ನಳ್ಳಿ ನೀರು ಸೋರಿಕೆ: 109.5 ಕೋ. ರೂ. ನಷ್ಟ


Team Udayavani, Feb 25, 2020, 5:08 AM IST

24KSDE9

ಕಾಸರಗೋಡು: ಮನೆ, ಹೊಟೇಲ್‌, ಕಚೇರಿ ಮೊದಲಾದವುಗಳಿಗೆ ಸರಬರಾಜು ಮಾಡುವ ನಳ್ಳಿ ನೀರು ಪೈಪ್‌ ಸೋರಿಕೆಯಿಂದ ಕೇರಳ ವಾಟರ್‌ ಅಥೋರಿಟಿಗೆ ವರ್ಷದಲ್ಲಿ ನಷ್ಟ 109.5 ಕೋಟಿ ರೂಪಾಯಿ.

ಕಿಫ್‌ಬಿ ಮುಖಾಂತರ ಮತ್ತು ಇತರ ಏಜೆನ್ಸಿಗಳ ಮೂಲಕ ನಳ್ಳಿ ನೀರು ವಿತರಣೆ ಪೈಪ್‌ಗ್ಳನ್ನು ಬದಲಾಯಿಸಲು ಪ್ರತೀ ವರ್ಷವೂ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಪ್ರತೀ ವರ್ಷವೂ ಕೇರಳ ವಾಟರ್‌ ಅಥೋರಿಟಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಜಲ ಮಂಡಳಿ ಇಲಾಖೆಯೇ ಅಭಿಪ್ರಾಯಪಡುತ್ತಿದೆ.

ಬಹುತೇಕ ಪ್ರದೇಶಗಳಲ್ಲಿ ನಳ್ಳಿ ನೀರು ಪೈಪ್‌ ಸೋರಿಕೆ ನಿತ್ಯ ಘಟನೆ ಯಾಗಿದೆ. ಅಲ್ಲಲ್ಲಿ ಪೈಪ್‌ ಒಡೆದು ಭಾರೀ ಪ್ರಮಾಣದಲ್ಲಿ ನೀರು ಸೋರಿಕೆ ಯಾಗುತ್ತಿದೆ. ಹಳೆಯ ಹಾಗು ಕೆಟ್ಟು ಹೋಗಿರುವ ನಳ್ಳಿ ನೀರು ಪೈಪ್‌ಗ್ಳನ್ನು ಬದಲಾಯಿಸಲು 2016-17ರಲ್ಲಿ ಕಿಫ್‌ಬಿ ಮುಖಾಂತರ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಕೋಟ್ಟಯಂ, ತೃಶ್ಶೂರು, ಪಾಲಾ^ಟ್‌, ಮಲಪ್ಪುರಂ, ಕಲ್ಲಿಕೋಟೆ, ಕಣ್ಣೂರು ಜಿಲ್ಲೆಗಳಿಗಾಗಿ 382.64 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ ಪೈಪ್‌ ಬದಲಾಯಿಸುವ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. 2019-20 ನೇ ಕಾಲಾವಧಿಯಲ್ಲಿ ಸ್ಟೇಟ್‌ ಪ್ಲಾನ್‌(ರಾಜ್ಯ ಯೋಜನೆ)ಯಲ್ಲಿ ಸೇರ್ಪಡೆಗೊಳಿಸಿ 100 ಕಾಮಗಾರಿಗಳಿಗಾಗಿ 73.04 ಕೋಟಿ ರೂ. ಯ ಆಡಳಿತಾನುಮತಿ ನೀಡಿತ್ತು.

ವಾಟರ್‌ ಅಥಾರಿಟಿ ವಿತರಿಸುವ ನೀರಿನ 40-45 ಶೇಕಡಾದಷ್ಟು ವರಮಾನ ರಹಿತ ಜಲ ಎಂಬುದಾಗಿ ಲೆಕ್ಕ ಹಾಕುತ್ತಿದೆ. ಒಟ್ಟು ಉತ್ಪಾದಿಸುವ ನೀರಿನ ಪ್ರಮಾಣವೂ, ವಿತರಣೆ ಶೃಂಖಲೆಯ ಮೂಲಕ ಗ್ರಾಹಕರಿಗೆ ವಿತರಿಸುವ ಜಲದ ಪ್ರಮಾಣದ ಮಧ್ಯೆ ಇರುವ ತುಂಬಾ ವ್ಯತ್ಯಾಸವೇ ವರಮಾನ ರಹಿತ ಜಲ ಎಂಬುದಾಗಿ ಲೆಕ್ಕಾಚಾರವಾಗಿದೆ. ನಳ್ಳಿ ನೀರು ಪೈಪ್‌ ಒಡೆದು ಸೋರಿಕೆ ಮತ್ತು ಇತರ ಸೋರಿಕೆಯಿಂದಾಗಿ ಯತಾರ್ಥವಾಗಿ ಉಂಟಾಗುವ ನಷ್ಟ ಪ್ರಥಮ ಹಂತವಾಗಿದೆ. ಮೀಟರ್‌ ಸಮಸ್ಯೆ, ಕಳವು ಮೊದಲಾದವುಗಳ ಮೂಲಕ ನೀರಿನ ಸ್ಪಷ್ಟವಾದ ಬಳಕೆಯನ್ನು ಲೆಕ್ಕ ಹಾಕಲು ಸಾಧ್ಯವಾಗದಿರುವ ನಷ್ಟ ಎರಡನೇ ಹಂತವಾಗಿದೆ.

ಪೈಪ್‌ ಬದಲಾಯಿಸದಿರುವುದರಿಂದ ಸೋರಿಕೆ
ಕೇಂದ್ರ ಸರಕಾರದ “ಅಮೃತ ಯೋಜನೆ’ಯಲ್ಲಿ ಸೇರ್ಪಡೆಗೊಂಡ ಒಂಬತ್ತು ನಗರಗಳಲ್ಲಿ ಕುಡಿಯುವ ನೀರು ವಿತರಣೆ ಉತ್ತಮಗೊಳಿಸಲು 1,096.77 ಕೋಟಿ ರೂ. ಯೋಜನೆಗೆ ಆಡಳಿತಾನುಮತಿ ನೀಡಲಾಗಿತ್ತು. ಈ ಪೈಕಿ 143.59 ಕೋಟಿ ರೂ.ಯ ಹಳೆಯದಾದ ಹಾಗು ಕೆಟ್ಟು ಹೋಗಿರುವ ಪೈಪ್‌ಗ್ಳನ್ನು ಬದಲಾಯಿಸುವ ಉದ್ದೇಶಕ್ಕೆ ನೀಡಲಾಗಿತ್ತು. ಆದರೆ ಈ ಕಾಮಗಾರಿಯೂ ಪೂರ್ತಿಯಾಗಿಲ್ಲ. ಹಳೆಯದಾದ ಹಾಗೂ ಕೆಟ್ಟು ಹೋಗಿರುವ ಪೈಪ್‌ಗ್ಳನ್ನು ಬದಲಾಯಿಸದಿರುವುದರಿಂದಾಗಿ ಪದೇ ಪದೇ ನಳ್ಳಿ ನೀರು ಪೈಪ್‌ಗ್ಳು ಒಡೆದು ನೀರಿನ ಸೋರಿಕೆಯಾಗಲು ಪ್ರಮುಖ ಕಾರಣವೆಂಬುದಾಗಿ ಇಲಾಖೆಯ ಸಿಬಂದಿಯೇ ಹೇಳುತ್ತಿದ್ದಾರೆ.

ಅಂಕಿ-ಅಂಶ
ವಾಟರ್‌ ಅಥಾರಿಟಿ ಪ್ರತೀ ದಿನ ಉತ್ಪಾದಿಸುವ 3000 ದಶಲಕ್ಷ ಲೀಟರ್‌ ನೀರಿಗೆ ಪ್ರತಿ ದಿನ ಬಿಲ್‌ ದಾಖಲಾಗುವುದು 1300 ದಶಲಕ್ಷ ಲೀಟರ್‌ ಆಗಿದೆ ಎಂಬುದಾಗಿ ವಾಟರ್‌ ಅಥೋರಿಟಿ ಸಿಬಂದಿ ಹೇಳುತ್ತಿದ್ದಾರೆ. ಒಟ್ಟು ವರಮಾನ ರಹಿತ ನೀರಿನ 20-25 ಶೇಕಡಾ ಮಾತ್ರವೇ ನಳ್ಳಿ ಪೈಪ್‌ ಸೋರಿಕೆಯಿಂದ ನಷ್ಟವಾಗುತ್ತಿದೆ ಎಂಬುದಾಗಿ ಇಲಾಖೆಯ ಸ್ಪಷ್ಟೀಕರಣ. ಈ ರೀತಿಯಾಗಿ ನಷ್ಟವಾಗುವ ನೀರನ್ನು ಗ್ರಾಹಕರಿಗೆ ವಿತರಿಸುತ್ತಿದ್ದಲ್ಲಿ 1,000 ಲೀಟರ್‌ಗೆ ಸರಾಸರಿ 10 ರೂಪಾಯಿ ಲಭಿಸುವ ಸಾಧ್ಯತೆಯನ್ನು ಲೆಕ್ಕ ಹಾಕಿದ್ದಲ್ಲಿ ಪೈಪ್‌ ಸೋರಿಕೆಯಿಂದ ಮಾತ್ರವೇ ಅಥಾರಿಟಿಗೆ ಉಂಟಾಗುವ ನಷ್ಟ ಸುಮಾರು 109.5 ಕೋಟಿ ರೂ. ಆಗಿದೆ ಎಂದು ವಾಟರ್‌ ಅಥಾರಿಟಿಯ ಅಂಕಿ-ಅಂಶವಾಗಿದೆ.

ಟಾಪ್ ನ್ಯೂಸ್

Rapper Badshah: ಬಾಲಿವುಡ್‌ ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂಬ್‌ ಸ್ಪೋಟ

Rapper Badshah: ಬಾಲಿವುಡ್‌ ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂಬ್‌ ಸ್ಪೋಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Rapper Badshah: ಬಾಲಿವುಡ್‌ ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂಬ್‌ ಸ್ಪೋಟ

Rapper Badshah: ಬಾಲಿವುಡ್‌ ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂಬ್‌ ಸ್ಪೋಟ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.