ಭಾರತದ ಸೆಮಿಫೈನಲ್‌ ಸಾಧ್ಯತೆ ಉಜ್ವಲ

Team Udayavani, Feb 26, 2020, 6:55 AM IST

ujwala

ಮೆಲ್ಬರ್ನ್: ಐಸಿಸಿ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಇನ್ನೂ ಆರಂಭಿಕ ಹಂತದಲ್ಲೇ ಇದೆ. ಕೇವಲ 6 ಪಂದ್ಯಗಳಷ್ಟೇ ನಡೆದಿವೆ. “ಬಿ’ ಗುಂಪಿನಲ್ಲಿ ಪಾಕಿಸ್ಥಾನ ಇನ್ನೂ ಆಡಲಿಳಿದಿಲ್ಲ. ಆದರೆ ಹೆಚ್ಚು ಪೈಪೋಟಿಯನ್ನು ಹೊಂದಿರುವ “ಎ’ ವಿಭಾಗದಲ್ಲಿ ಭಾರತ ಆಗಲೇ ತನ್ನ ಸೆಮಿಫೈನಲ್‌ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿರುವುದು ಈ ಕೂಟದ ವಿಶೇಷ.
ಸೆಮಿ ಪ್ರವೇಶಕ್ಕೆ ನಾಲ್ಕರಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲುವುದು ಅಗತ್ಯ. ಹೀಗಾಗಿ ಭಾರತಕ್ಕೆ ಬಾಕಿ ಇರುವುದು ಇನ್ನೊಂದು ಮೆಟ್ಟಿಲು ಮಾತ್ರ.

ಆರಂಭದಲ್ಲೇ ಕಾಂಗರೂ ಬೇಟೆ
ಹರ್ಮನ್‌ಪ್ರೀತ್‌ ನೇತೃತ್ವದ ಭಾರತ ಈವರೆಗೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಏಕೈಕ ತಂಡ. ಇದಕ್ಕಿಂತ ಮಿಗಿಲಾಗಿ, ಹಾಲಿ ಚಾಂಪಿಯನ್‌ ಖ್ಯಾತಿಯ ಆತಿಥೇಯ ಆಸ್ಟ್ರೇಲಿಯ ವನ್ನು ಮೊದಲ ಪಂದ್ಯದಲ್ಲೇ ನೆಲಕ್ಕೆ ಕೆಡವಿದ್ದು ಭಾರತದ ಮಹಾನ್‌ ಸಾಧನೆಯಾಗಿ ದಾಖಲಾಗಿದೆ. ಇದು ಹೈ ವೋಲ್ಟೆàಜ್‌ ಪಂದ್ಯವಾದ್ದರಿಂದ, ಇಲ್ಲಿ ಗೆದ್ದವರಿಗೆ ಮುಂದಿನ ಹಾದಿ ಸುಗಮ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಇದರ ಲಾಭವೀಗ ಭಾರತಕ್ಕೆ ಲಭಿಸಿದೆ.

ಆರಂಭದಲ್ಲೇ ದೊಡ್ಡ ಬೇಟೆ ಯಾಡಿದ ಭಾರತ ತನ್ನ ಮೇಲಿನ ಒತ್ತಡವನ್ನೆಲ್ಲ ಒಮ್ಮೆಲೇ ಇಳಿಸಿಕೊಂಡಿತು. ಸೋಮವಾರ ಬಾಂಗ್ಲಾದೇಶವನ್ನೂ ಮಣಿಸಿತು. ಮುಂದೆ ನ್ಯೂಜಿಲ್ಯಾಂಡ್‌ ಎದುರಾಗಲಿದ್ದು, ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದರೆ ಭಾರತಕ್ಕೆ ಅದು ಜಾಕ್‌ಪಾಟ್‌ ಆಗಿ ಪರಿಣಮಿಸಲಿದೆ. ಕೊನೆಯಲ್ಲಿ ಉಳಿದಿರುವುದು ಶ್ರೀಲಂಕಾ ಸವಾಲು ಮಾತ್ರ. ಅದು ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ.

ಅಕಸ್ಮಾತ್‌ ಭಾರತ ಉಳಿದೆರಡೂ ಪಂದ್ಯಗಳನ್ನು ಸೋತರೆ “ಎ’ ವಿಭಾಗದ ಅಷ್ಟೂ ಲೆಕ್ಕಾಚಾರ ತಲೆಕೆಳಗಾಗಲಿದೆ!

ಸಮತೋಲಿತ ತಂಡ
ಭಾರತ‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಸಮತೂಕ ಹೊಂದಿರುವ ತಂಡ. ಶಫಾಲಿ, ಮಂಧನಾ, ಜೆಮಿಮಾ, ಕೌರ್‌, ದೀಪ್ತಿ, ವೇದಾ ಅವರೆಲ್ಲ ಈಗಾಗಲೇ ತಮ್ಮ ಬ್ಯಾಟಿಂಗ್‌ ಸಾಹಸ ಪ್ರದರ್ಶಿಸಿದ್ದಾರೆ. ಆದರೆ ಮೊದಲು ಬ್ಯಾಟಿಂಗ್‌ ಮಾಡುವ ಸಂದರ್ಭದಲ್ಲಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಇವರು ಯಶಸ್ವಿಯಾದರೆ ಬೌಲರ್‌ಗಳ ಕೆಲಸವನ್ನು ಹಗುರಗೊಳಿಸಬಹುದು.

ಸ್ಪಿನ್‌ ಬೌಲಿಂಗ್‌ ಭಾರತದ ಪ್ರಮುಖ ಅಸ್ತ್ರವಾಗಿದೆ. ಪೂನಂ, ರಾಜೇಶ್ವರಿ, ದೀಪ್ತಿ ಅವರ ತ್ರಿವಳಿ ಸ್ಪಿನ್‌ ದಾಳಿ ಎದುರಾಳಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಪ್ರಧಾನ ವೇಗಿ ಶಿಖಾ ಪಾಂಡೆ ಕೂಡ ಲಯದಲ್ಲಿದ್ದಾರೆ. ಕೀಪಿಂಗ್‌, ಫೀಲ್ಡಿಂಗ್‌ ಕೂಡ ಉತ್ತಮ ಮಟ್ಟದಲ್ಲಿದೆ. ಮುಂದಿನದ್ದೆಲ್ಲ ಅದೃಷ್ಟದ ಆಟ!

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತಕ್ಕೆ 13-0 ಗೋಲು ಜಯ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತಕ್ಕೆ 13-0 ಗೋಲು ಜಯ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.