“ಥರ್ಡ್ ಕ್ಲಾಸ್’ ಚಿತ್ರಕ್ಕೆ “ಫಸ್ಟ್ ಕ್ಲಾಸ್’ ರೆಸ್ಪಾನ್ಸ್
ಚಿತ್ರತಂಡದಲ್ಲಿ ಮೂಡಿದ ಮಂದಹಾಸ
Team Udayavani, Feb 25, 2020, 7:02 AM IST
ಫೆಬ್ರವರಿ ಮೊದಲ ವಾರ “ಥರ್ಡ್ ಕ್ಲಾಸ್’ ಚಿತ್ರ ತೆರೆಗೆ ಬಂದಿದ್ದು ಗೊತ್ತಿರಬಹುದು. ಜಗದೀಶ್, ರೂಪಿಕಾ, ಅವಿನಾಶ್, ರಮೇಶ್ ಭಟ್, ಸಂಗೀತಾ ಸೇರಿದಂತೆ ಇನ್ನು ಹಲವು ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ಥರ್ಡ್ ಕ್ಲಾಸ್’ ಚಿತ್ರ ಇದೀಗ ಯಶಸ್ವಿಯಾಗಿ ಮೂರನೇ ವಾರದ ಪ್ರದರ್ಶನ ಕಾಣುತ್ತ ಮುನ್ನುಗ್ಗುತ್ತಿದೆ. ಇದೇ ಖುಷಿ ಹಂಚಿಕೊಳ್ಳಲು ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ, “ಥರ್ಡ್ ಕ್ಲಾಸ್’ ಬಿಡುಗಡೆ ಬಳಿಕ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಒಂದಷ್ಟು ಮಾತನಾಡಿತು.
ಮೊದಲು ಮಾತಿಗಿಳಿದ ನಾಯಕ ಕಂ ನಿರ್ಮಾಪಕ ಜಗದೀಶ್, “ನಮ್ಮ ಸಿನಿಮಾದ ಶೀರ್ಷಿಕೆ “ಥರ್ಡ್ ಕ್ಲಾಸ್’ ಅಂತಿದ್ದರೂ, ಪ್ರೇಕ್ಷಕರು ಸಿನಿಮಾ ನೋಡಿ ಇಷ್ಟಪಟ್ಟು, “ಫಸ್ಟ್ ಕ್ಲಾಸ್’ ಅಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಮೂಲಕ ಯಾವುದು ಸರಿ, ಯಾವುದು ತಪ್ಪು, ಯಾವುದು ಒಳ್ಳೇಯದು-ಕೆಟ್ಟದ್ದು ಅಂತ ತಿಳಿದುಕೊಳ್ಳಲು ಸಮಯವಕಾಶ ಸಿಕ್ಕಿತ್ತು. ಉತ್ತರ ಕರ್ನಾಟಕದಲ್ಲಿ ಸಿನಿಮಾಕ್ಕೆ ಹೆಚ್ಚು ಪ್ರಚಾರ ಮಾಡಿದ್ದರಿಂದ, ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ಚಿತ್ರದುರ್ಗ, ಬಾಗಲಕೋಟೆ ಮೊದಲಾದ ಕಡೆ ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ, ಪ್ರೇಕ್ಷಕರು ಕಣ್ಣೀರು ಬಾರದೆ ಹೊರಗೆ ಬರುವುದಕ್ಕೆ ಆಗಲಿಲ್ಲವೆಂದು ಹೇಳಿದರು. ಈ ಮಾತು ಕೇಳಿದಾಗ ಖುಷಿ ಆಯಿತು. ಸಿನಿಮಾದ ಕೊನೆಯ ಒಂದು ನಿಮಿಷದ ಕ್ಲೈಮಾಕ್ಸ್ ತಂದೆ-ತಾಯಿಯನ್ನು ನೆನಪಿಸುತ್ತದೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ಈ ಸಿನಿಮಾದಿಂದ ಸಿಕ್ಕಿದೆ’ ಎಂದರು. ನಾಯಕಿ ರೂಪಿಕಾ ಮಾತನಾಡಿ, “ಚಲುವಿನ ಚಿಲಿಪಿಲಿ’ ಮೊದಲ ಸಿನಿಮಾದ ನಂತರ ಈ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿದ್ದೇನೆ.
ಈ ಹತ್ತು ವರ್ಷದಲ್ಲಿ ಏಳು-ಬೀಳು ಕಂಡಿದ್ದೇನೆ. ಕಲಾವಿದರು, ತಾಂತ್ರಕತೆ ಶಕ್ತಿಶಾಲಿಯಾಗಿದ್ದರಿಂದ ಸಿನಿಮಾ ಗೆದ್ದಿದೆ. ಯಾವುದೇ ನಟ, ನಟಿ ಆಗಲಿ ಬ್ರೇಕ್ ಸಿಗಬೇಕೆಂಬ ಬಯಕೆ ಇರುತ್ತದೆ. ಫ್ಯಾಮಿಲಿ ಆಡಿಯನ್ಸ್‌ಗೆ ಸಿನಿಮಾ ಇಷ್ಟವಾಗ್ತಿದೆ. ಸದ್ಯ ಇನ್ನೂ ಚಿತ್ರದ ಪ್ರಚಾರ ಕಾರ್ಯ ಮಾಡುತ್ತಿದ್ದೇವೆ. ಮುಂದೆಯೋ ಇದೇ ಪ್ರೋತ್ಸಾಹ ಇರಲಿ’ ಎಂದು ಕೇಳಿಕೊಂಡರು. ಇನ್ನು, ನಿರ್ದೇಶಕ ಅಶೋಕ ದೇವ್ ಕೂಡ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಲ್ಲಿದ್ದಾರೆ. ಚಿತ್ರದ ಕಲಾವಿದರು, ತಂತ್ರಜ್ಞರು “ಥರ್ಡ್ ಕ್ಲಾಸ್’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಕುರಿತು ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.