2022ರ ಅಂತ್ಯಕ್ಕೆ ದೇಶಾದ್ಯಂತ 1.5 ಲಕ್ಷ ಆಯುಷ್ಮಾನ್‌ ಆರೋಗ್ಯ ಕೇಂದ್ರ


Team Udayavani, Feb 25, 2020, 3:08 AM IST

2022kke

ಬೆಂಗಳೂರು: 2022ರ ಅಂತ್ಯಕ್ಕೆ ರಾಜ್ಯದ 9 ಸಾವಿರ ಆರೋಗ್ಯ ಕೇಂದ್ರಗಳನ್ನು ಸೇರಿದಂತೆ ದೇಶದ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು “ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸುವ ಮೂಲಕ ಗುಣಮಟ್ಟದ ಸೇವೆಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ವಿಕಾಸ್‌ ಶೀಲ್‌ ತಿಳಿಸಿದರು.

ಸೋಮವಾರ ನಗರದ ಐಎಎಸ್‌ ಆಫೀಸರ್ ಅಸೋಸಿ ಯೇಷನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2018ರಿಂದ ದೇಶದೆಲ್ಲೆಡೆ ಉಪ-ಕೇಂದ್ರಗಳು (5 ಸಾವಿರ ಜನಸಂಖ್ಯೆಯುಳ್ಳ ಗ್ರಾಮೀಣ ಪ್ರದೇಶ ಆರೋಗ್ಯ ಕೇಂದ್ರ), ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು “ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.

ಸದ್ಯ ದೇಶಾದ್ಯಂತ 30,690 ಸಾವಿರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಸಂಖ್ಯೆಯನ್ನು 2021ರಲ್ಲಿ 70 ಸಾವಿರ, 2022 ಮಾರ್ಚ್‌ಗೆ 1.1 ಲಕ್ಷ , 2022 ಡಿಸೆಂಬರ್‌ ಅಂತ್ಯಕ್ಕೆ 1.5 ಲಕ್ಷಕ್ಕೇರಿಸಲಾಗುವುದು. ಅಂತೆಯೇ ಕರ್ನಾಟಕದಲ್ಲಿ ಈಗಾಲೇ 1,930 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ಸಂಖ್ಯೆಯನ್ನು 9 ಸಾವಿರಕ್ಕೇರಿಸಲಾಗುವುದು ಎಂದರು.

ಸೇವೆಗಳ ಹೆಚ್ಚಳ: ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವಿಸ್ತರಣೆ ಜತೆಗೆ ಈ ಕೇಂದ್ರಗಳಲ್ಲಿ ಸಿಗುತ್ತಿರುವ 7ಆರೋಗ್ಯ ಸೇವೆಗಳನ್ನು 12ಕ್ಕೆ ಹೆಚ್ಚಳ ಮಾಡಲಾಗುವುದು. ಪ್ರಸ್ತುತ ಪ್ರಸೂತಿ ಹಾಗೂ ಹೆರಿಗೆ, ನವಜಾತ ಶಿಶುಗಳ ಆರೈಕೆ, ಮಕ್ಕಳ ಆರೋಗ್ಯ ಸೇವೆಗಳು, ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ, ಹೊರ ರೋಗಿಗಳ ಸೇವೆ, ಕುಟುಂಬ ಯೋಜನೆ ಸೇವೆಗಳು, ಕ್ಯಾನ್ಸರ್‌, ರಕ್ತದೊತ್ತಡ, ಮಧುಮೇಹದಂಥ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಇವುಗಳ ಜತೆಗೆ ಹೆಚ್ಚುವರಿ ಸೇವೆಗಳಾಗಿ ಬಾಯಿ ಆರೋಗ್ಯ ಆರೈಕೆ, ನೇತ್ರ ಹಾಗೂ ಕಿವಿ ಸಮಸ್ಯೆಗಳು, ತುರ್ತು ಸೇವೆಗಳಾದ ಅಪಘಾತ ಹಾಗೂ ಸುಟ್ಟಗಾಯಗಳಿಗೆ ಚಿಕಿತ್ಸೆ, ಮಾನಸಿಕ ಆರೋಗ್ಯ ಪ್ರಾಥಮಿಕ ಚಿಕಿತ್ಸೆ, ರೋಗ ಉಪಶಮನ ಹಾಗೂ ವಯೋವೃದ್ಧರ ಚಿಕಿತ್ಸಾ ಕೇಂದ್ರದ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಅಸಾಂಕ್ರಾಮಿಕ ರೋಗ ಪರೀಕ್ಷೆಯಲ್ಲಿ ಹೆಚ್ಚುವರಿಯಾಗಿ ಕ್ಷಯ (ಟಿಬಿ) ಹಾಗೂ ಕುಷ್ಠ ರೋಗವನ್ನು ಸೇರಿಸಲಾಗುತ್ತಿದೆ ಎಂದು ತಿಳಿಸಿದರು.

10 ಕೋಟಿಗೂ ಅಧಿಕ ಮಂದಿ ಭೇಟಿ: 2018ರಿಂದ ದೇಶಾದ್ಯಂತ 10.07 ಕೋಟಿ ಮಂದಿ ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ವಿವಿಧ ರೋಗಗಳ ಪರೀಕ್ಷೆ ಜತೆಗೆ 8 ಲಕ್ಷ ಯೋಗ ಹಾಗೂ ಕ್ಷೇಮ ಶಿಬಿರಗಳನ್ನು ಆಯೋಜಿಸಲಾಗಿದೆ. ಕೇಂದ್ರಗಳಲ್ಲಿ ಹೊರ ರೋಗಿಗಳ ಸಂಖ್ಯೆ 15-30ರವರೆಗೆ ಹೆಚ್ಚಿದೆ. ಇದರಿಂದಾಗಿ ನೇರ ಮತ್ತು ಪರೋಕ್ಷ ಖರ್ಚು ಕಡಿಮೆಯಾಗಿದೆ ಎಂದು ಹೇಳಿದರು.

ಟೆಲಿ ಕನ್ಸಲ್ಟೆಷನ್‌ ಸರ್ವೀಸ್‌: ಗ್ರಾಮೀಣ ರೋಗಿಗಳಿಗೆ ಪರಿಣಿತರ ಸೇವೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಟೆಲಿ ಕನ್ಸಲ್ಟೆಷನ್‌ (ದೂರವಾಣಿ ಆಪ್ತ ಸಮಾಲೋಷನೆ) ಸೌಲಭ್ಯವನ್ನು ಒದಗಿಸಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ. ಒಮ್ಮೆ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳು ಮುಂದಿನ ದಿನಗಳಲ್ಲಿ ಈ ಕೇಂದ್ರಗಳಿಗೆ ಭೇಟಿ ನೀಡಿದರೆ ದೂರವಾಣಿಯ ಮೂಲಕ ಹಿಂದೆ ಚಿಕಿತ್ಸೆ ನೀಡಿದ ವೈದ್ಯರ ಅಥವಾ ಪರಿಣಿತ ವೈದ್ಯರ ಆಪ್ತಸಮಾಲೋಚನೆ ಸೌಲಭ್ಯ ಲಭ್ಯವಾಗಲಿದೆ.

ಕಲಬೆರಕೆ ಪತ್ತೆಗೆ ಮ್ಯಾಜಿಕ್‌ ಬಾಕ್ಸ್‌: ಸ್ಥಳೀಯ ಮಟ್ಟದಲ್ಲಿಯೇ ಆಹಾರ ಪೌಷ್ಟಿಕತೆ, ಕಲಬೆರಕೆಯನ್ನು ಅಳತೆ ಮಾಡಲು ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಆಹಾರ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ ಈ ಸೇವೆ ಆರಂಭವಾಗಲಿದ್ದು, ಅಗತ್ಯ ಯಂತ್ರೋಪಕರಣ ಗಳನ್ನು ನೀಡಲಾಗುತ್ತದೆ. ಇದರಿಂದ ಅಗತ್ಯ ಪೌಷ್ಟಿಕ ಆಹಾರ ಬಳಸಿ ಸದೃಢವಾಗಲು ಸಹಕಾರಿ ಎನ್ನುತ್ತಾರೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು.

ವೇತನ ನೀಡಲು ಸಾಧ್ಯವಿಲ್ಲ: ಆಶಾ ಕಾರ್ಯಕರ್ತೆಯರಿಗೆ ಸೂಕ್ತ ವೇತನ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ವಿಕಾಸ್‌ ಶೀಲ್‌, ಆಶಾ ಕಾರ್ಯಕರ್ತರು ಸ್ವಯಂ ಸೇವಕರು. ಅವರನ್ನು ಪ್ರೋತ್ಸಾಹ ಧನ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದಿಷ್ಟ ವೇತನ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದರೆ ರಾಜ್ಯ ಸರ್ಕಾರ ವೇತನ ನೀಡಬಹುದು. ಇದಕ್ಕೆ ಕೇಂದ್ರ ಆರೋಗ್ಯ ಇಲಾಖೆಯಿಂದ ಯಾವುದೇ ಅಭ್ಯಂತರವಿಲ್ಲ ಎಂದರು.

(2018 ಏಪ್ರಿಲ್‌ರಿಂದ 2020 ಫೆಬ್ರವರಿ )
1,930 ರಾಜ್ಯದ ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು
59,56,152 ಮಂದಿ ಭೇಟಿ ನೀಡಿದ ಹೊರ ರೋಗಿಗಳು (ಒಪಿಡಿ)
57,02,236 ಒಟ್ಟು ಔಷದಿ ವಿತರಣೆ
15,84,771 ಜನಕ್ಕೆ ಪ್ರಯೋಗ ಸೌಲಭ್ಯ
40,119 ಒಟ್ಟು ನಡೆದ ಯೋಗ ಶಿಬಿರಗಳು
6,71,021 ಮಂದಿಗೆ ರಕ್ತದೊತ್ತಡ ತಪಾಸಣೆ
6,20,267 ಜನರಿಗೆ ಮಧುಮೇಹ ತಪಾಸಣೆ
2,47,305 ಮಂದಿಗೆ ಬಾಯಿ ಕ್ಯಾನ್ಸರ್‌ ತಪಾಸಣೆ
36,557 ಜನರಿಗೆ ಸ್ತನ ಕ್ಯಾನ್ಸರ್‌ ತಪಾಸಣೆ
12,233 ಮಂದಿಗೆ ಗರ್ಭ ಕೋರಳಿನ ಕ್ಯಾನ್ಸರ್‌ ತಪಾಸಣೆ

ಟಾಪ್ ನ್ಯೂಸ್

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.