ಬೈಕ್ ಸವಾರಿಯಲ್ಲೇ 3 ದೇಶ ಸುತ್ತಿದ ಸಲೀಂ
ಸಾಂಸ್ಕೃತಿಕ ವಿಭಿನ್ನತೆ ತಿಳಿಯುವ ಉದ್ದೇಶ
Team Udayavani, Feb 28, 2020, 5:18 AM IST
ಮಹಾನಗರ: ವಿವಿಧ ದೇಶಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವಿಭಿನ್ನತೆಯನ್ನು ತಿಳಿಯುವ ಉದ್ದೇಶದಿಂದ ಮಂಗಳೂರಿನ ಹವ್ಯಾಸಿ ಬೈಕ್ ರೈಡರ್ ಓರ್ವ ಮೂರು ದೇಶಗಳನ್ನು ಬೈಕ್ ರೈಡಿಂಗ್ ಮುಖೇನ ಸುತ್ತಿ ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರು ಬುಲ್ಸ್ ಕ್ಲಬ್ನ ಸದಸ್ಯ, ಉಳ್ಳಾದ ಮುಹಮ್ಮದ್ ಸಲೀಂ ಅವರು 39 ದಿನಗಳ ಕಾಲ ಭಾರತ, ನೇಪಾಲ, ಭೂತಾನ್ ದೇಶಗಳಿಗೆ ಒಟ್ಟು 12,635 ಕಿ.ಮೀ. ಸುತ್ತುವ ಮುಖೇನ ಸಾಧನೆ ಮಾಡಿದ್ದಾರೆ. ದೂರದ ಕುವೈತ್ನಲ್ಲಿ ಕೆಲಸದಲ್ಲಿರುವ ಮುಹಮ್ಮದ್ ಸಲೀಂ ಆವರು ಬೈಕ್ ರೈಡಿಂಗ್ಗೆಂದೇ 2 ತಿಂಗಳ ರಜೆಯಲ್ಲಿ ಭಾರತಕ್ಕೆ ಆಗಮಿಸಿದ್ದರು. ಇದೀಗ ಪ್ರಯಾಣ ಪೂರ್ಣಗೊಳಿಸಿ ಕುವೈತ್ಗೆ ತೆರಳಲಿದ್ದಾರೆ.
2020ರ ಜನವರಿ 8ರಂದು ನಗರದ ಕದ್ರಿ ಪಾರ್ಕ್ ಬಳಿಯಿಂದ ಬೈಕ್ ಯಾತ್ರೆ ಆರಂಭಿಸಿದ ಸಲೀಂ ಅವರು ಚಳ್ಳಕೆರೆ, ಹೈದರಾಬಾದ್, ನಾಗಪುರ, ಶಿನೇರಿ, ವಾರಣಾಸಿ ತಲುಪಿದರು. ಬಳಿಕ ಅಲ್ಲಿಂದ ಸನೋಲಿ ಮುಖೇನ ನೇಪಾಲ ಪ್ರವೇಶಿಸಿ, ಅಲ್ಲಿ ಚಿತ್ವನ್ ಕಾಡಿನಲ್ಲಿ ಸುತ್ತಾಡಿದರು. ಅಲ್ಲಿಂದ ಕಾಠ್ಮಂಡು, ಪೊಖಾರಾ, ಜೋಮ್ಸಮ್ಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಪೊಖಾರ, ಪಾಮೆ ಸರೋವರ, ಚಂದ್ರಪುರ ನಗರ, ಸಿಲಿಗುರಿ, ಡಾರ್ಜ್ ಲಿಂಗ್, ಸಿಕ್ಕಿಂ, ಗ್ಯಾಂಗಕ್ ತಲುಪಿದರು. ಅಲ್ಲಿಂದ ಬೈಕ್ನ ಅನುಮತಿಯೊಂದಿಗೆ ಲಾಚುಂಗ್ಗೆ ಭೇಟಿ ನೀಡಿ, ಕಟಾವೊ, ಡಾರ್ಜ್ಲಿಂಗ್, ಲಾಚುಂಗ್ಗೆ ಪ್ರಯಾಣ ಬೆಳೆಸಿದರು. ಬಳಿಕ ಫೆಬ್ರವರಿ 15ರಂದು ಪುನಃ ಮಂಗಳೂರು ತಲುಪಿದರು.
1 ಲಕ್ಷ ರೂ. ಖರ್ಚು
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಮುಖೇನ ಪ್ರತೀ ದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ ಸುಮಾರು 6 ಗಂಟೆಯವರೆಗೆ ಪ್ರಯಾಣಿಸುತ್ತಿದ್ದ ಸಲೀಂ ಅವರಿಗೆ 39 ದಿನಗಳ ಪ್ರವಾಸಕ್ಕೆ ಸುಮಾರು 1 ಲಕ್ಷ ರೂ. ಖರ್ಚು ತಗಲಿದೆಯಂತೆ. ಮುಂದಿನ ದಿನಗಳಲ್ಲಿ ಮಲೇಷಿಯಾ ಸಹಿತ 8 ರಾಷ್ಟ್ರಗಳ ಪ್ರವಾಸ ಕೈಗೊಳ್ಳುವ ಗುರಿ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.