ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದೆ ಸಮ್ಮೇಳನ !
ರಾಜ್ಯ ಮಟ್ಟದ ಪರಿಸರ ಸಮ್ಮೇಳನಕ್ಕೆ ದಿನಗಣನೆ
Team Udayavani, Feb 27, 2020, 4:01 AM IST
ಮಹಾನಗರ: ಪರಿಸರಾಸಕ್ತರು ಸೇರಿಕೊಂಡು ಆಯೋಜಿಸುತ್ತಿರುವ ರಾಜ್ಯ ಮಟ್ಟದ ಪರಿಸರ ಸಮ್ಮೇಳನಕ್ಕೆ ದಿನಗಣನೆ ಆರಂಭಗೊಂಡಿದೆ. ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ವತಿಯಿಂದ ಮಾ. 1ರಂದು ನಗರದ ತಣ್ಣೀರುಬಾವಿ ಟ್ರೀ ಪಾರ್ಕ್‌ನಲ್ಲಿ ನಡೆಯಲಿರುವ ಎರಡನೇ ವರ್ಷದ ರಾಜ್ಯ ಮಟ್ಟದ ಪರಿಸರ ಸಮ್ಮೇಳನವು ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ.
ಪರಿಸರ ಸಮ್ಮೇಳನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ “ಪರಿಸರ ರಥ’ ಸುತ್ತಾಟ ಈಗಾಗಲೇ ಆರಂಭಗೊಂಡಿದೆ. ಪ್ರಮುಖವಾಗಿ ಉಭಯ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಈ ರಥ ತೆರಳಲಿದ್ದು, ಸಂಯೋಜಕರು ಅಲ್ಲಿನ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಕರೆಯೋಲೆ ನೀಡಲಾಗುತ್ತಿದೆ. ಈ ಮುಖೇನ ಪರಿಸರ ಸಮ್ಮೇಳನಕ್ಕೆ ವಿದ್ಯಾರ್ಥಿಗಳನ್ನೂ ಕಳುಹಿಸುವಂತೆ ಶಾಲಾ-ಕಾಲೇಜು ಮುಖ್ಯಸ್ಥರಲ್ಲಿ ಮನವಿ ಮಾಡಲಾಗುತ್ತಿದೆ. ಪಜೀರು ಬಳಿಯ ಗೋವನಿತಾಶ್ರಯ ಟ್ರಸ್ಟ್‌ನಿಂದ ಮಲೆನಾಡ ಗಿಡ್ಡ ಗೋ ತಳಿ ಪ್ರದರ್ಶನ ಇರಲಿದೆ. ಅದೇ ರೀತಿ ರೈತರು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ಹಂಪಲು ಪ್ರದರ್ಶನ-ಮಾರಾಟ, ಕಸಿ ಕಟ್ಟಿದ ಹಣ್ಣಿನ ಗಿಡಗಳ ಮಾರಾಟ ಕೂಡ ಪರಿಸರಾಸಕ್ತರನ್ನು ಸೆಳೆಯಲಿದೆ. ಕರಾವಳಿ ಚಿತ್ರಕಲಾ ಚಾವಡಿ, ಸ್ವರೂಪ ಅಧ್ಯಯನ ಕೇಂದ್ರ, ಮಂಗಳೂರಿಯನ್ಸ್ ಅರ್ಬನ್ ಸ್ಕೆಚ್ಚರ್ ಕಲಾವಿದರು ಪರಿಸರ ಬಗೆಗಿನ ಸಂದೇಶ ಸಾರುವ ಚಿತ್ರಗಳನ್ನು ಸ್ಥಳದಲ್ಲಿಯೇ ರಚಿಸಲಿದ್ದಾರೆ.
ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷ ಪ್ರದರ್ಶನ ಕೂಡ ಇರಲಿದೆ. ಪರಿಸರ ಸಮ್ಮೇಳನ ನಡೆಯುವ ಜಾಗದಲ್ಲಿ “ಟೀಂ ಮಂಗಳೂರು’ ಗಾಳಿಪಟ ತಂಡದಿಂದ ಗಾಳಿಪಟ ಉತ್ಸವ ನಡೆಯಲಿದೆ.
ಸಾಧಕರಿಗೆ ಪ್ರಶಸ್ತಿ
ಸಮ್ಮೇಳನಕ್ಕೆ ತಗಲುವ ಖರ್ಚನ್ನು ಪರಿಸರಾಸಕ್ತರೇ ಹೊಂದಿಸುತ್ತಿದ್ದಾರೆ. ಕೆಲವು ಮಂದಿ ಹಸುರು ಹೊರೆಕಾಣಿಕೆಯ ಮುಖೇನ ಅಕ್ಕಿ, ದವಸ-ಧಾನ್ಯಗಳನ್ನು ನೀಡುತ್ತಿದ್ದಾರೆ. ಸಮ್ಮೇಳನದ ನ್ಯಾಯಪಥದಲ್ಲಿ ಡಾ| ರವೀಂದ್ರನಾಥ್ ಶಾನುಭೋಗ್ ಭಾಗವಹಿಸಲಿದ್ದಾರೆ. ಪದ್ಮಶ್ರೀ ಸುಕ್ರಿಬೊಮ್ಮ ಗೌಡ, ಪಾಡªನ ಹಾಡುಗಾರರಾದ ಕುತ್ತಾರು ತಿಮ್ಮಕ್ಕ ಅವರಿಗೆ “ಜನಪದ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ. ಸಿದ್ಧಿ ಜನಾಂಗದ ಡಿಯಾಗೋ ಬಸ್ಕಾ ವ್ ಸಿದ್ಧಿ, ಪದ್ಮಶ್ರೀ ಪುರಸ್ಕೃತ ತುಳಸೀ ಗೌಡ ಅವರಿಗೆ “ವನರತ್ನ ಪ್ರಶಸಿ’¤ ನೀಡಲಾಗುತ್ತಿದೆ. ಚೇತನ್ ಕೊಪ್ಪ ನಿದೇರ್ಶನದ “ಕಾಡೇ ಕೂಗು’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಸಮುದ್ರ ದೇವರಿಗೆ ಪ್ರಾರ್ಥನೆ
ಪರಿಸರ ಸಮ್ಮೇಳನದ ಸಮಾರೋಪದ ಬದಲಾಗಿ ಸಂಜೆ 5 ಗಂಟೆಗೆ ಸಮುದ್ರ ದೇವರಿಗೆ ದೂರುಕೊಡುವ ನಿಟ್ಟಿನಲ್ಲಿ ಸಮುದ್ರ ಪ್ರಾರ್ಥನೆ ನಡೆಯಲಿದೆ. ಪರಿಸರ ಸಮ್ಮೇಳನದಲ್ಲಿ ಅಧ್ಯಕ್ಷರೇ ಇಲ್ಲದ ಕಾರಣ, ಸಮಾರೋಪ ಕೂಡ ಇರುವುದಿಲ್ಲ. ಕಾಡು, ಕಡಲುಗಳ್ಳರಿಂದ ರಕ್ಷಿಸು ಎಂದು ಸಮುದ್ರ ದೇವರಿಗೆ ಮೊರೆಯಿಡುವುದು ಇದರ ವಿಶೇಷ.
ತಾರ್ಲೆ ನೃತ್ಯದ ಮುಖೇನ ಉದ್ಘಾಟನೆ
ಪರಿಸರ ಸಮ್ಮೇಳನದ ಉದ್ಘಾಟನೆಯು ವಿಶಿಷ್ಟ ರೀತಿಯಲ್ಲಿ ನಡೆಯಲಿದೆ. ಟ್ರೀ ಪಾರ್ಕ್‌ನಲ್ಲಿ ನೆರೆದವರೆಲ್ಲರೂ ಬೆಳಗ್ಗೆ 9.45ಕ್ಕೆ ಜಾನಪದ ಸಾಧಕಿ, ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಅವರ ಜತೆ ಹಾಲಕ್ಕಿ ಜನಾಂಗದ “ತಾರ್ಲೆ’ ನೃತ್ಯಕ್ಕೆ ಹೆಜ್ಜೆ ಹಾಕಲಿದ್ದಾರೆ. ಈ ಮುಖೇನ ಕಾರ್ಯಕ್ರಮ ಉದ್ಘಾಟನೆಗೊಳ್ಳುತ್ತದೆ.
ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ
ಬೀದಿ ಹೋರಾಟಕ್ಕಿಂತ ಕಾನೂನು ಹೋರಾಟದಲ್ಲಿ ಪರಿಹಾರ ಸಿಗಬೇಕು ಎನ್ನುವುದು ಈ ಸಮ್ಮೇಳನದ ಒಂದು ಪ್ರಮುಖ ವಿಷಯ. ಪರಿಸರಕ್ಕೆ ಪೆಟ್ಟು ಬೀಳುವಂತಹ ರಾಜ್ಯ, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಸಮ್ಮೇಳನದಲ್ಲಿ ನಡೆದ ಚರ್ಚೆ, ನಿರ್ಧಾರಗಳನ್ನು ಮುಂದಿನ ದಿನಗಳಲ್ಲಿ ಫಾಲೋಅಪ್ ಮಾಡಲಾಗುವುದು.
– ದಿನೇಶ್ ಹೊಳ್ಳ, , ಪರಿಸರವಾದಿ
ತಯಾರಿ ನಡೆಯುತ್ತಿದೆ
ರಾಜ್ಯ ಮಟ್ಟದ ಪರಿಸರ ಸಮ್ಮೇಳನಕ್ಕೆ ಈಗಾಗಲೇ ತಯಾರಿಗಳು ನಡೆಯುತ್ತಿವೆ. ರಾಜ್ಯದ ಎಲ್ಲ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ಠಾಣೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸಹಿತ ಅಧಿಕಾರಿಗಳಿಗೆಂದು ಸುಮಾರು 1,500 ಆಮಂತ್ರಣ ಪತ್ರಿಕೆ ಕಳುಹಿಸಲಾಗಿದೆ.
– ಶಶಿಧರ ಶೆಟ್ಟಿ,ಎನ್‌ಇಸಿಎಫ್ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.