ಕೊಲೆ ಯತ್ನ: ದಕ್ಷಿಣ ಕನ್ನಡ ಖಾಝಿ ದೂರು
ಶಾಂತಿ, ಸೌಹಾರ್ದ ಕೆಡಿಸುವ ಯತ್ನ? ವಿದೇಶಗಳಿಂದ ಬೆದರಿಕೆ ಕರೆ
Team Udayavani, Feb 28, 2020, 1:25 AM IST
ಮಂಗಳೂರು: ದಕ್ಷಿಣ ಕನ್ನಡದ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ಕೊಲೆ ಯತ್ನ ನಡೆದಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ. 8ರಂದು ನಡೆದ ಘಟನೆಯೊಂದು ಈ ಆರೋಪಕ್ಕೆ ಪೂರಕವಾಗಿದೆ ಎಂದು ಖಾಝಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕದ್ರಿ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳನ್ವಯ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
“ಫೆ. 8ರಂದು ಸಂಜೆ 7 ಗಂಟೆಗೆ ಹಳೆಯಂಗಡಿಯ ಬಳ್ಳೂರಿಗೆ ಪ್ರವಚನ ನೀಡಲು ಹೋಗಿದ್ದೆ. ವಾಹನ ನಿಲುಗಡೆ ಸ್ಥಳದಲ್ಲಿ ಅಥವಾ ಪ್ರವಚನದ ಬಳಿಕ ಸಂಚರಿಸಿದ ಮಾರ್ಗದಲ್ಲಿ ನನ್ನ ಇನ್ನೋವಾ ಕಾರಿನ ಟೈರಿಗೆ ಕಬ್ಬಿಣದ ಮೊನಚಾದ ತುಂಡನ್ನು ಹಾಕಿ ಪ್ರಯಾಣದ ವೇಳೆ ಕಾರು ಅಪಘಾತವಾಗುವಂತೆ ಸಂಚು ರೂಪಿಸಿ ಕೊಲೆಗೆ ಯತ್ನಿಸಲಾಗಿತ್ತು. ಪ್ರವಚನ ಮುಗಿದು ರಾತ್ರಿ 10.10ಕ್ಕೆ ಕಾರಿನಲ್ಲಿ ಚಾಲಕ ಸೈಫ್ ಜತೆ ಕಾಸರಗೋಡಿಗೆ ಹೊರಟಿದ್ದೆ. 10.30ಕ್ಕೆ ನಂತೂರು ಜಂಕ್ಷನ್ ತಲುಪಿದಾಗ ಹಿಂಬದಿ ಟೈರ್ ಪಂಕ್ಚರ್ ಆಗಿದ್ದು, ಕೂಡಲೇ ಬದಲಿಸಿದೆವು. ಅಷ್ಟರಲ್ಲಿ ಬೈಕಿನಲ್ಲಿ ಬಂದ ಅಪರಿಚಿತನೊಬ್ಬ ನಮ್ಮ ಜತೆ ಮಾತನಾಡಿದ್ದ. ಬಳಿಕ ಪ್ರಯಾಣ ಮುಂದುವರಿಸಿದೆವು. ಪಂಕ್ಚರಾದ ಟೈರನ್ನು ಫೆ. 10ರಂದು ಕಾಸರಗೋಡಿನಲ್ಲಿ ಸರಿ ಮಾಡಿಸಲು ಹೋದಾಗ ಟೈರ್‌ನಲ್ಲಿ ಚೂಪಾದ ಕಬ್ಬಿಣದ ತುಂಡು ಪತ್ತೆಯಾಗಿದೆ’.
“ಪ್ರವಚನಗಳಲ್ಲಿ ನಾನು ಎಲ್ಲ ಜನರು ಮತ್ತು ಜನಾಂಗದವರು ಸೌಹಾರ್ದ ದಿಂದ ಬಾಳ್ವೆ ನಡೆಸುವಂತೆ ಉಪದೇಶ ಮಾಡುತ್ತಿದ್ದೇನೆ. ಎನ್‌ಆರ್‌ಸಿ ವಿಚಾರ ದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುತ್ತೇನೆ. ನನ್ನ ಭಾಷಣದ ಧ್ವನಿ ಮುದ್ರಿಕೆಯನ್ನು ಕಾಸರಗೋಡಿನ ಒಂದು ವಾಹಿನಿಯವರು ತಿರುಚಿ ಪ್ರಸಾರ ಮಾಡಿದ್ದು, ಈ ಬಗ್ಗೆ ಉರ್ವ ಠಾಣೆ ಯಲ್ಲಿ ಕೇಸು ದಾಖಲಿಸಿದ್ದೇನೆ. ಆ ಬಳಿಕ ಕೆಲವು ಅಪರಿಚಿತರು ನನ್ನನ್ನು ಹಿಂಬಾ ಲಿಸುತ್ತಿರುವ ಬಗ್ಗೆ ಗುಮಾನಿ ಇತ್ತು’.
“ಫೆ. 8ರಂದು ರಾತ್ರಿ ನನ್ನ ಕಾರನ್ನು ನಿಲುಗಡೆ ಮಾಡಿರುವ ವೇಳೆ ಅಥವಾ ಹಳೆಯಂಗಡಿಯಿಂದ ಕಾಸರಗೋಡಿಗೆ ಸಂಚರಿಸುವ ದಾರಿಯಲ್ಲಿ ಉದ್ದೇಶ ಪೂರ್ವಕವಾಗಿ ಕಬ್ಬಿಣದ ಮೊನಚಾದ ತುಂಡನ್ನು ಹಾಕಿ ಕಾರು ಅಪಘಾತಕ್ಕೆ ಈಡಾಗಿ ನನ್ನ ಜೀವಕ್ಕೆ ಹಾನಿ ಉಂಟು ಮಾಡುವ ಅಥವಾ ಕಾರು ಸಂಚರಿಸದಂತೆ ತಡೆ ಉಂಟು ಮಾಡಿ ನನ್ನ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಅನುಮಾನವಿದೆ’.
“ನನ್ನ ಜೀವಕ್ಕೆ ಹಾನಿ ಮಾಡಿ ವಿವಿಧ ಕೋಮುಗಳ ಸಾಮರಸ್ಯ ಕದಡುವ ಪ್ರಯತ್ನ ಇದಾಗಿದೆ. ಈ ಸಂಚಿನ ಹಿಂದೆ ಸ್ಥಳೀಯ, ಅಂತಾರಾಜ್ಯದ ಹಾಗೂ ಅಂತಾರಾಷ್ಟ್ರೀಯ ವ್ಯಕ್ತಿಗಳ ಬಗ್ಗೆ ಸಂಶಯವಿದೆ. ಅಂಥವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಖಾಝಿ ಒತ್ತಾಯಿಸಿದ್ದಾರೆ.
ವಿದೇಶೀ ಕರೆಗಳು
ಖಾಝಿ ಅವರಿಗೆ ಕೆಲವು ಸಮಯದಿಂದ ವಿದೇಶೀ ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೆ ಅವರು ಓಡಾಡುವ ಕಾರಿನ ಟೈರಿಗೆ ಕಬ್ಬಿಣದ ಚೂಪಾದ ತುಂಡುಗಳನ್ನಿಟ್ಟ ಘಟನೆ ಈ ಹಿಂದೆಯೂ ಎರಡು ಬಾರಿ ನಡೆದಿತ್ತು. ಆ ಹಿನ್ನೆಲೆಯಲ್ಲಿ ಇದೀಗ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮಸ್ಜಿದ್ ಝೀನತ್ ಬಕ್ಷ್ ನ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ತಿಳಿಸಿದ್ದಾರೆ.
ಖಾಝಿ ಅವರು ಕೊಲೆ ಬೆದರಿಕೆ ಬಗ್ಗೆ ದೂರು ನೀಡಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದೆ.
– ಡಾ| ಹರ್ಷ ಪಿ. ಎಸ್., ಪೊಲೀಸ್ ಕಮಿಷನರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.