ಸ್ವಚ್ಛ ಬಾಟಲಿ ಸಿಂಪಲ್ ಸೂತ್ರಗಳು…
Team Udayavani, Feb 26, 2020, 5:12 AM IST
ನೀರಿನ ಬಾಟಲಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ, ಅದರ ಸ್ವಚ್ಛತೆಯ ಕಡೆಗೆ ಗಮನ ಕೊಡುವವರು ಕಡಿಮೆ. ನೀರು ತುಂಬುವುದಲ್ಲವಾ, ತೊಳೆಯದಿದ್ದರೂ ಸರಿಯೇ ಎಂಬ ಅಭಿಪ್ರಾಯ ಅವರದ್ದು. ಹಾಗೇನಾದರೂ ನಿರ್ಲಕ್ಷಿಸಿಬಿಟ್ಟರೆ, ಬಾಟಲಿಯ ತಳದಲ್ಲಿ ಪಾಚಿ ಕಟ್ಟುವುದು ಖಚಿತ. ಬಾಟಲಿಯೊಳಗೆ ಕೈ ತೂರಿಸಲು ಆಗುವುದಿಲ್ಲ, ಒಳಗೆ ಕೊಳೆಯಾಗಿದ್ದು ಕಾಣಿಸುವುದೂ ಇಲ್ಲ ಅಂತ ತೊಳೆಯದೇ ಇರಬೇಡಿ. ಈ ಸಲಹೆಗಳನ್ನು ಪಾಲಿಸಿ.
-2-3 ದಿನಗಳಿಗೊಮ್ಮೆ ಬಾಟಲಿಗೆ ಬಿಸಿನೀರು ಹಾಕಿ, ಚೆನ್ನಾಗಿ ಅಲುಗಾಡಿಸಿದರೆ ಪಾಚಿ ಕಟ್ಟುವುದಿಲ್ಲ.
– ಬಾಟಲಿ ತೊಳೆಯಲೆಂದೇ ಇರುವ ಬ್ರಷ್‌ಗಳನ್ನು ಉಪಯೋಗಿಸಬಹುದು.
-ಬಾಟಲಿಯೊಳಗೆ ಸೋಪ್ ನೀರು ಹಾಕಿ, ಅಲುಗಾಡಿಸಿ ತೊಳೆದರೆ ಪಾಚಿ ನಿಲ್ಲುವುದಿಲ್ಲ.
– ರಸ ಹಿಂಡಿದ ಲಿಂಬೆ ಹೋಳನ್ನು ಬಾಟಲಿಯೊಳಗೆ ಹಾಕಿ ಅಥವಾ ಲಿಂಬೆ ರಸ ಹಾಕಿ, ಉಗುರು ಬೆಚ್ಚಗಿನ ನೀರು ಬೆರೆಸಿ ತೊಳೆಯಿರಿ.
– ಪಾತ್ರೆ ತೊಳೆಯುವ ಲಿಕ್ವಿಡ್ ಬಳಸಿದರೆ, ನೊರೆ ಹೋಗುವವರೆಗೂ ನೀರು ಹಾಕಿ ತೊಳೆಯಬೇಕು.
-ಕೆಲವೊಮ್ಮೆ ಸಾರು, ಮಜ್ಜಿಗೆಯನ್ನೂ ಬಾಟಲಿಗೆ ಹಾಕುವುದಿದೆ. ಆಗ, ಬೇಕಿಂಗ್ ಸೋಡಾದಿಂದ ಬಾಟಲಿಯನ್ನು ಸ್ವತ್ಛಗೊಳಿಸಬಹುದು.
-ತಾಮ್ರದ ಬಾಟಲಿ ಬಳಸುವವರು ಬೂದಿ, ಲಿಂಬೆರಸ, ಹುಣಸೆಹಣ್ಣಿನ ರಸ ಬಳಸಿ ತೊಳೆಯಿರಿ.
– ಗಾಜಿನ ಬಾಟಲಿಯಲ್ಲಿ ಆಹಾರ ಸಾಮಗ್ರಿಗಳನ್ನು ಹಾಕಿ ಇಡುವವರು, ಉಗುರು ಬೆಚ್ಚಗಿನ ನೀರಿನಲ್ಲಿ ಬಾಟಲಿಗಳನ್ನು ನೆನೆಸಿಟ್ಟು, ನಂತರ ಪಾತ್ರೆ ತೊಳೆಯುವ ಸೋಪು/ ಲಿಕ್ವಿಡ್ ಬಳಸಿ ತೊಳೆದರೆ ಗಾಜು ಹೊಳೆಯುತ್ತದೆ.
-ಹೀರಾ ರಮಾನಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.