ಮಿಡತೆ ಸಂಹಾರಕ್ಕೆ ಬಾತುಕೋಳಿ ಬ್ರಹ್ಮಾಸ್ತ್ರ
Team Udayavani, Feb 28, 2020, 6:17 AM IST
ಬೀಜಿಂಗ್: ಮಿಡತೆಗಳ ಹಾವಳಿ ಪಾಕಿಸ್ಥಾನವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಇವುಗಳ ಸಂಹಾರಕ್ಕೆ ಬಾತುಕೋಳಿಗಳ ಪಡೆಗಳನ್ನು ಕಳುಹಿ ಸಲು ಚೀನವು ಸಿದ್ಧತೆ ನಡೆಸುತ್ತಿದೆ. ಇದೇ ವರ್ಷದ ಮಧ್ಯಭಾಗದಲ್ಲಿ ಒಂದು ಲಕ್ಷ ಬಾತುಕೋಳಿಗಳನ್ನು ಚೀನದಿಂದ ಪಾಕಿಸ್ಥಾನಕ್ಕೆ ರವಾನಿಸಲಾಗುತ್ತದೆ ಎಂದು ಚೀನದ ಸ್ಥಳೀಯ ಮಾಧ್ಯಮ ವೊಂದರಲ್ಲಿ ವರದಿಯಾಗಿದೆ. ಆದರೆ ಸರಕಾರ ಇದನ್ನು ಖಚಿತಪಡಿಸಿಲ್ಲ.
ಮಿಡತೆಗಳ ನಿಯಂತ್ರಣಕ್ಕೆ ಬಾತುಕೋಳಿ ಅತ್ಯುತ್ತಮ ಜೈವಿಕ ಅಸ್ತ್ರವಾಗಿದೆ. ಈ ಒಂದು ಬಾತುಕೋಳಿ ದಿನಕ್ಕೆ ಕನಿಷ್ಠ 200 ಮಿಡತೆಗಳನ್ನು ತಿನ್ನುವ ಸಾಮರ್ಥ್ಯ ಹೊಂದಿದೆ. ಚೀನ ಮತ್ತು ಭಾರತಕ್ಕೆ ಹೊಂದಿ ಕೊಂಡಿರುವ ಪಾಕ್ ಭಾಗಗಳಲ್ಲಿ ಮಿಡತೆ ಉಪಟಳದಿಂದ ಭಾರೀ ಬೆಳೆ ನಷ್ಟವಾಗಿದ್ದು, ಆಹಾರ ಮತ್ತು ಆರ್ಥಿಕತೆಗೆ ಭಾರೀ ಪೆಟ್ಟು ಬೀಳುತ್ತಿದೆ. ಮಿಡತೆ ಹಾವಳಿ ವಿಪರೀತವಾಗಿರು ವುದರಿಂದ ಪಾಕಿಸ್ಥಾನ ಸರಕಾರ ಇದನ್ನು ತುರ್ತು ಪರಿಸ್ಥಿತಿ ಎಂದು ಘೋಷಿಸಿತ್ತು. ರಾಜಸ್ಥಾನದಲ್ಲೂ ಮಿಡತೆಗಳು ದಾಳಿ ಮಾಡಿ ಬೆಳೆ ನಾಶಪಡಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.