ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆ
Team Udayavani, Feb 27, 2020, 11:44 AM IST
ಮೈಸೂರು: ಲಘು ಹೃದಯಾಘಾತಕ್ಕೆ ಒಳಗಾದ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರು ಇಲ್ಲಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ.
39ರ ಹರೆಯದ ಅರ್ಜುನ್ ಜನ್ಯ ಲಘು ಹೃದಯಾಘಾತಕ್ಕೆ ಒಳಗಾಗಿ ಬುಧವಾರ ತಡರಾತ್ರಿ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯರಾತ್ರಿ 2 ಗಂಟೆಗೆ ಆಸ್ಪತ್ರೆ ವೈದ್ಯ ಆದಿತ್ಯ ಉಡುಪ ಹಾಗೂ ತಂಡ ಕೊರೊನರಿ ಆ್ಯಂಜಿಯೊಗ್ರಾಂ ಹಾಗೂ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆ ನೆರವೇರಿಸಿದೆ. ಅರ್ಜುನ್ ಜನ್ಯ ಅವರಿಗೆ ಸ್ಟೆಂಟ್ ಅಳವಡಿಸಲಾಗಿದೆ.
ಅರ್ಜುನ್ ಜನ್ಯ ಅವರನ್ನು ಸದ್ಯ ಐಸಿಯುನಿಂದ ವಾರ್ಡ್ ಗೆ ಸ್ಥಳಾಂತರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಪೋಲೊ ಆಸ್ಪತ್ರೆ ಹೆಲ್ತ್ ಕೇರ್ ಸರ್ವೀಸಸ್ ವ್ಯವಸ್ಥಾಪಕ ಸಿ.ಬಿ. ದಕ್ಷ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.