ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೇಲೆ ಎಫ್‌ಐಆರ್ ದಾಖಲು
Team Udayavani, Feb 28, 2020, 3:39 PM IST
ಬ್ಯಾಡಗಿ: 2019-20ನೇ ಸಾಲಿನ ಅತೀವೃಷ್ಟಿ ಪರಿಹಾರ ವಿತರಣೆಯಲ್ಲಿ ಲೋಪದೋಷ ಆರೋಪದಡಿ ಸ್ಥಳೀಯ ತಹಶೀಲ್ದಾರ್ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಸಹಾಯಕ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರರಿಂದ ನಿಯೋಜಿಸಲ್ಪಟ್ಟ ಆಪರೇಟರ್‌ಗಳು ಹಾಗೂ ಅನರ್ಹ ಫಲಾನುಭವಿಗಳ ವಿರುದ್ಧ ಅಪರ್ ಜಿಲ್ಲಾಧಿಕಾರಿ ಯೋಗೀಶ್ವರ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ 406, 408, 409, 420, 465 ಕಲಂ ವಿಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ತನಿಖಾಧಿಕಾರಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಎಚ್.ಎಸ್. ಕಂಬಳಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ?: ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತೀವೃಷ್ಟಿ ಪರಿಹಾರ ವಿತರಣೆ ಮನಬಂದವರ ಖಾತೆಗೆ ಹಣ ಜಮೆ ಮಾಡಲಾದ ಪ್ರಕರಣಗಳು ಬಯಲಾಗಿದ್ದವು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೆಳಗಾವಿ ವಿಭಾಗೀಯ ಆಯುಕ್ತರಿಗೆ ಲಿಖೀತ ದೂರು ನೀಡಿ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿತ್ತು.
ಪ್ರಕರಣದ ಬೆನ್ನುಹತ್ತಿರುವ ಜಿಲ್ಲಾಡಳಿತ ಸಂಬಂಧಿಸಿದ ತಾಲೂಕಗಳ ತಹಶೀಲ್ದಾರ್ ಸೇರಿದಂತೆ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಿಸಿದೆ. ಎಫ್‌ಐಆರ್ ನಲ್ಲಿ ಆರೋಪಿಗಳ ಸಂಪೂರ್ಣ ಹೆಸರು, ಲಿಂಗ, ಜಾತಿ, ವಯಸ್ಸು, ಘಟನೆ ನಡೆದ ದಿನಾಂಕ ಸಮಯ ಇದ್ಯಾವುದೂ ನಮೂದಾಗಿಲ್ಲ. ಹೀಗಾಗಿ ಸದರಿ ಎಫ್‌ಐಆರ್ ಹಿಟ್ ಆ್ಯಂಡ್ ರನ್‌ನಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗದೇ ಇದ್ದವರಿಗೂ ಸಹ ಖಂಡಿತವಾಗಿಯೂ ಎಫ್ ಐಆರ್ ಬಿಸಿ ಮುಟ್ಟಲಿದೆ.
ತಲೆ ಮರಿಸಿಕೊಂಡ ಸಿಬ್ಬಂದಿ: ಇತ್ತ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತಹಶೀಲ್ದಾರ್ ಸೇರಿದಂತೆ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಹಾಯಕರು ಕಂಪ್ಯೂಟರ್ ಆಪರೇಟರ್‌ಗಳು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಸಿಬ್ಬಂದಿಗಳಿಲ್ಲದೇ ತಹಶೀಲ್ದಾರ್ ಕಚೇರಿ ಬಿಕೋ ಎನ್ನುತ್ತಿವೆ. ಕೆಲವರು ಜಾಮೀನು ಅರ್ಜಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಲು ಮುಂದಾಗಿದ್ದಾರೆ. ಇನ್ನೂ ಕೆಲವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಅಂತೂ ಎಫ್‌ಐಆರ್ ಮಾತ್ರ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.
ತಪ್ಪಿಸಿಕೊಳ್ಳದಿರಲಿ ತಪ್ಪಿತಸ್ಥರು
ಘಟನೆ ಕುರಿತು ವಿಷಾದ ವ್ಯಕ್ತಪಡಿಸುತ್ತೇವೆ. ತಪ್ಪಿತಸ್ಥರಿಗಷ್ಟೇ ಬಿಸಿ ಮುಟ್ಟಿಸುವ ಕಾರ್ಯವಾಗಬೇಕು. ಯಾವುದೇ ಕಾರಣಕ್ಕೂ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು. ಇಲಾಖೆಯಡಿ ತನಿಖೆ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಅದಾಗ್ಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಆಶ್ಚರ್ಯದ ಸಂಗತಿ. ದೋಷಾರೋಪಣೆ ಪಟ್ಟಿ ಸಲ್ಲಿಸುವ ಮುನ್ನ ಸಿಬ್ಬಂದಿಗಳಿಗೆ ಒದಗಿಸಿದ ತಂತ್ರಾಂಶದಲ್ಲಿನ ಲೋಪದೋಷ ಪರಿಗಣಿಸುವ ಕೆಲಸ ಪೊಲೀಸರಿಂದಾಗಬೇಕು. ರಾಮಣ್ಣ ಕೆಂಚಳ್ಳೇರ,
ರಾಜ್ಯ ರೈತ ಸಂಘ ಹಾಗೂ
ಹಸಿರುಸೇನೆ ಜಿಲ್ಲಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.