ಎಸೆಸೆಲ್ಸಿ : ಆಂತರಿಕ ಅಂಕ ಅಪ್‌ಲೋಡ್‌ಗೆ ಸೂಚನೆ
Team Udayavani, Feb 27, 2020, 7:00 AM IST
ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶೇ.75ರಷ್ಟು ಹಾಜರಾತಿ ಹೊಂದಿರುವ ಎಸೆಸೆಲ್ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಅಪ್‌ಲೋಡ್ ಮಾಡುವಂತೆ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಿರ್ದೇಶನ ನೀಡಿದೆ.
ಎಲ್ಲ ಶಾಲೆಗಳ ಮುಖ್ಯಸ್ಥರು http://www.kseeb.kar.nic.in ವೆಬ್‌ಸೈಟ್‌ನಲ್ಲಿ ಲಾಗ್‌ಇನ್ ಆಗಿ ಲಭ್ಯ ತಂತ್ರಾಂಶವನ್ನು ಬಳಸಿ ಮಾ.6ರೊಳಗೆ ಆಯಾ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸಬೇಕು ಎಂದು ಸೂಚಿಸಲಾಗಿದೆ.
ಲಾಗಿನ್ ಆದ ಕೂಡಲೇ ಇಂಟರ್‌ನಲ್ ಮಾರ್ಕ್ಸ್ ಎಂಟ್ರಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅನಂತರ ವಿದ್ಯಾರ್ಥಿಯ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಶೇ.75ರಷ್ಟು ಹಾಜರಾತಿ ಹೊಂದಿರುವ ಬಗ್ಗೆ “ಎಸ್’ ಅಥವಾ “ನೋ’ ಎಂದು ನಮೂದಿಸಿ ವ್ಯೂ ಬಟನ್ ಕ್ಲಿಕ್ ಮಾಡಬೇಕು.
ಆಗ ವಿದ್ಯಾರ್ಥಿಗಳ ಪೂರ್ಣ ಮಾಹಿತಿ ಬರುತ್ತದೆ. ವಿದ್ಯಾರ್ಥಿಯ ವಿವರವನ್ನು ಖಚಿತಪಡಿಸಿಕೊಂಡು ಆಂತರಿಕ ಅಂಕ ಅಪ್‌ಲೋಡ್ ಮಾಡಬೇಕು. ಶೇ.75ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಯ ಆಂತರಿಕ ಅಂಕ ನೋಂದಣಿಗೆ ಅವಕಾಶ ಇಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಪ್ರತಿ ವಿದ್ಯಾರ್ಥಿಯ ಆಂತರಿಕ ಅಂಕಗಳನ್ನು ನಮೂದಿಸಿ, ಅಂತಿಮಗೊಳಿಸುವ ಮೊದಲು ವಿದ್ಯಾರ್ಥಿಯ ಹೆತ್ತವರಿಗೆ ಮಾಹಿತಿ ನೀಡಿ, ಸಹಿ ಪಡೆಯ ಬೇಕು ಎಂದು ಮಂಡಳಿ ಸೂಚಿಸಿದೆ.
ಮೇ 18: ದ್ವಿತೀಯ ಪಿಯು ಆರಂಭ
ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಮಾ.27ರಂದು ಪ್ರಕಟಿಸಿ, 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ತರಗತಿಗಳನ್ನು ಮೇ 18ಕ್ಕೆ ಆರಂಭಿಸಲು ಎಲ್ಲ ಪಿಯು ಕಾಲೇಜುಗಳ ಆಡಳಿತ ಮಂಡಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶ ನೀಡಿದೆ.
ಈ ಶೈಕ್ಷಣಿಕ ವರ್ಷದ ಕೊನೆಯ ಕಾರ್ಯನಿರ್ವಹಣೆಯ ದಿನವೂ ಮಾ.27. ಮಾ.28ರಿಂದ ಮೇ 17ರ ವರೆಗೆ ಬೇಸಗೆ ರಜೆ ಇರಲಿದೆ. ಮೇ 18ರಿಂದ 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸಲು ಸೂಚಿಸಲಾಗಿದೆ.
ಮೇ 18ರಂದು ದ್ವಿತೀಯ ಪಿಯುಸಿ ತರಗತಿ ಆರಂಭಿಸಬೇಕು. ಎಸೆಸೆಲ್ಸಿ ಫಲಿತಾಂಶ ಅಷ್ಟರೊಳಗೆ ಪ್ರಕಟವಾಗಿದ್ದರೆ ಪ್ರವೇಶ ಪ್ರಕ್ರಿಯೆ ಆರಂಭಿಸಬಹುದು ಎಂದು ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.