ಕಾಂಗ್ರೆಸ್ ನಿಂದ ದೇಶ ಒಡೆಯುವ ಕೆಲಸವಾಗುತ್ತಿದೆ, ಸಿದ್ದರಾಮಯ್ಯ ಅಮಾಯಕರಲ್ಲ: ಸಿ.ಟಿ ರವಿ
Team Udayavani, Feb 26, 2020, 3:03 PM IST
ಬೆಂಗಳೂರು: ಪೌರತ್ವ ವಿರೋಧಿ ಕಾಯ್ದೆ ಹಿಂಸಾರೂಪ ತಾಳಿರುವುದು ದುರದೃಷ್ಟಕರ. ಸಾವು ಯಾರದೇ ಆದರೂ ಅದು ನೋವಿನ ಸಂಗತಿ ಇದರ ಹಿನ್ನೆಲೆಯ ಬಗ್ಗೆ ಸತ್ಯಾಸತ್ಯತೆ ತಿಳಿಯುವ ಬಗ್ಗೆ ಅಗತ್ಯ ತನಿಖೆ ಆಗಬೇಕು ಎಂದು ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಎ ಎಂಬುದು ಪೌರತ್ವವನ್ನು ಕಿತ್ತುಕೊಳ್ಳುವ ಕಾಯ್ದೆಯಲ್ಲ. ಅದು ಪೌರತ್ವ ನೀಡುವ ಕಾಯ್ದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಈ ಹಿಂದೆ ಪಟೇಲರು, ಜಾಟರನ್ನು, ದಲಿತರನ್ನು ಎತ್ತಿಕಟ್ಟುವ ಕೆಲಸವಾಯಿತು. ಪ್ರಶಸ್ತಿ ವಾಪಸಾತಿ ನಾಟಕ ನಡೆಯಿತು. ಸಿಎಎ ಬಗ್ಗೆ ವಿರೋಧ ಮಾಡುವವರು ಇದು ಧರ್ಮಾಧಾರಿತ ಎಂದು ಆರೊಪ ಮಾಡುತ್ತಿದ್ದಾರೆ. ಇದು ದೇಶದ ಒಳಗಿನ ನಾಗರಿಕರನ್ನು ಗುರಿಯಾಗಿಸಿ ಮಾಡಿದ ಕಾನೂನಲ್ಲ. ದೇಶದ ಹೊರಗಿನಿಂದ ನಿರಾಶ್ರಿತರಾಗಿ ಬಂದವರಿಗೆ ಮಾತ್ರ ನೀಡಲು ಅವಕಾಶ ಕೊಡಲಾಗುತ್ತದೆ. ಒಳಗಿನ ನಾಗರಿಕರಲ್ಲಿ ಬೇಧ ಭಾವ ಮಾಡಲಾಗಿದ್ದರೆ ಅದು ಅಪವಾದ ಆಗುತ್ತಿತ್ತು ಎಂದರು.
ಹಿಂದೆ ಇರಾನಿನಿಂದ ಅಮೆರಿಕಾಕ್ಕೆ ಬಂದ ಕ್ರಿಶ್ಚಿಯನ್ನರಿಗೆ ಮಾತ್ರ ಪೌರತ್ವ ನೀಡಲಾಯಿತು. ಅಪಘಾನಿಸ್ತಾನದಲ್ಲಿ ಮುಸ್ಲೀಮೇತರರನ್ನು ಶೋಷಣೆ.ಮಾಡಲಾಯಿತು. ಭಾರತದಿಂದ ಇದುವರೆಗೂ ಯಾವ ಧರ್ಮದವರೂ ದೌರ್ಜನ್ಯದಿಂದ ಹೊರ ಹೋಗಿಲ್ಲ. ಪಾಕಿಸ್ತಾನವು ನೆಹರೂ ಮತ್ತು ಲಿಯಾಖಾತ್ ಖಾನ್ ನಡುವೆ ನಡೆದ ಒಪ್ಪಂದಕ್ಕೆ ಗೌರವ ಕೊಡಲಿಲ್ಲ. 1956ರಲ್ಲಿ ಪಾಕಿಸ್ತಾನ ಇಸ್ಲಾಮ್ ರಾಷ್ಟ್ರ ಎಂದು ಘೋಷಿಸಿಕೊಂಡಿತು. ಆಗ ಇಸ್ಲಾಮೇತರರು ನಿರಾಶ್ರಿತರಾದರು. ಬಾಂಗ್ಲಾ ವಿಭಜನೆ ನಂತರ ಅಲ್ಲಿನ ಹಿಂದುಗಳು ನಿರಾಶ್ರಿತರಾಗಿ ಭಾರತಕ್ಕೆ ಬಂದಿದ್ದರು. ಅವರಿಗೆ ಇಲ್ಲಿರಲು ಅವಕಾಶಕಲ್ಪಿಸಲಾಗಿತ್ತು. ಆದರೆ ಪೌರತ್ವ ನೀಡಿರಲಿಲ್ಲ ಎಂದು ಹೇಳಿದರು.
ಪೌರತ್ವ ಕಾಯ್ದೆ ನೀಡುವ ವಿಚಾರವನ್ನು ನೆಹರೂ ಕೂಡ ಪ್ರಸ್ತಾಪಿಸಿದ್ದರು. ಮನಮೋಹನ್ ಸಿಂಗ್ ಕೂಡ ಧಾರ್ಮಿಕ ಅಲ್ಪ ಸಂಖ್ಯಾತರೆಂದು ಪರಿಗಣಿಸಿ ಅವರಿಗೆ ಪೌರತ್ವ ನೀಡುವಂತೆ ಹೇಳಿದ್ದರು. ಸಂವಿಧಾನ ಬದ್ದವಾಗಿಯೇ ಹಿಂದುಳಿದವರು ಹಾಗೂ ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡಲಾಗಿದೆ. ಧರ್ಮದ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳಿಗೆ ಮೀಸಲಾತಿ ಕೊಡಲಾಗಿದೆ. ಕೆಲವು ಜಾತಿಗಳಿಗೆ ಭಾಷಾ ಅಲ್ಪ ಸಂಖ್ಯಾತರೆಂದು ಮೀಸಲಾತಿ ನೀಡಲಾಗುತ್ತಿದೆ.
ಇಂದು ಸಮಾನತೆ ತತ್ವದ ವಿರುದ್ಧ ಕಾಂಗ್ರೆಸ್ ವಾಸ್ತವವನ್ನು ಮರೆಮಾಚುವ ಕೆಲಸ ಮಾಡುತ್ತಿದೆ. ಕಾಶ್ಮೀರದಲ್ಲಿ ಅಲ್ಲಿನ ಪಂಡಿತರೇ ನಿರಾಶ್ರಿತರಾಗಿದ್ದಾರೆ. ಅಲ್ಲಿನ ಪಂಡಿತರು ನಿರಾಶ್ರಿತರಾಗಲು ಅಲ್ಲಿನ ಮೂಲಭೂತವಾದವೇ ಕಾರಣವಾಗಿದೆ. ನಿರಾಶ್ರಿತರು ಹಾಗೂ ನುಸುಳುಕೊರರ ನಡುವೆ ವ್ಯತ್ಯಾಸ ಇದೆ. ನುಸುಳುಕೋರರು ಈ ದೇಶದಲ್ಲಿ ತಮ್ಮ ಅಜೆಂಡಾ.ಜಾರಿಗೆ ತರಲು ಯತ್ನ ನಡೆಸುತ್ತಿದ್ದಾರೆ. ಇದರ ವ್ಯತ್ಯಾಸ ತಿಳಿಯಬೇಕು. ಈ ಬೆಳವಣಿಗೆ ದೇಶದಲ್ಲಿಯೇ ಆಂತರ್ ಯುದ್ದಕ್ಕೆ ಕಾರಣವಾಗುತ್ತದೆ. ಇದರಲ್ಲಿ ಕೆಲವರು ಗೊತ್ತಿಲ್ಲದೇ ಪಾಲ್ಗೊಳ್ಳುತ್ತಿದ್ದಾರೆ. ಕೆಲವರು ಗೊತ್ತಿದ್ದು ಈ ರೀತಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದು ಕೇವಲ ಕಾಂಗ್ರೆಸ್ ನಿಂದ ದೇಶ ಒಡೆಯುವ ಕೆಲಸವಾಗಿದೆ. ಸಿದ್ದರಾಮಯ್ಯ ಅಮಾಯಕರಲ್ಲ ರಮೇಶ್ ಕುಮಾರ್ ಏನೂ ಗೊತ್ತಿಲ್ಲದವರಲ್ಲ. ಇವರು ತಾತ್ಕಾಲಿಕ ಲಾಭಕ್ಕಾಗಿ ಈ ದೇಶ ಒಡೆಯುವ ಷಡ್ಯಂತ್ರ ನಡೆಸಿದ್ದಾರೆ. ಇದು ಕೇವಲ ಹೋರಾಟವಲ್ಲ ಷಡ್ಯಂತ್ರ ನಡೆದಿದೆ.
ಅಮೇರಿಕಾ ಅಧ್ಯಕ್ಷರು ಭೇಟಿ ನೀಡುವಸಂದರ್ಭದಲ್ಲಿ ಈ ರೀತಿಯ ಷಡ್ಯಂತ್ರ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹಾಳು.ಮಾಡಲು ಪ್ರಯತ್ನ ನಡೆಸಿದ್ದಾರೆ. ಅಲ್ಲಿನ ದೌರ್ಜನ್ಯವನ್ನು ಮರೆ ಮಾಚುತ್ತಿದ್ದಾರೆ. 23% ರಷ್ಟಿದ್ದ ಹಿಂದುಗಳು 9% ಕ್ಕೆ ಹೇಗೆ ಇಳಿದಿದೆ. ಭಾರತದಲ್ಲಿ 8% ರಷ್ಟಿದ್ದ ಮುಸ್ಲಿಮರು 17% ರಷ್ಟಾಗಿದ್ದು ಹೇಗೆ ? ದೌರ್ಜನ್ಯಕ್ಕೊಳಗಾದವರ ಪರ ಯಾಕಿಲ್ಲ ನಿಮ್ಮ ಕಣ್ಣೀರು ? ಎಂದು ಪ್ರಶ್ನಿಸಿದರು.
ಸಮಾನ ನಾಗರಿಕರ ಸಂಹಿತೆ ಪಕ್ಷದ ಉದಯವಾದಾಗಿನಿಂದಲು ಹೇಳುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಕೂಡ ಈ ಅಂಶ ಇದೆ. ಅವರು ಸಮಾನತೆ ಬಯಸಿದ್ದಾರೆ, ನಾವೂ ಸಮಾನತೆ ಪರವಾಗಿದ್ದೇವೆ. ಹೀಗಾಗಿ ಸಮಾನ ನಾಗರಿಕತೆ ಜಾರಿಗೆ ಬರಲಿ. ದೇಶದ ಆರ್ಥಿಕ ಪರಿಸ್ಥಿತಿ ವಿಶ್ವದ 5ನೇ ಶಕ್ತಿಯಾಗಿದೆ.
ನೋಟು ಅಪನಗದೀಕರಣದ ನಂತರ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದಿದ್ದರು. ಮೊದಲು 80% ಬ್ಲಾಕ್. 20%. ವೈಟ್ ಅಂತಿದ್ರು ಈಗ ಎಲ್ಲವೂ ಉಲ್ಟಾ ಆಗಿದೆ. ಮನಮೋಹನ್ ಸಿಂಗ್ ಈಗಲಾದರೂ ಮಾತನಾಡಿದ್ದಾರೆ ಅನ್ನುವುದೇ ಸಂತೋಷ. ಅಂದೇ ಮಾತನಾಡಿದ್ರೆ ಇಷ್ಟೊಂದು ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದರು.
ಕ್ಯಾಸಿನೋ ಜಾರಿಯಿಲ್ಲ: ನಮ್ಮ ಸರ್ಕಾರದಲ್ಲಿ ಕ್ಯಾಸಿನೋ ಮಾಡುವ ಪ್ರಸ್ತಾಪವೇ ಇಲ್ಲ. ಅದನ್ನು ಜಾರಿಗೆ ತರುವ ಪ್ರಶ್ನೆಯು ಇಲ್ಲ. ನಾವು ಎಫ್ ಕೆಸಿಸಿಐ ಕಾರ್ಯಕ್ರಮದಲ್ಲಿ. ವಿಲೇಜ್ ಟೂರಿಸಂ, ಮಾನ್ಸೂನ್. ಟೂರಿಸಂ ಬಗ್ಗೆ ಮಾತನಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಅದನ್ನು ತರಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಪಕ್ಷದ ಒಳಗೆ.ಕ್ಯಾಸಿನೊ ಚರ್ಚೆಗೆ ಬಂದಿಲ್ಲ. ನಮ್ಮ. ಸರ್ಕಾರ ಕ್ಯಾಶಿನೋ.ಜಾರಿಗೆ ತರುವುದಿಲ್ಲ ಎಂಧು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.