವಾರ ನಡೆಸಲಾಯಿತು.
ಬಾಬುದಾರ ಪ್ರಮುಖ ಜಗದೀಶ ಗೌಡರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಕಚ್ಚು ಹಾಕಲಾಯಿತು. ಮರ ಕಡಿತವನ್ನು ಹನುಮಂತ ಸಾಲೇರ್ ಕುಟುಂಬದ ಮಾಲೀಕತ್ವದ ತೋಟದಲ್ಲಿ ತಾರೀಮರವನ್ನು ಅರಣ್ಯ ಇಲಾಖೆ ಪರವಾನಗಿ ಪಡೆದು ಕಡಿಯಲಾಯಿತು. ತಾರೀಮರಕ್ಕೆ ಪೂಜೆ ಸಲ್ಲಿಸಿ, ಮರ ಕಡಿಯುವ ಸಾಮಗ್ರಿಗಳನ್ನೂ ಪೂಜಿಸಲಾಯಿತು.
ಜಗದೀಶ ಗೌಡ ಮಾತನಾಡಿ, ಕಾನೂನು ಪ್ರಕಾರವಾಗಿ ಮರ ಕಡಿಯಲಾಗಿದೆ. ಈ ಮೂಲಕ ಸಂಪ್ರದಾಯ ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಬಾಬುದಾರರು ರೈತರೇ ಆಗಿದ್ದು, ಒಂದು ಮರ ಕಡಿತಕ್ಕೆ ಸಾವಿರ ಮರ ನೆಡುವ ಸಂಪ್ರದಾಯ ಕೂಡ ಮಾಡುತ್ತಿದ್ದೇವೆ. ಸರಕಾರವೇ ಎರಡು ವರ್ಷಕ್ಕೆ ನಡೆಯುವ ಜಾತ್ರೆಗೆ ಎರಡು ಮರವನ್ನು ನೀಡಬೇಕು ಎಂಬ ಬೇಡಿಕೆ ಕೂಡ ಇಡುತ್ತೇವೆ. ಈ ಬಾರಿ ಖಾಸಗಿ ಭೂಮಿಯಿಂದ ಪಡೆಯಲಾಗಿದೆ. ನ್ಯಾಯಾಧೀಶರ ಆದೇಶವನ್ನೂ ಪಾಲಿಸಲಾಗಿದೆ ಎಂದರು.
ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ಕಾನೂನು, ಸಂಪ್ರದಾಯ ಬದ್ಧವಾಗಿ ಮರ ಕಡಿತ ಮಾಡಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ದೇವಿ ರಥಕ್ಕೆ ಮರ ಕಡಿಯಬೇಕೇ, ಬೇಡವೇ ಎಂಬ ಚರ್ಚೆ ಕೂಡ ನಡೆದಿತ್ತು. ಮರ ಕಡಿಯದೇ ಜಾತ್ರೆ ನಡೆಸಬೇಕು. ಅಷ್ಟು ಅಗತ್ಯ ಇದ್ದರೆ ಕಾನೂನು ಪ್ರಕಾರ ಕಾರ್ಯ ಮಾಡಬೇಕು ಎಂದು ನ್ಯಾಯಾಲಯ ಕೂಡ ಸೂಚಿಸಿತ್ತು ಎಂಬುದು ಉಲ್ಲೇಖನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.