ಆಟೋ ಚಾಲಕನ ಕತ್ತು ಕುಯ್ದು ಕೊಲೆ
Team Udayavani, Feb 27, 2020, 3:06 AM IST
ವಿನೋದ್ ಅಲಿಯಾಸ್ ಗುಂಡ
ಬೆಂಗಳೂರು: ನಗರದ ಎರಡು ಪ್ರತ್ಯೇಕ ಭಾಗಗಳಲ್ಲಿ ಬುಧವಾರ ಇಬ್ಬರ ಕೊಲೆ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿದ್ದ ದುಷ್ಕರ್ಮಿಗಳು ದೇವರ ಜೀವನ ಹಳ್ಳಿಯ ಶ್ಯಾಂಪುರ ರೈಲ್ವೆ ಗೇಟ್ ಬಳಿ ಆಟೋ ಚಾಲಕ ವಿನೋದ್ ಅಲಿಯಾಸ್ ಗುಂಡ (30) ಎಂಬಾತನನ್ನು ಕತ್ತುಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮತ್ತೂಂದೆಡೆ ಕೆ.ಆರ್ ಮಾರ್ಕೆಟ್‌ನಲ್ಲಿ ದುಷ್ಕರ್ಮಿ ಗಳು ರಮೇಶ್ (24) ಎಂಬಾತನನ್ನು ಕೊಂದಿದ್ದಾರೆ. ಎರಡೂ ಕೊಲೆ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಡಿ.ಜೆ.ಹಳ್ಳಿ ಹಾಗೂ ಕೆ.ಆರ್ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿಸಿದ್ದಾರೆ.
ಆಟೋಚಾಲಕ ವಿನೋದ್ ಬುಧವಾರ ಬೆಳಗ್ಗೆ ಎಂದಿನಂತೆ ಆಟೋ ಓಡಿಸಿಕೊಂಡಿ ದ್ದರು. 9 ಗಂಟೆ ಸುಮಾರಿಗೆ ಚಲಿಸುತ್ತಿದ್ದ ಆಟೋದಲ್ಲಿಯೇ ಶ್ಯಾಂಪುರ ಗೇಟ್ ಸಮೀಪ ಅವರ ಕತ್ತು ಕುಯ್ದು ಮಾರಕಾಸ್ತ್ರ ಗಳಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಾರ್ವಜನಿಕರ ಕಣ್ಣೆದುರೇ ಈ ಭೀಕರ ಕೊಲೆ ನಡೆದಿದ್ದು, ಸ್ಥಳದಲ್ಲಿದ್ದವರು ಸಹಾ ಯಕ್ಕೆ ಬರುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಹೋದಾಗ ವಿನೋದ್ ಮೃತಪಟ್ಟಿ ದ್ದರು. ಪತ್ನಿ ಹಾಗೂ ಮೂವರು ಮಕ್ಕಳ ಜತೆ ವಿನೋದ್ ಶಾಂಪುರದಲ್ಲಿ ವಾಸವಿ ದ್ದರು. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ವಿನೋದ್‌ಗೆ ಅಪರಾಧ ಹಿನ್ನೆಲೆಯೂ ಇರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಎದೆಗೆ ಇರಿದು ಕೊಲೆ: ಬುಧವಾರ ಮುಂಜಾನೆ ಕೆ.ಆರ್.ಮಾರುಕಟ್ಟೆಯಲ್ಲಿ ಮೂಟೆ ಹೊರುವ ಕೆಲಸ ಮಾಡಿಕೊಂಡಿದ್ದ ರಮೇಶ್ ಎಂಬಾತನ ಎದೆಗೆ ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕಾಟನ್ ಪೇಟೆ ಭಕ್ಷಿ ಗಾರ್ಡನ್ ನಿವಾಸಿ ರಮೇಶ್ ಮೂಟೆ ಹೊರುವ ಕೆಲಸಕ್ಕೆ ಬಂದಾಗ ಹಿಂಬಾಲಿಸಿದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಕೆಲ ದಿನಗಳ ಹಿಂದೆ ರಮೇಶ್ ಮಾರ್ಕೆಟ್‌ನಲ್ಲಿ ಕೆಲವರ ಜತೆ ಜಗಳವಾಡಿದ್ದ ಮಾಹಿತಿಯಿದೆ. ಅವರೇ ಕೊಲೆ ಮಾಡಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.