ಬೆಂಗಳೂರು -ವಾಸ್ಕೋ ರೈಲಿನ ದಿನಾಂಕ ಇಂದು ನಿರ್ಧಾರ?

ಇಂದಿನಿಂದ ವೇಳಾಪಟ್ಟಿ ಸಮಿತಿ ಸಭೆ

Team Udayavani, Feb 26, 2020, 7:00 AM IST

vasco

ಕುಂದಾಪುರ: ಬೆಂಗಳೂರು- ವಾಸ್ಕೋ ರೈಲು ಸಂಚಾರ ಆರಂಭ ಯಾವತ್ತು ಎಂಬ ಪ್ರಶ್ನೆಗೆ ಬುಧವಾರ ಬಹುತೇಕ ಉತ್ತರ ಸಿಗುವ ಸಾಧ್ಯತೆ ಗಳಿವೆ.

ಭಾರತೀಯ ರೈಲ್ವೇಯ ವೇಳಾ ಪಟ್ಟಿ ಸಮಿತಿ (ಐಆರ್‌ಟಿಸಿ)ಯ ಸಭೆ ಫೆ. 26, 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಇಲ್ಲಿ ವಾಸ್ಕೋ ರೈಲು ಓಡಾಟ ಆರಂಭ ದಿನಾಂಕ ನಿರ್ಧಾರ ಆಗಲಿದೆ.

ರೈಲಿನ ಕೋಚ್‌ಗಳು ಬೆಂಗಳೂರಿಗೆ ಆಗಮಿಸಿದ್ದು, ವೇಳಾಪಟ್ಟಿ ಪ್ರಕಟವಾಗಿ 15 ದಿನಗಳಾಗಿದ್ದರೂ ರೈಲು ಓಡುತ್ತಿಲ್ಲ. ರೈಲ್ವೇ ಅಧಿಕಾರಿಗಳ ತೊಡರುಗಾಲೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಒತ್ತಡ ಹೇರಲಾಗುತ್ತಿದೆ.

ಏನಿದು ಸಭೆ?
ಎಲ್ಲ ರೈಲ್ವೇ ವಿಭಾಗ ಮುಖ್ಯಸ್ಥರು, ಪ್ರತಿನಿಧಿಗಳು ಸಭೆಗೆ ಆಗಮಿಸುತ್ತಾರೆ. ವಿವಿಧ ವಲಯಗಳ ಮಾರ್ಗಗಳಲ್ಲಿ ಹೊಸ ರೈಲುಗಳ ಕುರಿತು ಮಾಹಿತಿ ವಿನಿಮಯ ನಡೆಸಿ, ಹಾಲಿ ರೈಲು, ಗೂಡ್ಸ್‌ ರೈಲುಗಳ ಸಮಯ ಹೊಂದಾಣಿಕೆ ಮಾಡಿ, ಹಳಿ ಬಿಟ್ಟು ಕೊಡುವ ಬಗ್ಗೆ ಸಮಾಲೋಚನೆ ನಡೆಯುತ್ತದೆ. ಬೆಂಗಳೂರು – ವಾಸ್ಕೊ ರೈಲಿನ ಬಗೆಗೂ ಚರ್ಚೆ ನಡೆಯಲಿದೆ. ಇಲ್ಲಿ ಒಪ್ಪಿಗೆ ದೊರೆತರೆ ಸಮಸ್ಯೆ ಸುಲಭ ವಾಗಿ ಬಗೆಹರಿದಂತೆ. ಇಲ್ಲದಿದ್ದರೆ ಮಾ. 2ರಂದು ಸಚಿವರ ಉಪಸ್ಥಿತಿಯಲ್ಲಿ ದಿಲ್ಲಿಯಲ್ಲಿ ನಡೆಯುವ ಸಭೆಯಲ್ಲಿ ಹಗ್ಗಜಗ್ಗಾಟ ನಡೆಯುತ್ತದೆ. ಹೀಗಾಗಿ ಈ ದಿನ ಮಹತ್ವದ್ದಾಗಿದೆ.

ಸಮಯ ಕೋರಿಕೆ: ಕೇಂದ್ರ ಸಚಿವರಲ್ಲಿ ರೈಲಿಗೆ ಚಾಲನೆಗೆ ದಿನ ನಿಗದಿಗೆ ಕೇಳಿಕೊಳ್ಳಲಾಗಿದೆ, ಉಡುಪಿ ಅಥವಾ ಬೆಂಗಳೂರಿನಲ್ಲಾದರೂ ಆಗಬಹುದು. ಶೀಘ್ರ ಚಾಲನೆ ನೀಡಲು ವಿನಂತಿಸಿದ್ದೇನೆ ಎಂದು ಸಂಸದೆ ಶೋಭಾ ಹೇಳಿದ್ದಾರೆ.

ರೈಲ್ವೇ ಹಿರಿಯ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಸಚಿವ ಸುರೇಶ್‌ ಅಂಗಡಿಯವರೂ ಭರವಸೆ ನೀಡಿದ್ದಾರೆ. ಹೊಸ ರೈಲು ಮಂಜೂರಾತಿ ಸಂದರ್ಭದ ಸಭೆಗಳಲ್ಲಿ ನಾನು ಭಾಗವಹಿಸಿದ್ದೆ.
– ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಂಸದ

ವೇಳಾಪಟ್ಟಿ ನಿಗದಿಯಾದ ಕಾರಣ ಶೀಘ್ರ ಚಾಲನೆ ನೀಡಲಿ. ಎಲ್ಲರಿಗೂ ಪ್ರಯೋಜನ ದೊರೆಯಲಿ.
– ಗಣೇಶ್‌ ಪುತ್ರನ್‌, ಅಧ್ಯಕ್ಷರು, ರೈಲು ಪ್ರ. ಹಿತರಕ್ಷಣ ಸಮಿತಿ, ಕುಂದಾಪುರ

ಆರಂಭಕ್ಕೆ ಇರುವ ಅಡ್ಡಿ
ಬೆಂಗಳೂರಿನಿಂದ ವಾಸ್ಕೋಗೆ ಚಲಿಸುವ ರೈಲು ದಕ್ಷಿಣ, ನೈಋತ್ಯ ಮತ್ತು ಕೊಂಕಣ ರೈಲು ಮಾರ್ಗಗಳನ್ನು ಬಳಸಬೇಕು. ಕೊಂಕಣ ರೈಲಿನ ಮಾರ್ಗದಲ್ಲಿ ಹೆಚ್ಚಾಗಿ ಗೂಡ್ಸ್‌ ರೈಲುಗಳು ಚಲಿಸುವುದರಿಂದ ಹಸಿರು ನಿಶಾನೆ ತೋರಿ ಸಿಲ್ಲ.

ಕೊಂಕಣ ಮಾರ್ಗದ ಮೂಲಕ 40ರಷ್ಟು ರೈಲುಗಳಲ್ಲಿ ಸುಮಾರು 33 ಕೇರಳ, ಉತ್ತರ ಭಾರತಕ್ಕೆ ತೆರಳುತ್ತವೆ. ಜನರ, ಸಂಘಟನೆಗಳ, ಜನಪ್ರತಿನಿಧಿಗಳ ಆಸಕ್ತಿಯಿಂದ ಪ್ರಯಾಣಿಕ ರೈಲು ದೊರೆ ತಿದೆಯೇ ವಿನಾ ನಿಗಮವು ಸ್ವ ಹಿತಾಸಕ್ತಿ ಯಿಂದ ಒಂದು ಪ್ರಯಾಣಿಕರ ರೈಲನ್ನೂ ಆರಂಭಿಸಿಲ್ಲ ಎಂಬ ಆರೋಪವಿದೆ.

ಟಾಪ್ ನ್ಯೂಸ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.