ಮಂಕಿ ಟೈಗರ್‌ಗೆ “ಪೈರಸಿ’ ಕಾಟ!
ಯಾರು ಯಾರ ಓಟಾನೂ ನಿಲ್ಸಕ್ಕಾಗಲ್ಲ ಟ್ವೀಟ್ ಮಾಡಿದ ಧನಂಜಯ್
Team Udayavani, Feb 24, 2020, 7:01 AM IST
ನಟ ಧನಂಜಯ್ ಅಭಿನಯದ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರ ಮೂರು ದಿನಗಳ ಹಿಂದಷ್ಟೇ ತೆರೆಕಂಡಿದೆ. “ಟಗರು’ ಚಿತ್ರದ ಸೂಪರ್ ಹಿಟ್ ಸಕ್ಸಸ್ ಬಳಿಕ ನಿರ್ದೇಶಕ “ದುನಿಯಾ’ ಸೂರಿ ಮತ್ತು ಧನಂಜಯ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿರುವ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ನಿರೀಕ್ಷೆಯಂತೆ ಭರ್ಜರಿ ಓಪನಿಂಗ್ಸ್ ಕೂಡ ಸಿಕ್ಕಿದೆ. ಚಿತ್ರದ ಕಥೆ ಮತ್ತು ಧನಂಜಯ್ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳು ಕೂಡ ಬರುತ್ತಿವೆ. ಈ ಖುಷಿಯ ನಡುವೆಯೇ ಚಿತ್ರತಂಡಕ್ಕೆ ಈಗ ಮತ್ತೂಂದು ತಲೆ ನೋವು ಎದುರಾಗಿದೆ. ಹೌದು, “ಪಾಪ್‌ಕಾರ್ನ್ ಮಂಕಿ ಟೈಗರ್’ ಬಿಡುಗಡೆಯಾದ ಒಂದೇ ದಿನದಲ್ಲಿ ಪೈರಸಿಗೆ ಒಳಗಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವಂತೆಯೇ, “ಪಾಪ್‌ಕಾರ್ನ್ ಮಂಕಿ ಟೈಗರ್’ಗೆ ಪೈರಸಿ ಕಾಟ ಶುರುವಾಗಿರುವುದು, ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಟ ಧನಂಜಯ್, “ಹೌಸ್‌ಫುಲ್ ಶೋಗಳನ್ನು ಕೊಡ್ತಾ ಇರೋದು ನಿಜ. ಸಿನಿಮಾ ಪ್ರೇಮಿಗಳಿಗೆ ನನ್ನ ಕೃತಜ್ಞತೆ. ಯಾರು ಯಾರ ಓಟಾನು ನಿಲ್ಸಕ್ಕಾಗಲ್ಲ’ ಎಂದಿದ್ದಾರೆ. ಕಳೆದ ವರ್ಷ “ಯಜಮಾನ’, “ಪೈಲ್ವಾನ್’ ನಂತರ ಈ ವರ್ಷ ಕನ್ನಡದ ಮತ್ತೂಂದು ಚಿತ್ರ ಪೈರಸಿಯಾಗಿದೆ ಎಂದು ಹೇಳಲಾಗುತ್ತಿದ್ದು, ಮೊದಲೇ ಸಾಲು ಸಾಲು ಸಮಸ್ಯೆಗಳಿಂದ ಹೈರಾಣಾಗಿರುವ ಕನ್ನಡ ಚಿತ್ರಗಳ ನಿರ್ಮಾಪಕರಿಗೆ ಈಗ ಎದ್ದಿರುವ ಪೈರಸಿ ಕಾಟದಿಂದ ಮುಕ್ತಿ ಪಡೆಯೋದು ಹೇಗೆ ಅನ್ನೋದಕ್ಕೆ ಚಿತ್ರರಂಗದ ಮಂದಿಯೇ ಉತ್ತರ ಕಂಡುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.