ಕೊರೊನಾ ಭೀತಿ: ಅರ್ಧಕ್ಕರ್ಧ ಚಿಕನ್ ದರ ಕುಸಿತ
Team Udayavani, Feb 25, 2020, 3:00 AM IST
ಚಿಕ್ಕಬಳ್ಳಾಪುರ: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಬಗ್ಗೆ ಹಬ್ಬುತ್ತಿರುವ ಭಯ, ಆತಂಕ, ವದಂತಿಗಳಿಗೆ ಜಿಲ್ಲೆಯ ಚಿಕನ್ ಮಾರುಕಟ್ಟೆ ತತ್ತರಗೊಳ್ಳುತ್ತಿದ್ದು, ಕಳೆದ ವಾರದಿಂದ ಜಿಲ್ಲೆಯಲ್ಲಿ ಚಿಕನ್ ಮಾರಾಟದಲ್ಲಿ ಭಾರೀ ಕುಸಿತಗೊಂಡು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಕೊರೊನಾ ವೈರಸ್ ಕೋಳಿಗಳ ಮೂಲಕವೂ ಹಬ್ಬುತ್ತಿದೆಯೆಂಬ ವದಂತಿಯಿಂದಾಗಿ ಜಿಲ್ಲೆಯ ಚಿಕನ್ ಮಾರಾಟದಲ್ಲಿ ವ್ಯತ್ಯಯ ಕಂಡು ಬಂದಿದ್ದು, 2-3 ವಾರಗಳಿಂದ ಬೆಲೆ ಸಹ ಕುಸಿತವಾಗಿದ್ದು, 180-190 ರೂ. ಇದ್ದ ಕೆ.ಜಿ.ಚಿಕನ್ ಬೆಲೆ ಈಗ ಅರ್ಧಕ್ಕೆ ಅರ್ಧ ಕುಸಿತವಾಗಿ ಬರೀ 100, 110 ರೂ.ಗೆ ಮಾತ್ರ ಮಾರಾಟಗೊಳ್ಳುತ್ತಿದೆ.
ಖರೀದಿಗೆ ಹಿಂದೇಟು: ಚೀನಾ ದೇಶದಲ್ಲಿ ಕೊರೊನಾ ವೈರಸ್ ಕಳೆದೆರೆಡು ತಿಂಗಳಿಂದ ಭೀಕರ ನರಕ ಸದೃಶವನ್ನು ಸೃಷ್ಟಿಸಿ ಅಪಾರ ಸಾವುನೋವು ಸಂಭವಿಸುವಂತೆ ಮಾಡಿದ್ದು, ಅದರ ಹೊಡೆತ ದೇಶದ ವಿವಿಧ ರಂಗಗಳಲ್ಲಿ ಕಾಣಿಸಿಕೊಂಡಿದೆ. ಕೊರೊನಾ ವೈರಸ್ ಫಾರಂ ಕೋಳಿಗಳ ಮೂಲಕ ಹರಡುತ್ತದೆ ಎಂದ ವದಂತಿ ಕೇಳಿ ಬರುತ್ತಿರುವುದರಿಂದ ಚಿಕನ್ ಪ್ರಿಯರನ್ನು ಚಿಂತೆಗೀಡು ಮಾಡಿದೆ.
ವಾರಕ್ಕೊಮ್ಮೆ ಚಿಕನ್ ಖರೀದಿ ಮಾಡುತ್ತಿದ್ದ ಗ್ರಾಹಕರು ಇಂದು ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದೆ. ಚಿಕನ್ ಅಗ್ಗವಾದರೂ ಖರೀದಿಗೆ ವೈರಸ್ ಭೀತಿಯಿಂದ ಯಾರು ಮುಂದಾಗುತ್ತಿಲ್ಲ. ಮಂಗಳವಾರ, ಭಾನುವಾರ ಗಿಜಿಗುಡುತ್ತಿದ್ದ ಚಿಕನ್ ಮಾರುಕಟ್ಟೆ ಅಂಗಡಿ, ಮಳಿಗೆಗಳು ಈಗ ಗ್ರಾಹಕರ ಬರುವಿಕೆಗೆ ಎದುರು ನೋಡುವಂತಾಗಿದೆ. ಇನ್ನೂ ಜಿಲ್ಲೆಯ ಚಿಕನ್ ವ್ಯಾಪಾರಸ್ಥರಿಗೂ ತೀವ್ರ ಆರ್ಥಿಕ ಹೊಡೆತ ಬಿದ್ದಂತಾಗಿದೆ.
ದಿನಕ್ಕೆ 120, 200 ಕೆ.ಜಿ. ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಈಗ ದಿನಕ್ಕೆ 50 ಕೆ.ಜಿ.ಮಾರಾಟ ಆಗುವುದು ಕಷ್ಟವಾಗಿದೆ ಎನ್ನುತ್ತಾರೆ ಮಾರಾಟಗಾರರು. ಕೊರೊನಾ ವೈರಸ್ ಕೋಳಿಗಳಿಂದ ಬರಲ್ಲ ಎಂದು ಎಷ್ಟೇ ಮನವರಿಕೆ ಮಾಡಿದರೂ ಗ್ರಾಹಕರು ಚಿಕನ್ ಖರೀದಿಗೆ ಮುಂದಾಗುತ್ತಿಲ್ಲ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನೂ ಹೋಟೆಲ್, ರೆಸ್ಟೋರೆಂಟ್, ಡಾಬಾಗಳಲ್ಲಿ ಕೂಡ ಚಿಕನ್ ಖಾದ್ಯಗಳ ಮಾರಾಟದಲ್ಲಿ ಕುಸಿತ ಕಂಡಿದೆಯೆಂಬ ಮಾತು ಕೇಳಿ ಬರುತ್ತಿದೆ.
ನಾಟಿ ಕೋಳಿಗೆ ಹೆಚ್ಚಿದ ಬೇಡಿಕೆ: ಕೊರೊನಾ ವೈರಸ್ ಭೀತಿಯಿಂದ ಮಾರುಕಟ್ಟೆಯಲ್ಲಿ ಫಾರಂ ಕೋಳಿ ಚಿಕನ್ ದರ ಪಾತಾಳಕ್ಕೆ ಕುಸಿದು ಫಾರಂ ಕೋಳಿಗಳನ್ನು ಖರೀದಿಗೆ ಹೆಚ್ಚಿನ ಪ್ರಮಾಣದಲ್ಲಿ ಯಾರು ಮುಂದಾಗದ ಕಾರಣ ಜಿಲ್ಲೆಯ ಮಾರುಕಟ್ಟೆಯಲ್ಲಿ ನಾಟಿ ಕೋಳಿಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಿದೆ.
ಚಿಕನ್ ಪ್ರಿಯರು ಫಾರಂ ಕೋಳಿಗಳನ್ನು ಬಿಟ್ಟು ನಾಟಿ ಕೋಳಿ ಖರೀದಿಗೆ ಮುಂದಾಗಿದ್ದಾರೆ. ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ ಪಟ್ಟಣಗಳಲ್ಲಿ ನಿತ್ಯ ನಾಟಿ ಕೋಳಿಗಳ ಮಾರಾಟ ಜೋರಾಗಿದೆ. ಕೆ.ಜಿ. ನಾಟಿ ಕೋಳಿ ಮಾರುಕಟ್ಟೆಯಲ್ಲಿ 200 ರಿಂದ 250 ರೂ.ವರೆಗೂ ಇದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಾಟಿ ಕೋಳಿಗಳನ್ನು ಸಾಕಿರುವ ರೈತರಿಗೆ ಕೊರೊನಾ ವೈರಸ್ ಒಂದು ರೀತಿ ಶುಕ್ರದೆಸೆ ಕಲ್ಪಿಸಿದ್ದು, ಕೈ ತುಂಬ ಕಾಸು ಮಾಡಿಕೊಳ್ಳುತ್ತಿದ್ದಾರೆ.
ಚೀನಾದಲ್ಲಿ ಕೊರೊನಾ ವೈರಸ್ ಭೀತಿಯಿಂದ ಯಾರು ಫಾರಂ ಕೋಳಿ ಚಿಕನ್ ಹೆಚ್ಚಾಗಿ ಖರೀದಿ ಮಾಡುತ್ತಿಲ್ಲ. ಗ್ರಾಹಕರು ಕೈ ತಪ್ಪ ಬಾರದೆಂದು ಹಳ್ಳಿಗಳಿಗೆ ಹೋಗಿ ನಾಟಿ ಕೋಳಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಎಂದಿನಂತೆ ವ್ಯಾಪಾರ ಇದೆ. ಆದರೆ ಫಾರಂ ಕೋಳಿ ಚಿಕನ್ ಮಾರಾಟದಲ್ಲಿ ಭಾರೀ ಕುಸಿತವಾಗಿದೆ.
-ಗಗನ್, ಚಿಕನ್ ವ್ಯಾಪಾರಿ, ಎಂಜಿ ರಸ್ತೆ
ಮನುಷ್ಯನಿಗೆ ಆರೋಗ್ಯ ಮುಖ್ಯ. ಫಾರಂ ಕೋಳಿಗಳಲ್ಲಿ ಕೊರೊನಾ ವೈರಸ್ ಹರಡುತ್ತದೆಯೆಂಬ ವದಂತಿ ಇದೆ. ಆದ್ದರಿಂದ ನಾವು ನಾಟಿ ಕೋಳಿಗಳನ್ನು ಖರೀದಿ ಮಾಡುತ್ತಿದ್ದೇವೆ. ಚಿಕನ್ ಬೆಲೆ ಕುಸಿತವಾದರೂ ಆರೋಗ್ಯದ ದೃಷ್ಟಿಯಿಂದ ಖರೀದಿಗೆ ಮನಸ್ಸು ಬರುತ್ತಿಲ್ಲ. ಬೆಲೆ ಹೆಚ್ಚಾದರೂ ಪರವಾಗಿಲ್ಲ. ನಾಟಿ ಕೋಳಿ ಖರೀದಿ ಮಾಡುತ್ತೇವೆ.
-ರಾಜಣ್ಣ, ಮಂಚೇನಹಳ್ಳಿ ನಿವಾಸಿ
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.