ಮಾನವ ಜನ್ಮದ ಶ್ರೇಷ್ಠತೆ ಅರಿಯಿರಿ: ಭಾತಂಬ್ರಾ ಶ್ರೀ
ಜಿಲ್ಲಾ ಮಠಾಧಿಪತಿಗಳ ಒಕ್ಕೂಟದ 53ನೇ ಸಮ್ಮೇಳನ
Team Udayavani, Feb 24, 2020, 4:12 PM IST
ಭಾಲ್ಕಿ: ಭಕ್ತಾದಿಗಳು ಶ್ರದ್ಧೆ-ಭಕ್ತಿಯಿಂದ ದೇವರ ಧ್ಯಾನ ಮಾಡಿದಲ್ಲಿ ದೇವರು ಒಲಿಯುವನು ಎಂದು ಶ್ರೀ ಜಗದ್ಗುರು ನಿರಂಜನ ಸಂಸ್ಥಾನ ಮಠ ಭಾತಂಬ್ರಾದ ಶ್ರೀ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳು ಹೇಳಿದರು.
ಭಾತಂಬ್ರಾ ಗ್ರಾಮದ ಜಗದ್ಗುರು ನಿರಂಜನ ಸಂಸ್ಥಾನ ಮಠದಲ್ಲಿ ನಡೆದ ಜಿಲ್ಲಾ ಮಠಾಧಿಪತಿಗಳ ಒಕ್ಕೂಟದ 53ನೇ ಸಮ್ಮೇಳನ ಹಾಗೂ ನಮ್ಮೂರ ಹಬ್ಬ ಕನ್ನಡಮ್ಮನ ಹಬ್ಬ-2020ರ ಸಮಾರೋಪ, ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳ 75ನೇ ಜಯಂತ್ಯುತ್ಸವ ನಿಮಿತ್ತ ಅನಾಥ ಮಕ್ಕಳ ಜನ್ಮದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಆಸೆಗೆ ಮಿತಿಇಲ್ಲ. ನಮ್ಮ ಭೌತಿಕ ಆಸೆಗಳಿಗೆ ಕಡಿವಾಣಹಾಕಿ ದೇವರನ್ನು ಪಡೆಯುವ ಆಸೆ ನಾವೆಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಮಾನವ ಜನ್ಮದ ಶ್ರೇಷ್ಠತೆ ಅರಿತು, ಆ ದೇವರನ್ನು ಕಂಡುಕೊಳ್ಳಲು ಎಲ್ಲರೂ ಪ್ರಯತ್ನ ಪಡಬೇಕು. ಅದಕ್ಕಾಗಿ ನಾವೆಲ್ಲರೂ ಭಕ್ತಿ ಶ್ರದ್ಧೆಯಿಂದ ದೇವರ ಧ್ಯಾನ ಮಾಡಬೇಕು ಎಂದು ಹೇಳಿದರು.
ಸಮಾರಂಭಕ್ಕೆ ಮುನ್ನ ಗ್ರಾಮದ ವಿವಿಧ ಬೀದಿಗಳಲ್ಲಿ ಲಿಂಗಾಯತ ಧರ್ಮಗ್ರಂಥ ವಚನ ಸಾಹಿತ್ಯ, ಧರ್ಮಗುರು ಬಸವಣ್ಣ ಹಾಗೂ ಅಕ್ಕಮಹಾದೇವಿ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ಇದೇವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ ರಾಜೇಂದ್ರಸಿಂಗ್ ಪವಾರ ಅವರಿಗೆ ಬಸವ ಕಲಾರತ್ನ ಪ್ರಶಸ್ತಿ, ಡಾ| ವಿ.ಬಿ.ಕುಂಬಾರ, ಡಾ| ಪಂಚಯ್ನಾ ಸ್ವಾಮಿ, ಡಾ| ಸುನೀಲ ರಘೋಜಿ ಅವರಿಗೆ ಬಸವಕುಮಾರ ಸಮಾಜ ಸೇವಾ ರತ್ನ ಪ್ರಶಸ್ತಿ, ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಹಾಗೂ ಪತ್ರಕರ್ತ ದಿಲೀಪ ಜೊಳದಪಕೆ ಅವರಿಗೆ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು.
ಖ್ಯಾತ ಸಂಗೀತಗಾರ ಶಿವಾಜಿ ಸಗರ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಿತು.ಡಾ| ಮಲ್ಲಿಕಾರ್ಜುನ ತರನಳ್ಳೆ, ಗ್ರಾಪಂ ಅಧ್ಯಕ್ಷ ಲಕ್ಷಣರಾವ್ ಮೋರೆ, ಜಗದೇವಿ ಸುರೇಶ ಲದ್ದೆ, ವಿಜಯಕುಮಾರ ಬೋರಾಳೆ, ಸತೀಶ ಬಿರಾದಾರ, ನಿರಂಜನ ಸ್ವಾಮಿ, ಸಾಹಿತಿ ದೇವೆಂದ್ರ ಕಮಲ, ಎಸ್.ವಿ. ಕಲಮಠ ಸಂಜೀವಕುಮಾರ ಗಾಮಾ, ಸತೀಶ ವಿರೂಪಾಕ್ಷಯ್ಯ ಮಠ, ಸುಭಾಷ ಇಟಗೆ, ಶಂಕರರಾವ್ ದಾಡಗೆ ಉಪಸ್ಥಿತರಿದ್ದರು. ದೀಪಕ ಥಮಕೆ ಸ್ವಾಗತಿಸಿದರು. ನ್ಯಾಯವಾದಿ ಶ್ರೀಕಾಂತ ಭೊರಾಳೆ ನಿರೂಪಿಸಿದರು. ಮಹೇಶ ರಾಚೋಟೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.