ಹ್ಯಾಪಿ ಫೆಬ್ರವರಿ; ಅಧಿಕ ವರ್ಷ ಅಧಿಕ ದಾಖಲೆ


Team Udayavani, Feb 28, 2020, 5:29 AM IST

ego-37

29 ದಿನ 34 ಸಿನಿಮಾ…!
-ಇದು ಫೆಬ್ರವರಿಯಲ್ಲಿ ಬಿಡುಗಡೆಗೊಂಡ ಚಿತ್ರಗಳ ವಿಷಯ. ಹೌದು. ಜನವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಕಂಡಿದ್ದವು. ಆದರೆ, ಗೆಲುವಿನ ಸಂಖ್ಯೆ ಮಾತ್ರ ಹೇಳ ಹೆಸರಿಲ್ಲದಂತಿತ್ತು. ಫೆಬ್ರವರಿ ತಿಂಗಳು ಬರುತ್ತಿದ್ದಂತೆಯೇ, ಒಂದಷ್ಟು ಹೊಸಬರ ಚಿತ್ರಗಳು ಗೆಲುವಿನ ಗೆರೆ ಮುಟ್ಟಿದ್ದು ಸುಳ್ಳಲ್ಲ. ಹಾಗೆ ನೋಡಿದರೆ, ಫೆಬ್ರವರಿಯಲ್ಲಿ ಬರೋಬ್ಬರಿ 34 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಹಾಗೆ ಲೆಕ್ಕ ಹಾಕಿದರೆ, ದಿನಕ್ಕೊಂದು ಸಿನಿಮಾ ಬಂದ ಹಾಗೆ. ಹಾಗಂತ, ಫೆಬ್ರವರಿ ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ತಕ್ಕಮಟ್ಟಿಗೆ ಒಂದಷ್ಟು ಹೊಸಬರ ಚಿತ್ರಗಳು ಖುಷಿಪಡಿಸಿದವು. ಮಿಕ್ಕಂತೆ ಹಾಗೆ ಬಂದ ಸಿನಿಮಾಗಳು ಹಾಗೆ ಹೊರಟುಬಿಟ್ಟವು.

ಫೆಬ್ರವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಕಾದಿದ್ದವು. ಬಂದ ಸಿನಿಮಾಗಳ ಪೈಕಿ ಕೆಲವು ಚಿತ್ರಗಳು ಒಂದಷ್ಟು ಗೆಲುವಿನ ಮಂದಹಾಸ ಮೂಡಿಸಿದರೆ, ಇನ್ನಷ್ಟು ಚಿತ್ರಗಳು ತಕ್ಕಮಟ್ಟಿಗಿನ ಸಮಾಧಾನಕ್ಕೆ ಕಾರಣವಾದವು. ಮೊದಲ ವಾರ ಒಂಬತ್ತು ಚಿತ್ರಗಳು, ಎರಡನೇ ವಾರ ಎಂಟು ಚಿತ್ರಗಳು, ಮೂರನೇ ವಾರ ಆರು ಸಿನಿಮಾಗಳು ಬಿಡುಗಡೆಯಾಗಿವೆ. ಈ ವಾರ ಲೆಕ್ಕಕ್ಕೆ ಆರು ಸಿನಿಮಾಗಳಿವೆ. ಲೆಕ್ಕಕ್ಕೆ ಸಿಗದ ಬೆರಳೆಣಿಕೆಯಷ್ಟು ಬಿಡುಗಡೆಯಾದ ಸಿನಿಮಾಗಳನ್ನೂ ಸೇರಿಸಿದರೆ, 34 ಪ್ಲಸ್‌ ಚಿತ್ರಗಳಾಗುತ್ತವೆ. ಈ ಪೈಕಿ ಭರವಸೆ ಮೂಡಿಸಿದ ಚಿತ್ರಗಳಿಗೇನೂ ಕಮ್ಮಿ ಇಲ್ಲ. ಸ್ಟಾರ್‌ ಚಿತ್ರಗಳು ಬಂದರೆ, ಹೊಸಬರ ಚಿತ್ರಗಳಿಗೆ ಸ್ವಲ್ಪ ಪೆಟ್ಟು ಬೀಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡು ಒಂದರ ಮೇಲೊಂದರಂತೆ ಬಿಡುಗಡೆ ಕಂಡ ಸಿನಿಮಾಗಳ ಪೈಕಿ ಸದ್ದು ಮಾಡಿದ ಚಿತ್ರಗಳೂ ಸಿಕ್ಕಿವೆ ಎಂಬುದೇ ಸಮಾಧಾನದ ಸಂಗತಿ.

ಫೆಬ್ರವರಿ ಮೊದಲ ವಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಂಬತ್ತು ಚಿತ್ರಗಳು ತೆರೆಗೆ ಅಪ್ಪಳಿಸಿ ಚಿತ್ರರಂಗವನ್ನು ಒಂದಷ್ಟು ರಂಗೇರಿಸಿದವು. ಬಿಡುಗಡೆಯಾದ ಚಿತ್ರಗಳ ಪೈಕಿ “ಜಂಟಲ್‌ವುನ್‌’, “ದಿಯಾ’ ಹಾಗು “ಮಾಲ್ಗುಡಿ ಡೇಸ್‌’ ಚಿತ್ರಗಳ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದವು. ಅದಕ್ಕೂ ಮುನ್ನ ಬಿಡುಗಡೆಯಾಗಿದ್ದ “ಲವ್‌ ಮಾಕ್ಟೇಲ್‌’ ಚಿತ್ರ ಕೂಡ ಈವರೆಗೂ ಪ್ರದರ್ಶನ ಕಾಣುತ್ತಿದೆ ಅನ್ನುವುದು ಖುಷಿಯ ವಿಚಾರ. ಐಪಿಎಲ್‌ ಭಯಕ್ಕೆ ಸಿನಿಮಾಗಳನ್ನು ತರಾತುರಿಯಲ್ಲಿ ಬಿಡುಗಡೆ ಮಾಡಬೇಕು ಎಂಬ ಧಾವಂತದಲ್ಲಿ ಸಾಲು ಸಾಲು ಚಿತ್ರಗಳು ಚಿತ್ರಮಂದಿರವನ್ನು ಸ್ಪರ್ಶಿಸಿದರೂ, ಆ ಪೈಕಿ ಗಟ್ಟಿ ನೆಲೆ ಕಂಡ ಚಿತ್ರಗಳ್ಯಾವೂ ಇಲ್ಲ. ಆದರೆ, ಒಳ್ಳೆಯ ಮೆಚ್ಚುಗೆಗೆ ಪಾತ್ರವಾದವು ಅನ್ನುವುದು ಮಾತ್ರ ಸುಳ್ಳಲ್ಲ.

ಎರಡನೇ ವಾರದಲ್ಲಿ ಎಂಟು ಚಿತ್ರಗಳು ಎಂಟ್ರಿಕೊಟ್ಟವು. ಫೆ.14 ಪ್ರೇಮಿಗಳ ದಿನ ಎಂಬ ಕಾರಣಕ್ಕೆ ಒಂದಷ್ಟು ಹೊಸಬರು ಸಿನಿಮಾ ಬಿಡುಗಡೆಗೆ ಮುಂದಾದರು. ಸಾಲು ಸಾಲು ಸಿನಿಮಾಗಳು ಬಂದರೂ, ಪ್ರೇಕ್ಷಕರ ಕೊರತೆ ಮಾತ್ರ ಕಾಡಿದ್ದು ನಿಜ. ಆದರೂ, ಗೆಲುವಿನ ಭರವಸೆಯಲ್ಲೇ ಬಿಡುಗಡೆಯಾದ ಎಂಟು ಸಿನಿಮಾಗಳ ಪೈಕಿ “ಸಾಗುತ ದೂರ ದೂರ’ ಹಾಗು “ಡೆಮೊ ಪೀಸ್‌’ ಚಿತ್ರಗಳ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಇನ್ನುಳಿದಂತೆ ಆ ವಾರ ಬಂದ ಚಿತ್ರಗಳ್ಯಾವೂ ಸದ್ದು ಮಾಡಲಿಲ್ಲ.

ಆ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ, ಮೂರನೇ ವಾರದಲ್ಲೂ ಸಿನಿಮಾ ಬಿಡುಗಡೆಯ ಸಂಖ್ಯೆ ಕಡಿಮೆ ಆಗಲಿಲ್ಲ. ಒಂದು ಕಡೆ ಚಿತ್ರಮಂದಿರಗಳ ಸಮಸ್ಯೆ, ಇನ್ನೊಂದು ಕಡೆ ಪ್ರೇಕ್ಷಕರ ಕೊರತೆ ಇದ್ದರೂ ಆರು ಚಿತ್ರಗಳು ಪ್ರೇಕ್ಷಕನ ಎದುರು ಬಂದವು. ಆ ಪೈಕಿ “ದುನಿಯಾ’ ಸೂರಿ ನಿರ್ದೇಶನದ ಧನಂಜಯ್‌ ಅಭಿನಯದ “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಹಾಗೆಯೇ, ರಮೇಶ್‌ ಅರವಿಂದ್‌ ಅಭಿನಯದ ಆಕಾಶ್‌ ಶ್ರೀವಾತ್ಸವ್‌ ನಿರ್ದೇಶನದ “ಶಿವಾಜಿ ಸೂರತ್ಕಲ್‌’ ಚಿತ್ರಕ್ಕೂ ಪ್ರಶಂಸೆ ಸಿಕ್ಕಿತು. ಉಳಿದಂತೆ ಬಂದ ಸಿನಿಮಾಗಳು ಸುದ್ದಿಯಾಗಲಿಲ್ಲ.

ಈ ಸಿನಿಮಾ ಬಿಡುಗಡೆಯ ಪರ್ವ ಈ ವಾರಕ್ಕೂ (ಫೆ.28) ಮುಂದುವರೆದಿದೆ ಎಂಬುದನ್ನು ಗಮನಿಸಲೇಬೇಕು. ಹೌದು ಸದ್ಯಕ್ಕೆ ಘೋಷಣೆಯಾಗಿರುವ ಪ್ರಕಾರ ಈ ವಾರ ಕೂಡ ಆರು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ಈ ಸಿನಿಮಾಗಳನ್ನು ಲೆಕ್ಕ ಹಾಕಿದರೆ 29 ಚಿತ್ರಗಳು ಬಿಡುಗಡೆಯಾದಂತೆ.

ಪ್ರಚಾರವಿಲ್ಲದೆಯೂ ಬೆರಳೆಣಿಕೆ ಚಿತ್ರಗಳು ತೆರೆಗೆ ಬಂದಿರುವುದೂ ಉಂಟು. ಅಂದಹಾಗೆ, ಈ ವಾರ “ಮಾಯ ಬಜಾರ್‌’, “ಬಿಚ್ಚುಗತ್ತಿ’, “ಅಸುರ ಸಂಹಾರ’, “ಜಗ್ಗಿ ಜಗನ್ನಾಥ’, “ಆನೆಬಲ’, “ಮಾಯಾ ಕನ್ನಡಿ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಹೊಸಬರ ಚಿತ್ರಗಳೇ ಹೆಚ್ಚು. ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳೆಂದರೆ, ಪುನೀತ್‌ರಾಜಕುಮಾರ್‌ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗಿರುವ “ಮಾಯಾ ಬಜಾರ್‌’ ಹಾಗು ಐತಿಹಾಸಿಕ ಸಿನಿಮಾ “ಬಿಚ್ಚುಗತ್ತಿ’. ಇವುಗಳ ಮೇಲೆ ಸಹಜವಾಗಿಯೇ ಕುತೂಹಲವಿದೆ. ಅದಕ್ಕೆ ಕಾರಣ, ಪುನೀತ್‌ ಬ್ಯಾನರ್‌ನ ಸಿನಿಮಾ ಅಂದಾಗ, ಕಥೆಗೆ ಹೆಚ್ಚು ಒತ್ತು ಕೊಡಲಾಗುತ್ತೆ. ಈಗಾಗಲೇ ಟೀಸರ್‌, ಟ್ರೇಲರ್‌ ಮತ್ತು ಪೋಸ್ಟರ್‌ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದಲ್ಲಿ ವಾಸ್ತವ ಸತ್ಯಾಂಶಗಳಿವೆ. ಇನ್ನು, ಕೋಟೆ ನಾಡು ಚಿತ್ರದುರ್ಗದ ಭರಮಣ್ಣ ನಾಯಕ ಅವರ “ಬಿಚ್ಚುಗತ್ತಿ’ ಸಿನಿಮಾ ಕೂಡ ಸಾಕಷ್ಟು ಭರವಸೆ ಮೂಡಿಸಿದೆ. ಇದು ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿತ ಸಿನಿಮಾ ಅನ್ನುವುದು ಒಂದೆಡೆಯಾದರೆ, ರಾಜವರ್ಧನ್‌ ಅವರ ಮೊದಲ ಐತಿಹಾಸಿಕ ಸಿನಿಮಾ ಎಂಬುದು ಇನ್ನೊಂದೆಡೆ. ಚಿತ್ರದಲ್ಲಿ ದಳವಾಯಿ ಮುದ್ದಣ್ಣ ಅವರ ಕುರಿತ ಕಥೆಯೂ ಮೂಡಿದೆ ಅನ್ನೋದು ಇನ್ನೊಂದು ವಿಶೇಷ. ಹಾಗಾಗಿ ಈ ಎರಡು ಸಿನಿಮಾಗಳು ಈ ವಾರದ ಭರವಸೆ ಎಂಬುದಂತೂ ನಿಜ. ಅದೇನೆ ಇರಲಿ, ಈ ವರ್ಷ ಫೆಬ್ರವರಿ ಅಧಿಕ ವರ್ಷ. ಹಾಗೆಯೇ ಸಿನಿಮಾ ಬಿಡುಗಡೆಯಲ್ಲೂ ಅಧಿಕ ದಾಖಲೆಯಂತೂ ಹೌದು.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.