ಬದುಕು ಬೆಳಗಿಸುವ ವಿಶೇಷ ಜ್ಞಾನ -ವಿಜ್ಞಾನ


Team Udayavani, Feb 28, 2020, 6:22 AM IST

ego-46

ವಿಜ್ಞಾನವೂ ಪಠ್ಯಕ್ಕೆ ಹೋಲಿಸಿದರೆ ಕಬ್ಬಿಣದ ಕಡಲೆ. ಆದರೆ ದೇಶದ ಅಭಿವೃದ್ಧಿಗೆ ಈ ಕ್ಷೇತ್ರದ ಕೊಡುಗೆ ಅಮೋಘ ವಾದುದು. ಈ ಹಿನ್ನೆಲೆಯಲ್ಲಿ ವಿಜ್ಞಾನ ಕ್ಷೇತ್ರ ಮತ್ತು ವಿಜ್ಞಾನಿಗಳನ್ನು ನೆನಪಿಸುವುದೇ ರಾಷ್ಟ್ರೀಯ ವಿಜ್ಞಾನ ದಿನ.

ಈ ಜಗತ್ತಿನ ಪ್ರತಿಯೊಂದರ ಹಿಂದೆಯೂ ವಿಜ್ಞಾನವಿದೆ. ವಿಜ್ಞಾನವಲ್ಲದುದು ಯಾವುದೂ ಇಲ್ಲ. ಪ್ರತಿಯೊಂದಕ್ಕೂ ಕಾರ್ಯ-ಕಾರಣಗಳನ್ನು ಹುಡುಕಿ ಸಾಕ್ಷ್ಯಾಧಾರಗಳ ಸಹಿತ ಅರ್ಥ ಮಾಡಿಕೊಳ್ಳುವುದನ್ನೇ ವಿಜ್ಞಾನ ಎಂದು ಸ್ಥೂಲವಾಗಿ ಕರೆಯಬಹುದು. ಇಂದು ನಾವು ಆಧುನಿಕ ಸೌಲಭ್ಯಗಳನ್ನು ಹೊಂದಿ ಆರಾಮದಾಯಕ ಜೀವನವನ್ನು ಅನುಭವಿಸುತ್ತಿದ್ದೇವೆ ಎಂದಾದರೆ ಅದಕ್ಕೆ ವಿಜ್ಞಾನವೇ ಕಾರಣ. ಸಹಸ್ರಾರು ಸಂಶೋಧನೆಗಳು ಮತ್ತು ವಿಜ್ಞಾನಿಗಳನ್ನು ಸದಾ ನೆನಪಿಡುವ ಸಲುವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

ಭಾರತದ ಮೇರು ವಿಜ್ಞಾನಿ ಸಿ.ವಿ. ರಾಮನ್‌ ಅವರು ಜಗತøಸಿದ್ಧ “ರಾಮನ್‌ ಪರಿಣಾಮ’ವನ್ನು ಸಂಶೋಧಿಸಿದ ದಿನ 1928ರ ಫೆ. 28. ಈ ಚರಿತ್ರಾರ್ಹ ಘಟನೆಯ ಸ್ಮರಣೆಗಾಗಿ ಪ್ರತಿವರ್ಷ ಫೆ. 28ರಂದು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು ಈ ದಿನದಂದು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುತ್ತದೆ.

“ವಿಜ್ಞಾನ ಮತ್ತು ಮಹಿಳೆ’
ಈಗಾಗಲೇ ಅನೇಕ ಮಹಿಳೆಯರು ವಿಜ್ಞಾನ ಕ್ಷೇತದಲ್ಲಿ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ಇನ್ನಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಾರಿ “ವಿಜ್ಞಾನ ಮತ್ತು ಮಹಿಳೆ’ ಎಂಬ ಥೀಮ್‌ ಹೊಂದಲಾಗಿದೆ. ಮಹಿಳಾ ವೈದ್ಯ ವಿಜ್ಞಾನಿ ಗಗನದೀಪ್‌ ಕಾಂಗ್‌ ಈ ಬಗ್ಗೆ “ನ್ಯಾಶನಲ್‌ ಸೈನ್ಸ್‌ ಪಾಪ್ಯುಲರೈಜೇಶನ್‌ ಅವಾರ್ಡ್‌’ ಪ್ರದಾನ ಸಂದರ್ಭದಲ್ಲಿ ಮಾತನಾಡಲಿದ್ದಾರೆ.

ಸಂಶೋಧನೆಗಳು
ಕಳೆದ ದಶಕದಲ್ಲಿ ಭಾರತದಲ್ಲಿ ಕೆಲವು ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ಜಗತ್ತೇ ನಿಬ್ಬೆರಗಾಗುವಂತ ಸಾಧನೆ ಮಾಡಿದ್ದಾರೆ. ಅಂತಹ ಕೆಲವು ಪ್ರಮುಖ ಸಂಶೋಧನೆಗಳು ಇಲ್ಲಿವೆ.

1 ನಾವಿಕ್‌ ಪಥದರ್ಶಕ
ನಾವಿಕ್‌ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೊ) ಅಭಿವೃದ್ಧಿ ಪಡಿಸಿರುವ ಭಾರತದ್ದೇ ಆದ ಪಥದರ್ಶಕ ವ್ಯವಸ್ಥೆಯಾಗಿದೆ. ಭಾರತ ಇದುವರೆಗೆ ಅಮೆರಿಕದ ಗ್ಲೋಬಲ್‌ ಪೋಸಿಷನಿಂಗ್‌ ಸಿಸ್ಟಮ್‌- ಜಿಪಿಎಸ್‌ ಅನ್ನು ಬಳಸುತ್ತಿತ್ತು. ಈಗ ತನ್ನದೇ ಆದ ಸ್ವಂತ ವ್ಯವಸ್ಥೆ ಹೊಂದುವಲ್ಲಿÉ ಯಶಸ್ವಿಯಾಗಿದೆ. ಏಳು ಉಪಗ್ರಹಗಳ ಆಧಾರದ ಮೇಲೆ ಇದು ಕಾರ್ಯನಿರ್ವಹಿಸಲಿದೆ. ಈ ವರ್ಷದಿಂದ ಈ ವ್ಯವಸ್ಥೆಯನ್ನು ಮೊಬೈಲ್‌ ಫೋನ್‌ಗಳಲ್ಲಿ ಅಳವಡಿಸಲಾಗುತ್ತಿದೆ.

2 ಪ್ಲಾಸ್ಟಿಕ್‌ ರಸ್ತೆಗಳು
ವಿವಿಧ ದೇಶಗಳು ಈಗಾಗಲೇ ಪ್ಲಾಸ್ಟಿಕ್‌ನ್ನು ನಿರ್ಬಂಧಿಸಿವೆ. ಆದರೆ ಇದುವರೆಗೆ ಬಳಸಿದ ಪ್ಲಾಸ್ಟಿಕ್‌ ತ್ಯಾಜ್ಯ ವಿಶ್ವಾದ್ಯಂತ ಕೋಟ್ಯಂತರ ಟನ್‌ ಲೆಕ್ಕದಲ್ಲಿದೆ. ಈಗಲೂ ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಿಯಂತ್ರಿಸಲಾಗುತ್ತಿಲ್ಲ. ಇಂತಹ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಮರ್ಪಕವಾಗಿ ಮತ್ತು ಧನಾತ್ಮಕವಾಗಿ ಉಪಯೋಗಿಸಿಕೊಂಡು ಪ್ಲಾಸ್ಟಿಕ್‌ ರಸ್ತೆಗಳನ್ನು ನಿರ್ಮಿಸುವಲ್ಲಿ ಮಧುರೈಯ ರಸಾಯನಶಾಸ್ತ್ರ ಪ್ರಾಧ್ಯಾಪಕ ಪದ್ಮಶ್ರೀ ರಾಜಗೊಪಾಲನ್‌ ವಾಸುದೇವನ್‌ ಯಶಸ್ವಿಯಾಗಿದ್ದಾರೆ. ಇವರು 2002ರಲ್ಲಿಯೇ ಇದನ್ನು ಕಂಡುಹಿಡಿದರೂ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ. ಇವರ ತಂತ್ರಜ್ಞಾನದ ನೆರವಿನಿಂದ ಪ್ರಸ್ತುತ ದೇಶಾದ್ಯಂತ 11 ರಾಜ್ಯಗಳಲ್ಲಿ ಸುಮಾರು 1 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ.

3 ಸೂರ್ಯಜೆನ್‌ ನೀರು ಶುದ್ಧೀಕರಣ ಯಂತ್ರ
ಈ ಯಂತ್ರವು ಸೌರ ಶಕ್ತಿಯನ್ನು ಬಳಸಿಕೊಂಡು ನೀರನ್ನು ಶುದ್ಧೀಕರಣ ಮಾಡುವ ಸಾಮರ್ಥ್ಯ ಹೊಂದಿದೆ. ಈ ಯಂತ್ರವನ್ನು ಐಐಎಸ್‌ಸಿ ಸಂಶೋಧನ ತಂಡ ಅಭಿವೃದ್ಧಿಪಡಿಸಿದೆ. ಸಮುದ್ರ, ನದಿ, ಕೆರೆ, ಬಾವಿ ಅಥವಾ ಸಂಗ್ರಹಿಸಿದ ಮಳೆ ನೀರು -ಹೀಗೆ ಯಾವುದೇ ಮೂಲದಿಂದ ಪಡೆದ ನೀರನ್ನು ಇದು ಶುದ್ಧೀಕರಿಸಬಲ್ಲುದು. ನೀರಿನಲ್ಲಿರುವ ಅನಗತ್ಯ ಅಂಶಗಳನ್ನು ತೆಗೆದುಹಾಕುವ ಮೂಲಕ 3 ಲೀ. ನೀರಿನಿಂದ 1.5 ಲೀ. ಕುಡಿಯಲು ಯೋಗ್ಯವಾದ ನೀರನ್ನು ಈ ಯಂತ್ರ ಒದಗಿಸುತ್ತದೆ.

4 ಸ್ವಯಂ ದುರಸ್ತಿ ರಸ್ತೆಗಳು
ಕೆನಡಾದ ಬ್ರಿಟಿಷ್‌ ಕೊಲಂಬಿಯ ವಿ.ವಿ.ಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ನೇಮ್‌ಕುಮಾರ್‌ ಭಾಟಿಯಾ ಅವರು ಈ ರಸ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಟ್ರಾ ಹೈ-ಸ್ಟ್ರೆಂಥ್‌ ಕಾಂಕ್ರೀಟ್‌ ಮತ್ತು ವಿಶೇಷ ನಾರುಗಳನ್ನು ಬಳಸಿ ಈ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಇದರ ವೈಶಿಷ್ಟé ಏನೆಂದ‌ರೆ ರಸ್ತೆಯಲ್ಲಿ ಬಿರುಕುಗಳು ಉಂಟಾದಾಗ ಮಳೆ ಅಥವಾ ಇನ್ನಿತರ ಸಂದರ್ಭ ಇದರ ಮೇಲೆ ನೀರು ಬಿದ್ದಾಗ ಆ ನೀರನ್ನು ಹೀರಿಕೊಂಡು, ಹೆಚ್ಚಿನ ಪ್ರಮಾಣದಲ್ಲಿ ಸಿಲಿಕೇಟ್‌ಗಳನ್ನು ಉತ್ಪಾದಿಸಿ ತನ್ನಿಂದ ತಾನೇ ಬಿರುಕುಗಳನ್ನು ಮುಚ್ಚುತ್ತದೆ. ಈ ರೀತಿಯ ರಸ್ತೆಯನ್ನು ಮೊದಲ ಬಾರಿಗೆ ಕರ್ನಾಟಕದಲ್ಲಿ ನಿರ್ಮಿಸಲಾಗಿದೆ.

2019 ಇಸ್ರೋದ ಯಶಸ್ವಿ ಉಡಾವಣೆಗಳು
ವಿಜ್ಞಾನ ಮೈಲಿಗಲ್ಲುಗಳು

ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಇಸ್ರೋ ಪಾಲಿಗೆ 2019 ಸ್ಮರಣಾರ್ಹ ವರ್ಷ. 2019ರ ಜು. 22ರಂದು ಚಂದ್ರಯಾನ -2 ಯಶಸ್ವಿಯಾಗಿ ಉಡಾವಣೆಗೊಂಡಿತ್ತು. ಇದರಿಂದಾಗಿ ಪ್ರಪಂಚದ ಗಮನಸೆಳೆದಿದ್ದ ಇಸ್ರೋ ಹತ್ತು ಹಲವು ಮೈಲುಗಲ್ಲುಗಳನ್ನು ಸೃಷ್ಟಿಸಿದೆ.

2019ರ ಅವಧಿಯಲ್ಲಿ ಇಸ್ರೋ ಒಟ್ಟು 13 ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೊಂಡಿದೆ. ಇದರಲ್ಲಿ 6 ರಾಕೆಟ್‌ ಮತ್ತು 7 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಅಲ್ಲದೆ ಏಳು ದೇಶಗಳ 50 ಕೃತಕ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ನೆಲೆಗೊಳಿಸಲಾಗಿದೆ.

ಪಿಎಸ್‌ಎಲ್‌ವಿಸಿ-44 ಮೂಲಕ ಮೈಕ್ರೋಸ್ಯಾಟ್‌- ಆರ್‌ ಮತ್ತು ಕಲಾಂಸ್ಯಾಟ್‌-ವಿ2 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
ಪಿಎಸ್‌ಎಲ್‌ವಿ -ಸಿ 45 ಮೂಲಕ ಎಮಿಸ್ಯಾಟ್‌ ಉಪಗ್ರಹವನ್ನು ಎ. 1ರಂದು ಉಡಾಯಿಸಲಾಯಿತು. ಇದು ಶತ್ರು ದೇಶಗಳ ರಾಡಾರ್‌ಗಳನ್ನು ಪತ್ತೆಹಚ್ಚುವ ವಿಚಕ್ಷಣ ಉಪಗ್ರಹವಾಗಿದೆ.
ಶತ್ರು ರಾಷ್ಟ್ರಗಳ ಮೇಲೆ ಬೇಹುಗಾರಿಕೆ ನಡೆಸುವ ದೃಷ್ಟಿಯಿಂದ ರಿಸ್ಯಾಟ್‌-2ಬಿ ಎಂಬ ಉಪ್ರಗಹವನ್ನು ಮೇ 22ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಪಿಎಸ್‌ಎಲ್‌-ಸಿ 46 ಮೂಲಕ ಉಡಾಯಿಸಲಾಯಿತು.
ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆಯನ್ನು ಜಿಎಸ್‌ಎಲ್‌ವಿ- ಎಂಕೆ3 ಮೂಲಕ ಚಂದ್ರನ ಅಂಗಳಕ್ಕೆ ಉಡಾವಣೆ ಮಾಡಲಾಯಿತು.
ಇಸ್ರೋ ಸಂಸ್ಥೆಯು “ನಾವಿಕ್‌’ ಹೆಸರಿನ ನ್ಯಾವಿಗೇಶನ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು 2019ರಲ್ಲೇ.
ಭೂಮಾಪನ ಮತ್ತು ಭೂ ಪರಿವೀಕ್ಷಣೆಗಾಗಿ ಕಾಟೋìಸ್ಯಾಟ್‌-3 ಉಪಗ್ರಹವನ್ನು ನ. 27ರಂದು ಉಡಾವಣೆ ಮಾಡಲಾಯಿತು.
ಭಾರತೀಯ ಸೇನೆಗೆ ನೆರವಾಗಬಲ್ಲ ರಿಸ್ಯಾಟ್‌-2 ಬಿಆರ್‌1 ಎಂಬ ಸರ್ವೇಕ್ಷಣ ಉಪಗ್ರಹವನ್ನು ಡಿ.11ರಂದು ಉಡಾವಣೆ ಮಾಡಲಾಯಿತು. ಪಿಎಸ್‌ಎಲ್‌ವಿಯ 50ನೇ ಉಡಾವಣೆ ಇದಾಗಿದೆ. ಇದರಿಂದ ಈ ರಾಕೆಟ್‌ ಸುವರ್ಣ ಸಾಧನೆ ಮಾಡಿತು.

ಯುವ ವಿಜ್ಞಾನಿ
ಪ್ರತಾಪ್‌ ಮಂಡ್ಯ
ಡ್ರೋನ್‌ ಪ್ರತಾಪ್‌ ಎಂದೇ ಹೆಸರಾದ ಪ್ರತಾಪ್‌ ಮಂಡ್ಯ ಜಿಲ್ಲೆಯವರು. 22 ವರ್ಷದ ಪ್ರತಾಪ್‌ ತನ್ನ ಸ್ಥಳೀಯ ಡ್ರೋನ್‌ಗಳನ್ನು ಬಳಸಿ ಪ್ರವಾಹಪೀಡಿತ ಪ್ರದೇಶಗಳಿಗೆ ಆಹಾರ ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಒದಗಿಸಿದರು. ಪ್ರತಾಪ್‌ 14ನೆಯ ವಯಸ್ಸಿನಿಂದಲೂ ಡ್ರೋನ್‌ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 600 ಡ್ರೋನ್‌ಗಳನ್ನು ಸ್ವತಃ ನಿರ್ಮಿಸಿದ್ದಾರೆ. ಗಡಿ ರಕ್ಷಣೆಯಲ್ಲಿ ದೂರದರ್ಶನ, ಸಂಚಾರ ನಿರ್ವಹಣೆಗಾಗಿ ಡ್ರೋನ್‌, ಮನುಷ್ಯರನ್ನು ರಕ್ಷಿಸುವಲ್ಲಿ ಯುಎವಿಗಳು, ಡ್ರೋನ್‌ ನೆಟ್‌ವರ್ಕಿಂಗ್‌ನಲ್ಲಿ ಆಟೋ ಪೈಲಟ್‌ ಡ್ರೋನ್‌ಗಳು ಸೇರಿದಂತೆ ಆರು ಪ್ರಮುಖ ಯೋಜನೆಗಳನ್ನು ಅವರು ಈವರೆಗೆ ಪೂರ್ಣಗೊಳಿಸಿದ್ದಾರೆ.

ಡಾ| ಸಿದ್ದೇಶ್‌ ಕಾಮತ್‌
ಡಾ| ಸಿದ್ಧೇಶ್‌ ಕಾಮತ್‌ ಈ ವರ್ಷದ ಮರ್ಕ್‌ ಯಂಗ್‌ ಸೈಂಟಿಸ್ಟ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಧಾರಿತ ಮಾಸ್‌ ಸ್ಪೆಕ್ಟ್ರೋಮೆಟ್ರಿ ಆಧಾರಿತ ಮೆಟಾಬೊಲೊಮಿಕ್ಸ್‌ ಮತ್ತು ಪ್ರೊಟಿಯೋಮಿಕ್ಸ್‌ ತಂತ್ರಗಳ ಜತೆಯಲ್ಲಿ ರಾಸಾಯನಿಕ ಶೋಧಕಗಳನ್ನು ಬಳಸಿಕೊಂಡು ನರ ಮತ್ತು ಪ್ರತಿರಕ್ಷಣ ವ್ಯವಸ್ಥೆಯಲ್ಲಿ ಲಿಪಿಡ್‌ ಸಿಗ್ನಲಿಂಗ್‌ ಮತ್ತು ಚಯಾಪಚಯವನ್ನು ಅಧ್ಯಯನದ ಕುರಿತು ಅವರು ಸಂಶೋಧನೆ ನಡೆಸಿದ್ದಾರೆ.

ಜಾನ್‌ ಮೊಂಡಾಲ್‌
ರಸಾಯನಶಾಸ್ತ್ರ ವಿಭಾಗದಲ್ಲಿ ವಿಜ್ಞಾನಿ ಜಾನ್‌ ಮೊಂಡಾಲ್‌ ‘ಯಂಗ್‌ ಸೈಂಟಿಸ್ಟ್‌ ಅವಾರ್ಡ್‌’ ಪಡೆದುಕೊಂಡಿದ್ದಾರೆ. ಇವರು ಹೈದರಾಬಾದಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಕೆಮಿಕಲ್‌ ಟೆಕ್ನಾಲಜಿಯಲ್ಲಿ ವಿಜ್ಞಾನಿ. ರಾಸಾಯನಿಕ ಕ್ರಿಯೆಗಳ ವೇಗವರ್ಧನೆಯ ಕ್ಷೇತ್ರದಲ್ಲಿ ಅವರು ಕೊಡುಗೆಗಳನ್ನು ನೀಡಿದ್ದಾರೆ. ಮೊಂಡಾಲ್‌ ಪ್ರಸ್ತುತ ತ್ಯಾಜ್ಯ ಅಡುಗೆ ತೈಲಗಳಿಂದ ಮೌಲ್ಯವರ್ಧಿತ ಉತ್ಪನ್ನಗಳು, ಶುದ್ಧ ಇಂಧನ ಉತ್ಪಾದನೆಯ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಗೋಪಾಲ್‌ ಜಿ.
17 ನೇ ವಯಸ್ಸಿಗೆ ಭಾರತದ ಕಿರಿಯ ವಿಜ್ಞಾನಿ ಎನಿಸಿಕೊಂಡವರು ಗೋಪಾಲ್‌ ಜಿ. ಅವರು 10 ಆವಿಷ್ಕಾರ ಗಳನ್ನು ಮಾಡಿ¨ªಾರೆ. ಬಾಳೆಗಿಡದ ಕಾಂಡಗಳಿಂದ ವಿದ್ಯುತ್‌ ಉತ್ಪಾದಿಸುವ ನವೀನ ಆವಿಷ್ಕಾರ ಅವರದು. ಇದು ಬಿಹಾರದ ಭಾಗಲ್ಪುರ ಜಿಲ್ಲೆಯ ನೌಗಚಿಯಾ ಬ್ಲಾಕ್‌ನಲ್ಲಿ ಮನೆಗಳನ್ನು ಬೆಳಗಿಸುತ್ತಿದೆ. ನೌಗಾಚಿ ಯಾದ ಧ್ರುವಗಂಜ್‌ ಗ್ರಾಮದ 17 ವರ್ಷದ ಯುವಕ ಗೋಪಾಲ್‌ ಜೀ ಈ ಸಾಧಕ.

ಡಾ| ಶಾಕ್ಯ ಸಿಂಘಾ ಸೇನ್‌
ರಸಾಯನಶಾಸ್ತ್ರ ವಿಭಾಗದಲ್ಲಿ ಗಮನಾರ್ಹ ಸಂಶೋಧನೆ ನಡೆಸಿದ್ದಕ್ಕಾಗಿ ಪುಣೆಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ವಿಜ್ಞಾನಿ ಡಾ| ಶಾಕ್ಯ ಸಿಂಘಾ ಸೇನ್‌ ಅವರಿಗೆ ಯಂಗ್‌ ಸೈಂಟಿಸ್ಟ್‌ ಪ್ರಶಸ್ತಿ ನೀಡಲಾಗಿದೆ. ಸೇನ್‌ ರಸಾಯನಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಪ್ಲಾಟಿನಂ, ಪಲೋಡಿಯಮ…, ಇರಿಡಿಯಮ್‌ ಇತ್ಯಾದಿ ಲೋಹಗಳು ತುಂಬಾ ದುಬಾರಿ ಮತ್ತು ಭೂಮಿಯಲ್ಲಿ ಅವುಗಳ ಲಭ್ಯತೆ ಬಹಳ ಕಡಿಮೆ. ಇವುಗಳು ಶೀಘ್ರದಲ್ಲೇ ಮುಗಿಯುವ ಸಾಧ್ಯತೆ ಇರುವುದರಿಂದ ಅವುಗಳನ್ನು ಹೆಚ್ಚು ಬಳಸಲಾಗುವುದಿಲ್ಲ. ಸಮೃದ್ಧ ಲೋಹಗಳಾದ ಸಿಲಿಕಾನ್‌, ಕ್ಯಾಲ್ಸಿಯಂನೊಂದಿಗೆ ಅದೇ ರಾಸಾಯನಿಕ ರೂಪಾಂತರವನ್ನು ಮಾಡಲು ಇವರು ಸಂಶೋಧನೆ ನಡೆಸುತ್ತಿದ್ದಾರೆ.

  ಶಿವ ಸ್ಥಾವರಮಠ, ಧನ್ಯಶ್ರೀ ಬೋಳಿಯಾರ್‌, ಪೂರ್ಣಿಮಾ ಪೆರ್ಣಂಕಿಲ, ಶಿವಾನಂದ ಎಚ್‌.
ನಿರ್ವಹಣೆ: ಮಂಗಳೂರು ಸುದಿನ ಡೆಸ್ಕ್

ಟಾಪ್ ನ್ಯೂಸ್

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

ಬೆಳಗಾವಿ:ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.